ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಮಧ್ಯೆ ಮದಗಜಗಳ ಮಹಾ ಕಾಳಗ ಏರ್ಪಟ್ಟಿದ್ದು, ಇಂದಿನ ರಿಸಲ್ಟ್ ತೀವ್ರ ಕುತೂಹಲ ಕೆರಳಿಸಿದೆ. ಈ ಮಧ್ಯೆ, ಸಮೀಕ್ಷೆಗಳು ಮಹಾಘಟಬಂಧನ್ ಗೆಲ್ಲೋ ಹಾಟ್ ಫೇವರಿಟ್ ಅಂತಾ ಭವಿಷ್ಯ ನುಡಿದಿವೆ.
ಟಿವಿ9 ಭಾರತ್ವರ್ಷ್ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಾರ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಬಿಹಾರದಲ್ಲಿ 110 ರಿಂದ 120 ಸ್ಥಾನಗಳನ್ನ ಗೆಲ್ಲೋ ಸಾಧ್ಯತೆ ಇದೆ. ಇನ್ನು ಮಹಾಮೈತ್ರಿ 115 ರಿಂದ 125 ಸ್ಥಾನಗಳನ್ನ ಗೆಲ್ಲೋ ಸಾಧ್ಯತೆ ಇದೆ. ಚಿರಾಗ್ ಪಾಸ್ವಾನ್ ನಾಯಕತ್ವದ ಎಲ್ಜೆಪಿಗೆ 3ರಿಂದ 5 ಸ್ಥಾನ, ಇತರರು 10 ರಿಂದ 15 ಸ್ಥಾನ ಗೆಲ್ಲೋ ಸಾಧ್ಯತೆ ಇದೆ.
ಸಮೀಕ್ಷೆಗಳು ಏನೇ ಹೇಳಿರಲಿ, ಜನರು ಯಾರನ್ನ ಆಯ್ಕೆ ಮಾಡಿದ್ದಾರೆ ಅನ್ನೋದು ಇಂದಿನ ರಿಸಲ್ಟ್ನಲ್ಲಿ ಗೊತ್ತಾಗಲಿದೆ. ಇಂದು ಬಿಹಾರದಲ್ಲಿ ಯಾವುದೇ ಫಲಿತಾಂಶ ಬಂದರೂ ರಾಷ್ಟ್ರ ರಾಜಕೀಯದ ಮೇಲೆ ಅದು ಪ್ರಬಲ ಪರಿಣಾಮ ಬೀರೋದಂತೂ ಸುಳ್ಳಲ್ಲ.