ಬೆಂಗಳೂರು: ಕಳೆದ 8ತಿಂಗಳಿಂದ ತಿಗಣೆಯಂತೆ ರಕ್ತ ಹೀರಿ ಹಿಂಸಿಸುತ್ತಿರೋ ಕೊರೊನಾ ವೈರಸ್ ಅಟ್ಟಹಾಸ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಈ ಮಹಾಮಾರಿ ಬಗ್ಗೆ ಮತ್ತಷ್ಟು ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರ ಬೀಳುತ್ತಿವೆ. ಈ ಬರುತ್ತಿರುವ ವರದಿಗಳು ಜನರಲ್ಲಿ ನಡುಕ ಹುಟ್ಟಿಸುವಂತಿದೆ.
ಕೊರೊನಾ ಸೋಂಕಿಗಿಂತ ಮುಂಚೆ ಆರೋಗ್ಯ ಸಮಸ್ಯೆಗಳಿದ್ರೆ ಶಾಶ್ವತವಾಗಿ ಅನಾರೋಗ್ಯವಾಗೋದು ಗ್ಯಾರೆಂಟಿಯಂತೆ. ಹೃದಯ ಸಂಬಂಧಿ, ಶ್ವಾಸಕೋಶದಲ್ಲಿ ಸಮಸ್ಯೆ ಇದ್ದವರಿಗೆ ಕೋವಿಡ್ ಪಾಸಿಟಿವ್ ಬಂದ್ರೆ ಕೊರೊನಾ ಚಿಕಿತ್ಸೆ ನೀಡುವ ವೇಳೆ ವೈದ್ಯರಿಗೆ ತಪ್ಪದೆ ಮಾಹಿತಿ ನೀಡಬೇಕು.
ಇಲ್ಲಾಂದ್ರೆ ಕೊರೊನಾ ಸೋಂಕಿಗೆ ನೀಡುವ ಮೆಡಿಸಿನ್ ನಿಂದ ಆರೋಗ್ಯ ಸಮಸ್ಯೆಗಳು ಕಾಡುತಂತೆ. ಹಾಗಿದ್ರೆ ಸೋಂಕಿತ ರೋಗಿಗಳ ಜೀವಕ್ಕೆ ಇಮ್ಮ್ಯೂನಿಟಿ ಹೆಚ್ಚಿಸುವ ಮೆಡಿಸಿನ್ಸ್ ಮಾರಕವಾಯ್ತಾ? ಕೋವಿಡ್ ವಿರುದ್ಧ ಹೋರಾಡಲು ನೀಡುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳ ಬಗ್ಗೆಯೇ ಅನುಮಾನ ಶುರುವಾಗಿದೆ.
ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿಸುತ್ತೆ ಕೊರೊನಾ ಮೆಡಿಸಿನ್ಸ್?
ಸೋಂಕು ತಗುಲಿ ವಾಸಿಯಾದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಲಿದೆಯಂತೆ. ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿಸಲು ರೋಗ ನಿರೋಧಕ ಔಷಧಗಳು ಕಾರಣವಾgಉತ್ತಿವೆಯಂತೆ. ಕೊರೊನಾ ಸೋಂಕು ವಾಸಿಯಾಗಿ ನೆಗೆಟಿವ್ ಬಂದ ಬಳಿಕ ಮತ್ತೊಂದು ಕಂಟಕ ಎದುರಾಗುತ್ತಂತೆ. ಕೊರೊನಾ ಚಿಕಿತ್ಸೆ ಪಡೆದು ವಾಸಿಯಾಗಿ ಮನೆಗೆ ಬಂದ 10 ದಿನಗಳ ಬಳಿಕ ಮೆಡಿಸಿನ್ಸ್ ಸೈಡ್ ಎಫೆಕ್ಟ್ ಆಗುವುದು ಅರಿವಾಗುತ್ತೆ. ಕಾಲಿನ ನರಗಳಲ್ಲಿ ರಕ್ತ ಹೆಪ್ಪುಗಟ್ಟಲು ಕೋವಿಡ್ ಸೋಂಕಿಗೆ ಪಡೆದ ಮೆಡಿಸಿನ್ಸ್ ಕಾರಣವಾಗುತ್ತಿದೆ ಎಂದು ಸೋಂಕಿನಿಂದ ಗುಣಮುಖರಾದ 55 ವರ್ಷದ ವ್ಯಕ್ತಿ ಹೇಳಿಕೊಂಡಿದ್ದರೆ. ಆದರೆ ಈ ಬಗ್ಗೆ ವೈದ್ಯರಿಂದ ಅಥವಾ ತಜ್ಞರಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಈ ಕುರಿತು ಗಂಭೀರ ಅನಾಲಿಸಿಸ್ ನಡೆಯ ಬೇಕಿದೆ. ಕೋವಿಡ್ ನಿವಾರಣೆಗೆ ನೀಡ್ತಿದ್ದ ಔಷಧಿಗಳ ಸೈಡ್ ಎಫೆಕ್ಟ್ ಕುರಿತು ಆರೋಗ್ಯ ಇಲಾಖೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹಾಗಾದ್ರೆ ಕೊರೊನಾ ಸಾವುಗಳ ಏರಿಕೆಗೆ ಇದೂ ಕೂಡ ಕಾರಣವಾಗುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ.