ಬೆಂಗಳೂರು- ಬೆಂಗಳೂರಲ್ಲಿ ಹಂಗೇನಿಲ್ಲ,ಎಲ್ಲಾರೂ ಸೇರ್ಕೊಂಡು ಮನವಿ ಕೊಡ್ತಾರೆ ಅನ್ನೋದು,ಪೋಟೋ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ.
ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಆಡಳಿತ ಮಂಡಳಿಯ ನಿಯೋಗ ಇಂದು,ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಸಹಕಾರ,ಮತ್ತು ಎಪಿಎಂಸಿ ಸಚಿವ ಟಿ.ಸೋಮಸೇಖರ್ ಅವರು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತು.
ಬೆಳಗಾವಿ ಎಪಿಎಂಸಿಯ ಬಾಕಿ ಉಳಿದಿರುವ ಆರ್ ಡಿ ಪಿ ಯೋಜನೆಯ 15 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು,ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿಗಾಗಿ,ಹೆಚ್ಚುವರಿಯಾಗಿ 15 ಕೋಟಿ ರೂ ಅನುದಾನ ನೀಡಬೇಕೆಂದು ನಿಯೋಗ ಸಚಿವರಲ್ಲಿ ಮನವಿ ಮಾಡಿಕೊಂಡಿತು.
ಬೆಳಗಾವಿ ಎಪಿಎಂಸಿ ಆವರಣದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿಕಾರರು ಒಂದು ಕೋಟಿ ರೂ ವರೆಗೆ ಮಳಿಗೆಗಳನ್ನು ಖರೀಧಿ ಮಾಡಿದ್ದಾರೆ,ಕೋವೀಡ್ ಹಿನ್ನಲೆಯಲ್ಲಿ ಅವರಿಗೆ ಕಂತು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ,ಐದು ವರ್ಷಗಳವರೆಗೆ ಕಂತು ತುಂಬುವ ಅವಧಿ ನೀಡುವಂತೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಬೆಳಗಾವಿಯ ಎಪಿಎಂಸಿ ನಿಯೋಗ ಸಚಿವ ಟಿ.ಸೋಮಶೇಖರ ಅವರಲ್ಲಿ ಮನವಿ ಮಾಡಿಕೊಂಡಿತು.
ಬೆಳಗಾವಿ ಎಪಿಎಂಸಿ ಅದ್ಯಕ್ಷ ಯುವರಾಜ ಕದಂ,ಲಕ್ಷ್ಮೀ ಹೆಬ್ಬಾಳಕರ ,ಸುಧೀರ ಗಡ್ಡೆ ,ಯುವ ಕಾಂಗ್ರೆಸ್ ಮುಖಂಡ ತೌಸೀಫ್ ಫನೀಬಂದ್, ಬೆಳಗಾವಿ ತಾಪಂ ಸದಸ್ಯ ನೀಲೇಶ್ ಚಂದಗಡಕರ,ಉಪಸ್ಥಿತರಿದ್ದರು.