Breaking News

ಐತಿಹಾಸಿಕ ದೇಗುಲ. ವರ್ಷದ ಹನ್ನೆರಡು ತಿಂಗಳು ಆ ದೇಗುಲದ ಗುಹೆಯಲ್ಲಿ ನೀರು ತುಂಬಿ ತುಳುಕುತ್ತಾ ಇತ್ತು.

Spread the love

ಬೀದರ್: ಅದು ಐತಿಹಾಸಿಕ ದೇಗುಲ. ವರ್ಷದ ಹನ್ನೆರಡು ತಿಂಗಳು ಆ ದೇಗುಲದ ಗುಹೆಯಲ್ಲಿ ನೀರು ತುಂಬಿ ತುಳುಕುತ್ತಾ ಇತ್ತು. ನೀರಿದ್ರಷ್ಟೇ ಆ ದೇಗುಲದ ಒಳಗೆ ಹೋಗಿ ಭಕ್ತರು ದರ್ಶನ ಪಡೆಯಬಹುದು. ಆದ್ರೆ ಈಗ ದೇಗುಲಕ್ಕೆ ಜಲಕಂಟಕ ಎದುರಾಗಿದೆ.

ಐತಿಹಾಸಿಕ ಉಗ್ರನರಸಿಂಹ ದೇವಸ್ಥಾನ. ಬೀದರ್ ಜಿಲ್ಲೆಯಲ್ಲಿರುವ ಈ ಐತಿಹಾಸಿಕ ದೇಗುಲ ಸುಮಾರು 1200ವರ್ಷಗಳಷ್ಟು ಹಳೆಯದಾದ ಪುರಾತನ ದೇವಸ್ಥಾನ.

 ಈ ದೇವಸ್ಥಾನದ ವಿಶೇಷ ಅಂದ್ರೆ ಸುಮಾರು ಮುನ್ನೂರು ಮೀಟರ್ ಉದ್ದದ ಎದೆ ಎತ್ತರದ ನೀರಿನಲ್ಲಿ ಸಾಗಿ ದರ್ಶನ ಪಡೆಯಬೇಕು.

ಮಳೆಗಾಲ, ಚಳಿಗಾಲ, ಬೇಸಿಗೆಕಾಲದಲ್ಲಿ ಇಲ್ಲಿ ನೀರು ಬತ್ತಿದ ಉದಾಹರಣೆಯೇ ಇಲ್ಲ. ಆದ್ರೆ ಕಳೆದೆರಡು ವರ್ಷಗಳಿಂದ ದೇಗುಲದ ಗುಹೆಯಲ್ಲಿ ನೀರು ಬತ್ತಿದೆ. ಪರಿಣಾಮ ದೇವರ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಹೀಗಾಗಿ ಜನ ಹೊರಗಿನಿಂದಲೇ ಉಗ್ರನರಸಿಂಹ ಸ್ವಾಮಿಯ ದರ್ಶನ ಮಾಡಿಕೊಂಡು ಹೋಗುವಂತಹ ಸ್ಥಿತಿ ಎದುರಾಗಿದೆ.

ದೇವಸ್ಥಾನದ ಸುತ್ತಮುತ್ತ ಅನಧಿಕೃತವಾಗಿ ಮನೆಗಳು ತಲೆ ಎತ್ತಿವೆ. ಕಾನೂನು ಬಾಹಿರವಾಗಿ ನೂರಾರು ಬೋರ್‌ವೆಲ್, ಬಾವಿಗಳನ್ನ ತೋಡಲಾಗಿದೆ. ಪರಿಣಾಮ ದೇವಾಲಯದ ಗುಹೆಗೆ ಬರುತ್ತಿದ್ದ ನೀರು ನಿಂತಿದೆಯಂತೆ. ಜಿಲ್ಲಾಡಳಿತ ಎಚ್ಚೆತ್ತು ನೀರು ಬಾರದಿರುವುದಕ್ಕೆ ಕಾರಣ ಹುಡುಕಿ ಸಮೀಪದಿಂದ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಬೇಕು ಅಂತ ಭಕ್ತರು ಬೇಡಿಕೊಂಡಿದ್ದಾರೆ.

ಇಂತಹ ಐತಿಹಾಸಿಕ ದೇಗುಲ ಪ್ರವೇಶಕ್ಕೆ ಅವಕಾಶ ಸಿಗುತ್ತಿಲ್ಲ ಅನ್ನೋ ಕೊರಗು ಭಕ್ತರನ್ನ ಕಾಡುತ್ತಿದೆ. ಹಾಗಾಗಿ ಸಹಸ್ರಾರು ವರ್ಷ ಬತ್ತದ ನೀರಿನ ಸೆಲೆಯನ್ನ ಜಿಲ್ಲಾಡಳಿತ ಅಭಿವೃದ್ಧಿ ಮಾಡುವ ಮನಸ್ಸು ಮಾಡಲಿ ಅನ್ನೋದು ಭಕ್ತರ ಆಶಯವಾಗಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ