ಬೆಂಗಳೂರು: ಸುರಾನಾ ಪೀಣ್ಯಾ ಕ್ಯಾಂಪಸ್ ಅಲ್ಲಿ ವೆಬಿನಾರ್ ಅನ್ನು ಆಯೋಜನೆ ಮಾಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್‍ಲೈನ್ ಕ್ಲಾಸ್ ಮಾಡಲು ತೀರ್ಮಾನಿಸಿ ಇದನ್ನು ಶುರು ಮಾಡಿದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲೆ ರಮ್ಯಾ ಅವರು ಹೇಳಿದ್ದಾರೆ.
ಕೇವಲ ಉಪನ್ಯಾಸಕರಿಂದ ಕ್ಲಾಸ್ ಮಾಡುವುದಕ್ಕಿಂತ ಅತಿಥಿ ಉಪನ್ಯಾಸಕರಿಂದ ಆನ್‍ಲೈನ್ ಕ್ಲಾಸ್ ಮಾಡಿಸಲು ಶುರು ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ಕ್ಲಾಸಿನ ಬಗ್ಗೆ ಗಂಭೀರತೆ ಇರಲಿ ಎಂದು 100, 200 ರೂಪಾಯಿ ಎಂದು ಫೀಸ್ ಕೂಡ ಮಾಡಿದ್ದೇವೆ. ಈ ಹಣವನ್ನು ಈ ಕೊರೊನಾ ಲಾಕ್‍ಡೌನ್ ಇದರೂ ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಹೇಲ್ತ್ ವಾರಿಯರ್ಸ್, ಮೀಡಿಯಾ, ಸಿಎಂ ರಿಲೀಫ್ ಫಂಡಿಗೆ ಕೊಡಲು ಕಾಲೇಜಿನ ಆಡಳಿತ ಮಂಡಳಿ ತೀರ್ಮಾನಿಸಿದೆ.
ಇಂದಿನ ವೆಬಿನಾರ್ ಕ್ಲಾಸ್ ಮಾಧ್ಯಮಕ್ಕೆ ಸಂಬಂಧಪಟ್ಟಿತ್ತು, ಹೀಗಾಗಿ ಕೊರೊನಾ ಲಾಕ್‍ಡೌನ್‍ನಲ್ಲಿ ವರದಿ ಮಾಡುತ್ತಿದ್ದ ಸಂದರ್ಭದಲ್ಲೇ ಪಬ್ಲಿಕ್ ಟಿವಿ ರಾಮನಗರ ವರದಿಗಾರ ಹನುಮಂತು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಕುಟುಂಬಕ್ಕೆ ಇಂದಿನ ಹಣವನ್ನು ನೇರವಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ರಮ್ಯಾ ಅವರು ತಿಳಿಸಿದ್ದಾರೆ.