ನವದೆಹಲಿ, ಜೂ.4-ಅತ್ಯಂತ ಸಂಕಷ್ಟ ಸಂದರ್ಭಗಳಲ್ಲಿ ಅತ್ಯಂತ ಜಣ್ಮೆ ಮತ್ತು ದೂರದೃಷ್ಟಿಯಿಂದ ಬಗೆಹರಿಸುವ ಮಹಾ ಚತುರ ಪ್ರಧಾನಿ ಮೋದಿ ಈಗ ಲೋಕಪ್ರಿಯ ನಾಯಕ. ವಿಶ್ವದ ನಂಬರ್ 1 ಖ್ಯಾತಿಯ ಅಗ್ರಮಾನ್ಯ ಧುರೀಣರಾಗಿದ್ದಾರೆ.
ಪಾಕಿಸ್ತಾನ ಮತ್ತು ಚೀನಾದಂಥ ಕುತಂತ್ರಿ ದೇಶಗಳು ಬಾಲ ಮುದುರಿಕೊಳ್ಳುವಂತೆ ಮಾಡಿರುವ ನಮೋ ಈಗ ವಿಶ್ವದ ಅತ್ಯಂತ ಪ್ರಬಲ ದೇಶಗಳ ಪರಮಾಪ್ತ ಮಿತ್ರ
ಜಗತಿಕ ವೇದಿಕೆಗಳಲ್ಲಿ ಮೋದಿ ಇರಲೇಬೇಕೆಂಬಷ್ಟು ಮಟ್ಟಿಗೆ ಅವರ ಲೋಕವಿಖ್ಯಾತಿ ಉತ್ತುಂಗಕ್ಕೇರಿದೆ. ಇದು ನರೇಂದ್ರ ಮೋದಿ ಅವರ ಅಭಿಮಾನಿಗಳಿಗೆ ಅಪಾರ ಸಂತಸಕ್ಕೆ ಕಾರಣವಾಗಿದೆ.
ಮೋದಿ ಅವರ ಕುರಿತು ಸಾಮಾಜಿಕ ಜಲ ತಾಣಗಳಲ್ಲಿ ಅನೇಕ ಬಹುಪರಾಕ್‍ಗಳನ್ನು ಅವರ ಅಪ್ಪಟ ಅಭಿಮಾನಿಗಳು ತಮ್ಮದೇ ಪರಿಕಲ್ಪನೆಗಳ ಮೂಲಕ ಬಿಂಬಿಸಿ ತನ್ನ ಅಚ್ಚುಮೆಚ್ಚಿನ ಧುರೀಣನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಂಬಿಸುತ್ತಿದ್ದಾರೆ.
ಈಗ ಸಾಮಾಜಿಕ ಜಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ವಿಶೇಷ ಗಮನಸೆಳೆದಿದೆ. ದೇಶದ ಮಹಾ ವೀರಾಗ್ರಣಿ ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ಹೋಲುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೀಸೆ ಮತ್ತು ಗಡ್ಡವನ್ನು ಹೋಲುವಂತೆ ಬಿಂಬಿಸಿ ಸಂಭ್ರಮಿಸಿದ್ದಾರೆ.