ಬೆಂಗಳೂರು: ಗರ್ಭಿಣಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಕೆಎಂಎಫ್ ಗ್ರಾಮದಿಂದ ಹಾಲು ಖರೀದಿಯನ್ನು ನಿಲ್ಲಿಸಿದೆ. ಹೊಸಕೋಟೆ ತಾಲೂಕಿನ ಚಿಕ್ಕಕೊರಟಿ ಗ್ರಾಮದ ರೈತರ ಹಾಲು ಚರಂಡಿ ಸೇರಿದೆ.
ಚಿಕ್ಕಕೊರಟಿ ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆ ಗ್ರಾಮದ ರೈತರಿಂದ ಹಾಲು ಖರೀದಿಯನ್ನು ಕೆಎಂಎಫ್ ನಿಲ್ಲಿಸಿದೆ. ಶುಕ್ರವಾರದಿಂದ ಹಾಲು ಖರೀದಿ ನಿಲ್ಲಿಸಲಾಗಿದ್ದು, ಸುಮಾರು ನಾಲ್ಕು ಸಾವಿರ ಲೀಟರ್ ನಷ್ಟು ಹಾಲನ್ನು ರೈತರನ್ನು ಚರಂಡಿಗೆ ಚೆಲ್ಲಿದ್ದಾರೆ.
ಗ್ರಾಮದ ಬಹುತೇಕ ಜನರು ಹೈನುಗಾರಿಕೆಯಿಂದಲೇ ಜೀವನ ಕಟ್ಟಿಕೊಂಡಿದ್ದಾರೆ. ಹಾಲು ಖರೀದಿ ನಿಲ್ಲಿಸಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.