Breaking News

ಬೆಂಗಳೂರು : 2 ಪ್ರತ್ಯೇಕ ಪ್ರಕರಣಗಳಲ್ಲಿ ರೈಲಿಗೆ ಸಿಲುಕಿ ಇಬ್ಬರ ಸಾವು……….

Spread the love

ಬೆಂಗಳೂರು, ಮೇ 19- ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

ಒಂದು ಪ್ರಕರಣದಲ್ಲಿ ಚಿಕ್ಕಬಾಣಾವಾರ- ಗೊಲ್ಲಹಳ್ಳಿ ರೈಲ್ವೆ ನಿಲ್ದಾಣಗಳ ಮಧ್ಯೆ ಹಾದು ಹೋಗುವ ರೈಲ್ವೆ ಹಳಿ ಬಳಿ ಸುಮಾರು 40 ವರ್ಷದಂತೆ ಕಾಣುವ ವ್ಯಕ್ತಿ ನಿನ್ನೆ ಮುಂಜಾನೆ ಯಾವುದೋ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿರುವ ಈ ವ್ಯಕ್ತಿಯ ಹೆಸರು, ವಿಳಾಸ ತಿಳಿದುಬಂದಿಲ್ಲ. ಮೈಮೇಲೆ ಕಂದುಬಣ್ಣದ ರೆಡಿಮೇಡ್ ಪ್ಯಾಂಟು, ತುಂಬು ತೋಳಿನ ರೆಡಿಮೇಡ್ ಶರ್ಟ್ ಇದೆ.

ಮತ್ತೊಂದು ಪ್ರಕರಣದಲ್ಲಿ ಯಶವಂತಪುರ- ಚಿಕ್ಕಬಾಣಾವಾರ ರೈಲು ನಿಲ್ದಾಣಗಳ ಮಧ್ಯೆ ಕಮ್ಮಗೊಂಡನಹಳ್ಳಿಯ ರೈಲ್ವೆ ಹಳಿ ಬಳಿ ಸುಮಾರು 40-45 ವರ್ಷದಂತೆ ಕಾಣುವ ವ್ಯಕ್ತಿ ಇಂದು ಮುಂಜಾನೆ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

ಗೋಧಿಮೈಬಣ್ಣ, ಕೋಲುಮುಖ ಹೊಂದಿರುವ ಈ ವ್ಯಕ್ತಿಯ ಹೆಸರು, ವಿಳಾಸ ಪತ್ತೆಯಾಗಿಲ್ಲ. ಈತನ ಕತ್ತಿನಲ್ಲಿ ಹಳದಿ, ಹಸಿರು ಬಣ್ಣದ ದಾರ ಇದೆ. 5 ಅಡಿ ಎತ್ತರ ಇರುವ ಈ ವ್ಯಕ್ತಿ ಮೈಮೇಲೆ ಸಿಮೆಂಟ್ ಹಾಗೂ ನೀಲಿ ಬಣ್ಣದ ಟೀಶರ್ಟ್ ಇದೆ.ಬ್ಬರ ಮೃತದೇಹಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿಡಲಾಗಿದ್ದು, ವಾರಸುದಾರರು ಈ ಕೂಡಲೇ ಯಶವಂತಪುರ ರೈಲ್ವೆ ಪೊಲೀಸರನ್ನು ದೂರವಾಣಿ 9480802118ರಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ.


Spread the love

About Laxminews 24x7

Check Also

ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ

Spread the loveಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು, AAI ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಭಿಪ್ರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ