ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದರೆ ಇನ್ನೊಂದೆಡೆ ಜಿಲ್ಲೆಯ ಚಡಚಣ ಪಿಎಸ್‍ಐ ಮಹಾ ಯಡವಟ್ಟು ಮಾಡಿದ್ದಾರೆ. ಲಾಕ್‍ಡೌನ್ ನಡುವೆ ಚಡಚಣ ಪಿಎಸ್‍ಐ ಮಹಾದೇವ ಯಲಿಗಾರ್ ಭರ್ಜರಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅಲ್ಲದೆ ಸನ್ಮಾನ ಸ್ವೀಕರಿಸಿದ್ದಾರೆ.

ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಕೆಲ ಜನ ಕೊರೊನ ವಾರಿಯರ್ಸ್‍ಗೆಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮ ತಡೆಯುವುದನ್ನು ಬಿಟ್ಟು ಖುದ್ದು ತಾವು ಹಾಗೂ ತಮ್ಮ ಸಿಬ್ಬಂದಿ ಸಮೇತ ಹೋಗಿ ಸನ್ಮಾನ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ 1 ಸಾವಿರಕ್ಕೂ ಅಧಿಕ ಜನರು ಭಾಗಿ ಆಗಿದ್ದರೆ.

ಮಹಾರಾಷ್ಟ್ರದ ಗಡಿಯಾದ ಕಾರಣ ಚಡಚಣ ತಾಲೂಕಿನಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಲಾಕ್‍ಡೌನ್ ಮುಂದುವರೆಸಿದೆ. ಆದರೆ ರಾಜ್ಯ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ಕಾರ್ಯಕ್ರಮ ನಡೆಸಲಾಗಿದೆ. ಶಿಸ್ತು ಕಾಪಾಡಬೇಕಾದ ಪೊಲೀಸ್ ಅಧಿಕಾರಿಯಿಂದಲೇ ಮಹಾ ಯಡವಟ್ಟು ನಡೆದಿದೆ.
Laxmi News 24×7