Breaking News

ಬಿಸಿಲು ನಾಡಿನ ಮಿಂಚೇರಿ ನೀಡ್ತಿದೆ ಮಲೆನಾಡಿನ ಅನುಭವ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಂತ್ರಮುಗ್ಧ

Spread the love

ಬಳ್ಳಾರಿ: ಗಣಿನಾಡು ಬಳ್ಳಾರಿ ಅಂದ್ರೆ ಥಟ್ ಅಂತ ನೆನಪಾಗೋದು ಗಣಿ ಧೂಳು. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಜೆಸಿಬಿ, ಲಾರಿಗಳು ಸದ್ದು ಮಾಡೋದನ್ನ ನೀವು ನೋಡಿದ್ದೀರಾ. ಆದ್ರೆ ಈಗ ಅಲ್ಲಿನ ಆ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಮಲೆನಾಡಿನಂತೆ ಗಣಿನಾಡಾಗಿದೆ.

ಗಣಿನಾಡು ಬಳ್ಳಾರಿಯಲ್ಲಿ ಮಲೆನಾಡಿನ ಸೌಂದರ್ಯ ಮನೆ ಮಾಡಿದೆ. ಬಳ್ಳಾರಿ ತಾಲೂಕಿನಿಂದ 18 ಕಿಮೀ ದೂರದಲ್ಲಿರುವ ಮಿಂಚೇರಿ ಅರಣ್ಯ ಪ್ರದೇಶ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ಈ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಮಿಂಚೇರಿ ಅರಣ್ಯ ಪ್ರದೇಶ ಈಗ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಸುಮಾರು 2625 ಎಕರೆ ವಿಸ್ತೀರ್ಣದ ಈ ಅರಣ್ಯ ಪ್ರದೇಶದಲ್ಲಿ ಬೆಟ್ಟಗುಡ್ಡಗಳು, ಇಲ್ಲಿನ ಪ್ರಕೃತಿ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

ಬ್ರಿಟಿಷ್ ಕಾಲದ ಜಡ್ಜ್​ ಮನೆ ಪ್ರವಾಸಿಗರಿಗೆ ಅಚ್ಚುಮೆಚ್ಚು
ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಮಿಂಚೇರಿ ಅರಣ್ಯ ಪ್ರದೇಶದ ಸೌಂದರ್ಯ ವೀಕ್ಷಿಸಲು ನಿತ್ಯ ಸಾವಿರಾರು ಜನರು ಬರುತ್ತಿದ್ದಾರೆ. ಅದರಲ್ಲೂ ಈ ಅರಣ್ಯ ಪ್ರದೇಶದಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡಿದ್ದ ನ್ಯಾಯಾಧೀಶರ ವಾಸಸ್ಥಳದ ಬಂಗಲೆಯೂ ಕೂಡ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ. ಮಲೆನಾಡಿನ ಅನುಭವ ನೀಡುತ್ತಿರುವ ಬಿಸಿಲನಾಡಿನ ಈ ಪ್ರದೇಶವನ್ನ ಅಭಿವೃದ್ಧಿ ಮಾಡಬೇಕು ಅನ್ನೋದು ಪ್ರವಾಸಿಗರ ಮಾತು.

ಪ್ರತಿ ವರ್ಷ ಸಮರ್ಪಕ ಮಳೆ ಇಲ್ಲದೇ ಇಲ್ಲಿನ ಗುಡ್ಡಬೆಟ್ಟಗಳು, ಇಲ್ಲಿನ ಪರಿಸರ ಬೆಂದು ಹೋಗುತ್ತಿತ್ತು. ಆದ್ರೆ ಈ ವರ್ಷ ನಿರಂತರ ಮಳೆಯಿಂದ ಮಿಂಚೇರಿ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.


Spread the love

About Laxminews 24x7

Check Also

ದುರ್ಗಾದೇವಿ ಮಂಜುನಾಥ ದತ್ತ ಮಂದಿರ ಟ್ರಸ್ಟ್ ಜಾಂಬೋಟ್ಟಿಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಭಾಗಿ

Spread the love ದುರ್ಗಾದೇವಿ ಮಂಜುನಾಥ ದತ್ತ ಮಂದಿರ ಟ್ರಸ್ಟ್ ಜಾಂಬೋಟ್ಟಿಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ