ನವದೆಹಲಿ: ಭಾರತ್ ಬಂದ್ ಹಿನ್ನೆಲೆಯಲ್ಲಿ ರೈತರು ಘಾಜಿಪುರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ-ದೆಹಲಿ ಮಾರ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಭಾರತ್ ಬಂದ್ ಯಾಕೆ..?
ಸುಮಾರು ಒಂದೂವರೆ ವರ್ಷಗಳಿಂದ ಜನರ ಜೀವದ ಜೊತೆ ಜೀವನದ ಮೇಲೆ ಪರಿಣಾಮ ಬೀರಿರೋ ಕೊರೊನಾ ಈಗಷ್ಟೇ ಹತೋಟಿಗೆ ಬಂದಿದೆ. ಜನರ ಬದುಕು ಸಹಜ ಸ್ಥಿತಿಗೆ ಮರಳಿದೆ. ವ್ಯಾಪಾರ ವಹಿವಾಟಿನಲ್ಲಿ ಪ್ರಗತಿ ಕಾಣ್ತಿದೆ. ಜನ ನೆಮ್ಮದಿಯ ಜೀವನ ಸಾಗಿಸ್ತಿರೋವಾಗಲೇ ಮತ್ತೆ ಬಂದ್ ಎಂಬ ಶಬ್ದ ಮಾರ್ಧನಿಸಿದೆ. ಆದ್ರೆ ಈ ಬಾರಿಯ ಬಂದ್ ಕೊರೊನಾ ಕಾರಣದಿಂದಲ್ಲ. ಕೇಂದ್ರದ ಮೂರು ಕೃಷಿ ಕಾಯ್ದೆ, ಖಾಸಗೀಕರಣ ಹಾಗೂ ಬೆಲೆ ಏರಿಕೆ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಲಾಗಿದೆ. ವಿಭಿನ್ನ ಪ್ರತಿಭಟನೆ, ಜಾಥಾ ಮೂಲಕ ಕೇಂದ್ರ, ರಾಜ್ಯದ ವಿರುದ್ಧ ಅಸ್ತ್ರ ಪ್ರಯೋಗಿಸಲು ಕರೆ ನೀಡಲಾಗಿದೆ.