ಬೆಳಗಾವಿ: ಜಿಲ್ಲಾ ಉಸ್ತುವಾರಿ ಪಟ್ಟ ಸವಾಲುಗಳಿಂದ ಕೂಡಿದೆ ಒಳ್ಳೆಯ ಕೆಲಸ ಮಾಡಲಿ ಎಂದು ಜಿಲ್ಲೆಯ ನೂತನ ಉಸ್ತುವಾರಿ ಮಂತ್ರಿಗಳಾಗಿ ನೇಮಕಗೊಂಡ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಲಹೆಗಳನ್ನು ನೀಡಿದ್ದಾರೆ.
ಇಂದು ಯಮಕನಮರಡಿ ಕ್ಷೇತ್ರದಲ್ಲಿ ಮಾತನಾಡಿದ ಅವರು ಒಳ್ಳೆಯ ಕೆಲಸ ಮಾಡಬೇಕು. ಕೊರೋನಾ ಇನ್ನೂ ನಿಯಂತ್ರಣದಲ್ಲಿ ಬಂದಿಲ್ಲ. ಹೊಸ ಉಸ್ತುವಾರಿಗಳಿಗೆ ಇದು ಸವಾಲಾಗಿದೆ ಎಂದರು.
ಇನ್ನೂ ಜಿಲ್ಲೆಯಲ್ಲಿ ಪ್ರವಾಹ ಬರುವ ನಿರೀಕ್ಷಯಿದೆ. ಅದಕ್ಕೆ ಮುಂಜಾಗೃತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲಾಕ್ ಡೌನ್, ಕಾರ್ಮಿಕರ ಸಮಸ್ಯೆ ಸೇರಿ ಇನ್ನು ಹಲವಾರು ಸಮಸ್ಯೆಗಳಿವೆ. ಇವೆಲ್ಲವನ್ನು ನಿರ್ವಹಣೆ ಮಾಡಬೇಕು. ಎಲ್ಲದರ ಮೇಲೆ ನಿಗಾಃ ಇಡಬೇಕು. ಬಹಳಷ್ಟು ಕೆಲಸ ನಿಂತುಹೋಗಿವೆ. ಅವುಗಳನ್ನು ಪ್ರಾರಂಭಿಸಬೇಕು. ಹೀಗಾಗಿ ಜಿಲ್ಲಾ ಉಸ್ತುವಾರಿ ಪಟ್ಟ ಬಹಳ ಸವಾಲುಗಳಿಂದ ಕೂಡಿದೆ ಎಂದರು.