Breaking News

ಉದ್ಯೋಗವಿಲ್ಲದೇ ಸಂಕಷ್ಟದಲ್ಲಿರುವ ಛಾಯಾಗ್ರಾಹಕರು ಧೃತಿಗೆಡಬಾರದು: ಎಮ್.ಬಿ.ಗೌಡ ಅಭಯ

Spread the love

ಕೊರೋನಾದಿಂದಾಗಿ ತೀವ್ರ
ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ
ಹಲವಾರು ಉದ್ಯೋಗಸ್ಥರಲ್ಲಿ ವೃತ್ತಿನಿರತ
ಛಾಯಾಗ್ರಾಹಕರೂ ಸೇರಿದ್ದಾರೆ.ಆದರೆ
ವಿಶ್ವವೇ ಎದುರಿಸುತ್ತಿರುವ ಪ್ರಸಕ್ತ
ಬಿಕ್ಕಟ್ಟಿನ ಸಂದರ್ಭದಲ್ಲಿ ಛಾಯಾಗ್ರಾಹಕರು
ಧೃತಿಗೆಡಬಾರದು ಎಂದು ಖ್ಯಾತ ಛಾಯಾಗ್ರಾಹಕ ಶ್ರೀ ಎಮ್.ಬಿ.ಗೌಡ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ
“ಹಸಿದವರತ್ತ ನಮ್ಮ ಚಿತ್ತ” ಅಭಿಯಾನದ
ಅಂಗವಾಗಿ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಮುಂಜಾನೆ
30 ವೃತ್ತಿನಿರತ ಛಾಯಾಗ್ರಾಹಕರಿಗೆ ಆಹಾರಧಾನ್ಯದ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಹಿರಿಯ ಸಮಾಜ ಸೇವಕಿ ಶ್ರೀಮತಿ ಶೈಲಜಾ ಭಿಂಗೆ ಮತ್ತು ಸಾಹಿತಿ ,ಸಮಾಜ ಸೇವಕಿ ಶ್ರೀಮತಿ ಜಯಶೀಲಾ ಬ್ಯಾಕೋಡ ಅವರು ಆಹಾರ ಧಾನ್ಯ ನೀಡಿದ
ದಾನಿಗಳಾಗಿದ್ದಾರೆ.
ಮದುವೆ,ಮುಂಜುವೆ ಮತ್ತಿತರ ಶುಭ
ಸಮಾರಂಭಗಳು ನಡೆಯದೇ ಛಾಯಾಗ್ರಾಹಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.ಈ ವರ್ಗದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ಕಷ್ಟದಲ್ಲಿದ್ದವರ ನೆರವಾಗುವದು ಇದೇ ಮೊದಲಲ್ಲ.2018 ರ ಪ್ರವಾಹದ ಕಾಲಕ್ಕೆ ಕೊಡಗಿಗೆ ಹೋಗಿಯೂ ಪರಿಹಾರ ಹಂಚಿದ್ದರು.2019 ರಲ್ಲಿ ಬೆಳಗಾವಿ ಜಿಲ್ಲೆಯ ಛಾಯಾಪ್ರವಾಹದ ಕಾಲಕ್ಕೂ ನೆರವಿನ ಹಸ್ತ ಚಾಚಿದ್ದರು ಎಂದು ಗೌಡ ಹೇಳಿದರು.
ಪ್ರಾಸ್ತಾವಿಕವಾಗಿ ಕ್ರಿಯಾ ಸಮಿತಿಯಛಾಯಾ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿದರು.ಛಾಯಾಗ್ರಾಹಕರ ಪರವಾಗಿಶ್ರೀ ರಾಮನ್ನವರ ಮಾತನಾಡಿದರು.ಕೊನೆಗೆ ಶಂಕರ ಬಾಗೇವಾಡಿ ಅವರು ಆಭಾರ ಮನ್ನಿಸಿದರು.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ