ಬೆಂಗಳೂರು: ಬೆಳಗ್ಗೆಯ ಬಸ್‍ಗೆ ಜನರು ರಾತ್ರಿ ಮಕ್ಕಳ ಜೊತೆ ಬಸ್ ನಿಲ್ದಾಣದಲ್ಲಿ ಕಳೆದಿದ್ದಾರೆ.
ಸಂಜೆ ಆರು ಗಂಟೆಗೆ ಬಂದ ಬಹುತೇಕ ಜನಕ್ಕೆ ಬಸ್ ಸಿಕ್ಕಿರಲಿಲ್ಲ. ಇನ್ನು ವಾಪಸ್ ಮನೆಗೆ ಹೋಗಲು ಯಾವುದೇ ವಾಹನದ ವ್ಯವಸ್ಥೆ ಇಲ್ಲ. ಹಾಗಾಗಿ ಜನ ಬಸ್ ನಿಲ್ದಾಣದಲ್ಲಿಯೇ ರಾತ್ರಿ ಕಳೆದಿದ್ದಾರೆ. ಒಂದು ಬಸ್ ಗೆ ಕೇವಲ 30 ಜನರಿಗೆ ಮಾತ್ರ ಅವಕಾಶ ನೀಡಲಾಗ್ತಿದೆ. ಹಾಗಾಗಿ ಬಸ್ ಸಿಗದಿದ್ದರೆ ಹೇಗೆ ಅಂತ ಬಹುತೇಕರು ಪ್ರಯಾಣಿಕರು ನಿಲ್ದಾಣದಲ್ಲಿಯೇ ಇರುವಂತಾಯ್ತು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹಿಳೆ, ನಾವು ಶಿರಗುಪ್ಪಕ್ಕೆ ಹೋಗಬೇಕು. ರಾತ್ರಿ ಬಸ್ ಇರುತ್ತೆ ಅಂತ ಸಂಜೆ ಆರು ಗಂಟೆಗೆ ಮೆಜೆಸ್ಟಿಕ್ ಗೆ ಬಂದರೆ ಯಾವುದೇ ಬಸ್ ಸಿಗಲಿಲ್ಲ. ಮತ್ತೆ ಮನೆಗೆ ಹೋಗಲು ಆಗಲ್ಲ. ಅನಿವಾರ್ಯವಾಗಿ ಬಸ್ ನಿಲ್ದಾಣದಲ್ಲಿ ಇದ್ದೇವೆ ಅಂತಾ ಹೇಳಿದರು.