ಬೆಳಗಾವಿ: ಇಲ್ಲಿನ ನ್ಯೂ ಗಾಂಧಿ ನಗರದ ಖ್ವಾಜಾ ಗರೀಬ ನವಾಜ್ ಪೌಂಡೇಶನ್ ವತಿಯಿಂದ ಸುಮಾರು 26 ಲಕ್ಷ ರೂ. ವೆಚ್ಚದ ರೇಷನ್ ಕಿಟ್ ಗಳನ್ನು ಬಡಕುಟುಂಬಗಳಿಗೆ ವಿತರಣಾ ಕಾರ್ಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಚಾಲನೆ ನೀಡಿದರು.
ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಸುಮಾರು 3 ಸಾವಿರ ಬಡಕುಟುಂಬಗಳಿಗೆ ಈ ರೇಷನ್‌ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಶಾಸಕರೂ ಆದ ಸತೀಶ ಜಾರಕಿಹೊಳಿ ಅವರು ವ್ಯಯಕ್ತಿಕವಾಗಿ ಎರಡು ಲಕ್ಷ ರೂ.ಗಳನ್ನು ನೀಡುವುದರ ಮೂಲಕ ಪೌಂಡೇಶನ್ ಜನಪರ ಕಾರ್ಯಕ್ಕೆ ಸಾಥ್ ನೀಡಿ ಶ್ಲಾಘಿಸಿದರು.
ಮೊದಲಹಂತದ ಲಾಕ್‌ಡೌನ್ ಸಂದರ್ಭದಲ್ಲೂ ಗರೀಬ ನವಾಜ್ ಫೌಂಡೇಷನ್ ವತಿಯಿಂದ ಸುಮಾರು 1500 ಕುಟುಂಬಗಳಿಗೆ ಅಂದಾಜು 17 ಲಕ್ಷ ರೂ. ಗಳ ರೇಷನ್ ಕಿಟ್ ಗಳನ್ನು ವಿತರಿಸಲಾಗಿತ್ತು.ಇನ್ನೂ ರಮಜಾನ್ ಸಮಯದಲ್ಲೂ ಬಡ ಜನರನೆರವಿಗಾಗಿ ವಿಷೇಶ ಕಿ್ಟ್ಟ್ಟ್ಟಟಗಳನ್ನು ನೀಡುವ ಯೋಜನೆ ಹಾಕಿಕೊಂಡಿದೆ. ಮತ್ತು ಇದಕ್ಕಾಗಿ ಅಂದಾಜು 30 ಲಕ್ಷ ರೂ. ವ್ಯಯಿಸಲಿದೆ.
ಈ ಸಂದರ್ಭದಲ್ಲಿ ಅಜೀಮ ಪಟ್ವೆಗಾರ, ಮೌಲಾನಾ ಮುಷ್ತಾಕ್,ರಪೀಕ್ ಗೋಕಾಕ, ನಜೀರ ಪಟ್ವೆಗಾರ, ಸಜ್ಜಾದ ಶೆಖ್, ಇಜಾಜ ಹಕೀಂ, ಜಾವೆದ ಅತ್ತಾರ, ನಜ್ಮುಲ್ ಅತ್ತಾರ, ಇಮ್ರಾನ ನಾಶಿಪುಡಿ, ಬದ್ರುದ್ದಿನ ಮುಲ್ಲಾ, ಅಬ್ದುಲ ಹುದಲಿ ಇತರರು ಇದ್ದರು.