ಜೀ ಸುದ್ದಿ ವಾಹಿನಿ ದೇಶದ ಸುದ್ದಿ ವಾಹಿನಿಗಳ ಸಾಲಿನಲ್ಲಿ ಅಗ್ರ ಸ್ಥಾನ ಪಡೆಯುತ್ತದೆ, ಇಂತಹ ದೈತ್ಯ ಸಂಸ್ಥೆಯ ಸಿಬ್ಬಂದಿಗಳಿಗೆ ಕೊವಿಡ್ ೧೯ ದೃಡವಾಗಿದೆ. 28 ಸಿಬ್ಬಂದಿಗಳಿಗೆ ಕೊರೊನಾ ದೃಡವಾಗಿದ್ದು, ೩೫೦೦ ಸಿಬ್ಬಂದಿಗಳ ಗಂಟಲಿನ ದೃವದ ಪರಿಕ್ಷೆಗೆ ಕಳುಹಿಸಲಾಗಿದೆ.
ಜೀ ವಾಹಿನಿಯ ಪ್ರಧಾನ ಸಂಪಾದಕರಾದ ಸುಧೀರ್ ಚೌದರಿಯವರು ಈ ಬಗ್ಗೆ ಟ್ವೀಟ್ ಮಾಡಿದ್ದು, ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ”ಇದು ಅತ್ಯಂತ ಕಷ್ಟದ ಸಮಯ ನಮ್ಮ 28 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ಗೆ ಅಂಜದೇ ಕಾರ್ಯನಿರ್ವಹಿಸುತ್ತಿದ್ದ ಇವರ ವೃತ್ತಿಪರತೆಯನ್ನು ಮೆಚ್ಚಲೇಬೇಕು. ಅವರೆಲ್ಲ ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ವಿಶ್ವಾಸ ನನಗಿದೆ” ಎಂದಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					 
						
					