Breaking News

ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ನೇಣಿಗೆ ಶರಣು !

Spread the love

ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ನಿನ್ನೆ ರಾತ್ರಿ ಮಾಗಡಿ ರಸ್ತೆಯ ಪ್ರಗತಿ ಲೇಔಟ್ ನಲ್ಲಿರುವಂತ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಈ ಹಿಂದೆ ಫೇಸ್​ಬುಕ್​ ಪೋಸ್ಟ್​ ನಲ್ಲಿಯೂ ನಟಿ ಜಯಶ್ರೀ ರಾಮಯ್ಯ ತಮಗೆ ದಯಾಮರಣ ಕೊಡಿ ಅಂತಾ ಹಾಕಿಕೊಂಡಿದ್ದರು. ಆ ವೇಳೆಯೇ ಜಯಶ್ರೀ ರಾಮಯ್ಯ ಎಷ್ಟರ ಮಟ್ಟಿಗೆ ಅವರು ಖಿನ್ನತೆಗೆ ಒಳಗಾಗಿದ್ದಾರೆ ಅನ್ನೋದು ಭಾರೀ ಚರ್ಚೆಗೆ ಕಾರಣವಾಗಿತ್ತು.

 

ತಮ್ಮ ಫೇಸ್​​ಬುಕ್​​ನಲ್ಲಿ ಐ ಕ್ವಿಟ್, ನಾನು ಸಾಯ್ತಿನಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಗೂ ವಿಡಿಯೋಗಳನ್ನೂ ಜಯಶ್ರೀ ಅವರು ಹಾಕಿಕೊಂಡಿದ್ದರು. ನನಗೆ ದಯಾ ಮರಣ ಕೊಡಿ ಅಂತ ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿದ್ದರು. ನಂಗೆ ಸಾಯಲು ಬಿಡಿ ಅಂತ ಅಳಲು ತೋಡಿಕೊಂಡಿದ್ದರು.

 

ನನಗೆ ಯಾವುದೇ ಫೈನಾನ್ಶಿಯಲ್ ಎಕ್ಸ್​ಪೆಕ್ಟೇಶನ್ಸ್ ಇಲ್ಲ. ನನಗೆ ಬೇಕಾಗಿರೋದು ಸಾವು. ನಾನು ತುಂಬಾ ಡಿಪ್ರೆಷನ್​ನಲ್ಲಿದ್ದೀನಿ. ಫ್ಯಾಮಿಲಿ ಸಮಸ್ಯೆಯಿಂದ ನೊಂದಿದ್ದೀನಿ. ನನ್ನ ಜೀವನದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ನನ್ನಿಂದ ಅದನ್ನು ಮರೆಯೋದಕ್ಕೆ ಆಗ್ತಿಲ್ಲ. ನಾನು ಲೂಸರ್, ನಾನು ಹುಚ್ಚಿ. ದಯವಿಟ್ಟು ಮರ್ಸಿ ಕಿಲ್ಲಿಂಗ್​ಗೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು.


Spread the love

About Laxminews 24x7

Check Also

ಕೊಲ್ಹಾಪುರದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಳಗಾವಿಯ ಕರಾಟೆಪಟುಗಳ ಅದ್ಭುತ ಸಾಧನೆ

Spread the love ಕೊಲ್ಹಾಪುರದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಳಗಾವಿಯ ಕರಾಟೆಪಟುಗಳ ಅದ್ಭುತ ಸಾಧನೆ ೧೦೪ ಪದಕಗಳನ್ನು ಗೆದ್ದ ೫೭ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ