Breaking News

ಬಹುನಿರೀಕ್ಷಿತ ಆರ್​ಆರ್​ಆರ್​ ಚಿತ್ರ ರಿಲೀಸ್​; ಪಟಾಕಿ ಹೊಡೆದು, ಕೇಕೆ ಹಾಕಿ ಅಭಿಮಾನಿಗಳ ಹರ್ಷೋದ್ಘಾರ

Spread the love

ಬೆಂಗಳೂರು: ಬಹುನಿರೀಕ್ಷಿತ ಆರ್​ಆರ್​ಆರ್​ ಸಿನಿಮಾ (RRR Movie) ರಾಜ್ಯಾದ್ಯಂತ 450 ಥಿಯೇಟರ್​ಗಳಲ್ಲಿ ರಿಲೀಸ್ ಆಗಿದೆ. 170ಕ್ಕೂ ಹಚ್ಚು ಸಿಂಗಲ್ ಸ್ಕ್ರೀನ್‌ ಮತ್ತು 450 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಆರ್​ಆರ್​ಆರ್​ ಆರ್ಭಟ ಶುರುವಾಗಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು, ಟಿಕೆಟ್ ಕೂಡ ಸೋಲ್ಡ್​ಔಟಾಗಿ, ನಾಳಿನ ಟಿಕೆಟ್​ಗೂ ಬೇಡಿಕೆ ಹೆಚ್ಚಾಗಿದೆ. ರಾಮ್‌ಚರಣ್, ಜೂ.ಎನ್‌ಟಿಆರ್ ಮತ್ತು ಆಲಿಯಾ ಭಟ್ ಅಭಿನಯದ, ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದೇ ವೇಳೆ ಜೂ.ಎನ್‌ಟಿಆರ್, ಚರಣ್ ಅಭಿಮಾನಿಗಳ ಮಧ್ಯೆ ಫೈಟ್ ಶುರುವಾಗಿದ್ದು, ತಮ್ಮ ಹೀರೋನೆ ಹೆಚ್ಚೆಂಬ ವಿಚಾರಕ್ಕೆ ಬೆಂಗಳೂರಿನ ಅಂಜನ್ ಚಿತ್ರಮಂದಿರದಲ್ಲಿ ಗಲಾಟೆ ನಡೆದಿದೆ. ಅಭಿಮಾನಿಗಳ ಕಿತ್ತಾಟದಿಂದ ಇತರೆ ಪ್ರೇಕ್ಷಕರಿಗೆ ಕಿರಿಕಿರಿಯಾಗಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಫ್ಯಾನ್ಸ್ ವಾರ್ ಹೋಗಿದೆ. ಹುಬ್ಬಳ್ಳಿಯಲ್ಲೂ ಆರ್​ಆರ್​ಆರ್​ ಹವಾ ಜೋರಾಗಲಿದ್ದು, ಇಂದು ಒಂದೇ ದಿನ ಬರೋಬ್ಬರಿ 30 ಶೋ ಆರೆಂಜ್ ಮಾಡಲಾಗಿದೆ. ಎರಡೂ ಥೆಯೆಟರ್ ಹಾಗೂ ಎರಡೂ ಮಲ್ಟಿಪ್ಲೆಕ್ಸ್ ನಲ್ಲಿ 3ಆರ್ ಪ್ರದರ್ಶನ ಕಾಣಲಿದೆ. ಸುಧಾ ಹಾಗೂ ಶೃಂಗಾರ ಥೇಯಟರ್​ನಲ್ಲಿ ಪ್ರದರ್ಶನ ಕಾಣಲಿದ್ದು, ಇತ್ತ ಪಿವಿಆರ್ ಹಾಗೂ ಅರ್ಬನ್ ಒಯಾಸಿಸ್ ಮಾಲ್​ನಲ್ಲಿ ತಲಾ ೧೦ ಶೋಗಳು ಕಾಣಲಿವೆ. ಬೆಳಿಗ್ಗೆ 9ಕ್ಕೆ ಮೊದಲ ಶೋ ಆಯೋಜನೆಯಾಗಿದ್ದು, ಈಗಾಗಲೇ ಮೊದಲ ಶೋ ಟಿಕೆಟ್ ಶೋಲ್ಡ್ ಔಟ್ ಆಗಿವೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿ 3ಆರ್ ಅಬ್ಬರ ಜೋರಾಗಿದ್ದು, ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಮೊದಲ ಶೋ ನೋಡಿ‌ ಬಂದು ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. 3ಆರ್ ಚಿತ್ರ ರಿಲೀಸ್ ಹಿನ್ನೆಲೆ, ದಾವಣಗೆರೆಯಲ್ಲಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಅಶೋಕಾ ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಿ, ಅಭಿಮಾನಿಗಳ ಶಿಳ್ಳೆ ಕೇಕೆ ಹಾಕಿದ್ದಾರೆ. ನೆಚ್ಚಿನ ನಾಯಕ ನಟರ ಪರ ಘೋಷಣೆ ಹಾಕಿ ಸಂಭ್ರಮಿಸಿದ್ದಾರೆ. ಊರ್ವಶಿ ಥಿಯೇಟರ್​ನಲ್ಲಿ ಬೆಳಿಗ್ಗೆ 6 ಗಂಟೆ ಶೋ ಹೌಸ್ ಫುಲ್ ಆಗಿದ್ದು, ಸಿನಿಮಾ ನೋಡಲು ಯುವತಿಯರು, ಚಿಕ್ಕ ಮಕ್ಕಳೊಂದಿಗೆ ಪೋಷಕರು ಆಗಮಿಸುತ್ತಿದ್ದಾರೆ. ಇನ್ನೂ ಕೋಲಾರದಲ್ಲಿ ಜೂ.ಎನ್.ಟಿ.ಆರ್. ಹಾಗೂ ರಾಮ್ ಚರಣ್ ಪ್ಲೆಕ್ಸ್ ಗಳಿಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ. ಬೆಳಿಗ್ಗೆ ಆರು ಗಂಟೆಗೆ ಮೊದಲ ಶೋ, ಆರಂಭವಾಗಿದ್ದು, ಆನ್ ಲೈನ್ ಬುಕ್ಕಿಂಗ್​ನಲ್ಲಿ ಇಂದಿನ ನಾಲ್ಕು ಶೋ ಬುಕ್ಕಿಂಗ್ ಆಗಿವೆ. ಪಾವಗಡ ಪಟ್ಟಣದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಪಾವಗಡ ಪಟ್ಟಣದ ಮಾರುತಿ‌ ಚಿತ್ರಮಂದಿರದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬೆಳಗಿನಜಾವ 3 ಗಂಟೆಗೆ 3ಆರ್ ಫ್ಯಾನ್ ಶೋ‌ ರಿಲೀಸ್ ಮಾಡಲಾಗಿದೆ. ಯಾವುದೇ ಅಹಿಕತರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ವರ ವಹಿಸಲಾಗಿದೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ