ಬೆಳಗಾವಿ : ಮಹಾರಾಷ್ಟ್ರ ರಾಜ್ಯದಿಂದ ಬೆಳಗಾವಿ ನಗರಕ್ಕೆ ಗಾಂಜಾ ಮಾರಾಟ ಮಾಡಲು ಬಂದಿದ್ದ ಆರೋಪಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಮೀರಜದ ಶಬ್ಬೀರ ಇಬ್ರಾಹಿಂ ಪಠಾಣ (33) ಬಂಧಿತ ಆರೋಪಿ.
ನಗರದ ಧರ್ಮನಾಥ ಸರ್ಕಲ್ ಬಳಿ ದಾಳಿ ಮಾಡಿ, ಆರೋಪಿ ಬಳಿ ಇದ್ದ ಒಟ್ಟು 5 ಕೆ.ಜಿ 400 ಗ್ರಾಂ, ಗಾಂಜಾ ಮಾದಕ ವಸ್ತು, ಅಂದಾಜು ಮೌಲ್ಯ ಒಟ್ಟು ರೂ. 1,50,000 ಹಾಗೂ ಒಂದು ಟಿವ್ಹಿಎಸ್ ಕಂಪನಿಯ ಸ್ಪೋರ್ಟ್ಸ್ ಮೋಟಾರು ಬೈಕ್ ವಶಪಡಿಸಿಕೊಂಡಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.