ಇದೇ ಜನವರಿ 16 ಮತ್ತು 17ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆ ಅಸಿಸ್ಟಂಟ್ ಇನ್ಸಪೆಕ್ಟರ್ ಜನರಲ್ ಪೊಲೀಸ್ ಸೀಮಾ ಲಾಟ್ಕರ್‍ರನ್ನು ಬಂದೋಬಸ್ತ್ ಕರ್ತವ್ಯಕ್ಕಾಗಿ ಹೆಚ್ಚುವರಿ ಅಧಿಕಾರಿಯಾಗಿ ನೇಮಕ ಮಾಡಿ ಡಿಜಿಪಿ ಅವರು ಆದೇಶ ಹೊರಡಿಸಿದ್ದಾರೆ.
ಹೌದು ಅಸಿಸ್ಟಂಟ್ ಇನ್ಸಪೆಕ್ಟರ್ ಜನರಲ್ ಪೊಲೀಸ್ ಸೀಮಾ ಲಾಟ್ಕರ್‍ರನ್ನು ಹೆಚ್ಚುವರಿ ಬಂದೋಬಸ್ತ್ ಕರ್ತವ್ಯ ಅಧಿಕಾರಿಯಾಗಿ ಡಿಜಿಪಿ ಪ್ರವೀಣ ಸೂದ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಡಿಸಿಪಿಯಾಗಿ ಸೀಮಾ ಲಾಟ್ಕರ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆ ಅಮಿತ್ ಷಾ ಆಗಮನ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಇವರನ್ನೆ ನೇಮಕ ಮಾಡಲಾಗಿದೆ. ಸೀಮಾ ಲಾಟ್ಕರ್ ಅವರು ಜ.15ರಿಂದ ಜ.17ರವರೆಗೆ ಬಂದೋಬಸ್ತ್‍ನ ಹೆಚ್ಚುವರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
Laxmi News 24×7