ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಮತ್ತು ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಷನ ವತಿಯಿಂದ ಕೆ.ಎಸ್.ಆರ್. ಸಿ ಬಿ ಎಸ್ ಸಿ ಶಾಲೆಯಲ್ಲಿ ಕರಾಟೆ ಬೆಲ್ಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಮತ್ತು ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಷನ ವತಿಯಿಂದ ಕೆ.ಎಸ್.ಆರ್. ಸಿ ಬಿ ಎಸ್ ಸಿ ಶಾಲೆಯಲ್ಲಿ ಮಕ್ಕಳಿಗೆ ಕರಾಟೆ ತರಬೇತಿಯನ್ನು ನೀಡಲಾಗುತ್ತಿದ್ದು, ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಕರಾಟೆ ಬೆಲ್ಟ್ ವಿತರಿಸಲಾಯಿತು.
ಕಾಂಗ್ರೆಸ್ ಯುವ ನಾಯಕ ಅಮಾನ್ ಸೇಠ್, ಡಿಸಿಪಿ ನಾರಾಯಣ್ ಬರಮನಿ, ವಿಕಾಸ್ ಕಲಘಟಗಿ, ಮುಖ್ಯಾಧ್ಯಾಪಕರಾದ ರತ್ನಾ ಬೆಂಡಿಗೇರಿ, ಮ್ಯಾನೇಜರ್ ಚಂದ್ರಮತಿ ವೇರ್ಣೇಕರ ಇನ್ನುಳಿದವರು ಉಪಸ್ಥಿತರಿದ್ಧರು.
ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯ ಕಾರ್ಯದರ್ಶಿ ಜೀತೇಂದ್ರ ಕಾಕತೀಕರ ಅವರು, ಬೆಳಗಾವಿಯ ಅಶೋಕನಗರದ ಕೆ.ಎಸ್.ಆರ್. ಸಿ ಬಿ ಎಸ್ ಸಿ ಶಾಲೆಯಲ್ಲಿ ಕರಾಟೆ ಬೆಲ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 150 ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದರು. ಹೆಚ್ಚುತ್ತಿರುವ ಪೋಕ್ಸೋ ಮತ್ತು ಅತ್ಯಾಚಾರದಂತಹ ಪ್ರಕರಣಗಳನ್ನು ತಡೆಗಟ್ಟಲು ಶಾಲಾ ಮಕ್ಕಳಲ್ಲಿ ಕರಾಟೆ ಕಲೆಯನ್ನು ಕಲೆಸಲು ಶಾಲೆಯೂ ಮುಂದಾಗಿದೆ. ಆತ್ಮ ರಕ್ಷಣೆಗಾಗಿ ಇದು ಪೂರಕ ಕಲೆಯಾಗಿದೆ ಎಂದರು.
ಈ ವೇಳೆ ವಿದ್ಯಾರ್ಥಿಗಳು ಮತ್ತು ಪಾಲಕರು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
Laxmi News 24×7