ಬೆಳಗಾವಿ : ಯಮಕನಮರಡಿ ಕ್ಷೇತ್ರದ ಮಾವನೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶಿವಕುಮಾರ್ ಗುಡಗನಟ್ಟಿ ಇಂದು ಭೂಮಿ ಪೂಜೆ ನೆರವೇರಿಸಿದರು.
ನರೇಗಾ ಯೋಜನೆಯಲ್ಲಿ ಬಿಡುಗಡೆಯಾದ 18 ಲಕ್ಷ ರೂಪಾಯಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಇದೇ ವೇಳೆ ಅಧ್ಯಕ್ಷೆ ಮಾತನಾಡಿ, ಯಮಕನಮರಡಿ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಶಾಸಕರು ಪಣ ತೊಟ್ಟಿದ್ದಾರೆ. ಅವರ ಆಸೆಯಂತೆ ಇಂದು ರಸ್ತೆ , ಶಾಲೆ ಕೊಠಡಿ ನಿರ್ಮಾಣ ಸೇರಿ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ.ಉಪಾಧ್ಯಕ್ಷ , ಪಿಡಿಓ ಚಂದ್ರಪ್ಪ ಗುಡದರಿ, ಕಾಂಗ್ರೆಸ್ ಮುಖಂಡರಾದ ಶಿವಪ್ಪ ಈರನಟ್ಟಿ, ಶಿವಕುಮಾರ್ ಗುಡಗನಟ್ಟಿ, ಸತ್ಯಪ್ಪ ಲಟ್ಟಿ,ಯಲ್ಲಪ್ಪ ನಾಯಕ್, ಹಾಗೂ ಗ್ರಾಮಸ್ಥರು ಇದ್ದರು.