Breaking News

ಬೆಳಗಾವಿ:ಸಿಗರೇಟ್ ಹಣ ಕೇಳಿದ್ದಕ್ಕೆ ಪಾನ್ ಶಾಪ್ ಮಾಲೀಕನ ಹತ್ಯೆ

Spread the love

ಬೆಳಗಾವಿ : ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ವಿಚಾರಕ್ಕೆ ನಾಲ್ವರು ಯುವಕರು ಅಂಗಡಿ ಮಾಲೀಕನನ್ನು ಥಳಿಸಿರುವುದರಿಂದ ಗಂಭೀರವಾಗಿ ಗಾಯಗೊಂಡ ಅಂಗಡಿ ಮಾಲೀಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೊಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಕೊಲೆಯಾದ ವ್ಯಕ್ತಿ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ್ (22) ನಿಖಿಲ್ ಮಹೇಶ್‌ ಚೌಗಲೆ (22) ವಿವೇಕ್ ರಾಜೇಂದ್ರ ಚೌಗುಲೆ (22) ಮತ್ತು ಶ್ರೀಧ‌ರ್ ರತನ ಪಾಟಿಲ್ (21) ಹಲ್ಲೆ ಮಾಡಿದ ಆರೋಪಿಗಳು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿನ್ನೆ ರಾತ್ರಿ ವೇಳೆ ಮೋಹನಗಾ ಜಾತ್ರೆ ಮುಗಿಸಿ ಬರುತ್ತಿದ್ದ ಈ ನಾಲ್ವರು ಮಧ್ಯದ ಅಮಲಿನಲ್ಲಿ ಮಧ್ಯರಾತ್ರಿ ಸಿಗರೇಟ್ ಸೇದೋದಕ್ಕಾಗಿ ಬೋಡಕೆನಟ್ಟಿ ಗ್ರಾಮದಲ್ಲಿ ಬೈಕ್‌ ನಿಲ್ಲಿಸಿದ್ದಾರೆ.


Spread the love

About Laxminews 24x7

Check Also

ರಾಜೀವ ಗಾಂಧಿ ಯೂನಿವರ್ಸಿಟಿಗೆ  ಮೂರನೇ ರ್ಯಾಂಕ್​ ಪಡೆದ ಡಾ.ಸ್ನೇಹಾ

Spread the loveಬೈಲಹೊಂಗಲ: ನಗರದ ಕಡಬಿ ಗಲ್ಲಿಯ ಡಾ.ಸ್ನೇಹಾ ಮಲ್ಲಿಕಾರ್ಜುನ ಅಂಗಡಿ ಅವರು ಬೆಂಗಳೂರು ಮೆಡಿಕಲ್​ ಕಾಲೇಜ್​ ಮತ್ತು ರಿಸರ್ಚ್​ ಇನ್ಸಿಟ್ಯೂಟ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ