Breaking News

ಕೆಎಲ್‌ಇ ಆಸ್ಪತ್ರೆಯಲ್ಲಿ ಬೇಸಿಕ್ ಲೈಫ್ ಸಪೋರ್ಟ್ ತರಬೇತಿ ಕಾರ್ಯಕ್ರಮ

Spread the love

ಬೆಳಗಾವಿ: ವ್ಯಕ್ತಿಯ ಹಿನ್ನೆಲೆಯನ್ನು ಗುರುತಿಸದೇ ಆತನ ಜೀವ ಉಳಿಸುವಲ್ಲಿ ಬೇಸಿಕ್ ಲೈಫ್ ಸಪೋರ್ಟ್‌ನ ಕೌಶಲ್ಯಗಳು ಅತ್ಯುಪಯುಕ್ತವಾಗಿವೆ ಎಂದು ಯುಎಸ್‌ಎಂಕೆಎಲ್‌ಇ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಹೇಳಿದರು.
 ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬೇಸಿಕ್ ಲೈಫ್ ಸಪೋರ್ಟ್  ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ವೈದ್ಯರು  ತರಬೇತಿಯನ್ನು ಮನನ ಮಾಡಿಕೊಂಡು ಸಕಾಲದಲ್ಲಿ ಉಪಯೋಗಿಸಿಕೊಂಡು ತೊಂದರೆಗೀಡಾದ ವ್ಯಕ್ತಿಯ ಜೀವ ಉಳಿಸುವಲ್ಲಿ ಸಾರ್ಥಕತೆಯನ್ನು ಹೊಂದಬೇಕು ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ ಕಂಬಾರ ಮಾತನಾಡಿ, ನಮ್ಮ ಇಂದಿನ ಅನುಭವ, ಜ್ಞಾನ ಮುಂದಿನ ಪೀಳಿಗೆಯ ಜೀವ ರಕ್ಷಣೆಯ ಕಲೆಯಾಗಿ ಮಾರ್ಪಡಲಿ ಆರೋಗ್ಯ ಕೌಶಲ್ಯಗಳು ಇಂದು ಜೀವನಾವಶ್ಯಕತೆಗಳಲ್ಲಿ ಒಂದಾಗಿದೆ. ಭಾರತದಂತಹ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರದಲ್ಲಿ ಪ್ರತಿ ದಿನ ನಾನಾ ರೀತಿಯ ತುರ್ತು ಅವಶ್ಯಕತೆಯ  ಕಾರಣಗಳಿಂದ ಸುಮಾರು ಜನರು ಅಸುನೀಗುತ್ತಿದ್ದಾರೆ. ಆದರೆ ಅವರಿಗೆ ಅವಶ್ಯಕ ಚಿಕಿತ್ಸೆಯನ್ನು ನೀಡಲು ಪ್ರತಿಯೊಬ್ಬ ನಾಗರಿಕನೂ ಈ ಕೌಶಲ್ಯಗಳನ್ನು ಅರಿಯುವ ಅವಶ್ಯಕತೆ ಅಧಿಕವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಡಾ. ವಿಜಯಲಕ್ಷೀ ಕುಲಗೊಡ ಮಾತನಾಡಿ, ನುರಿತ ಚಿಕ್ಕ ಮಕ್ಕಳ ತಜ್ಷೆ ಮಾತನಾಡುತ್ತ ಬೇಸಿಕ್ ಲೈಫ್ ಸಪೋರ್ಟ್‌ನ ಕೌಶಲ್ಯಗಳು ಪ್ರತಿಯೊಬ್ಬರೂ ತಿಳಿಯಲೇಬೇಕಾದ ಅವಶ್ಯಕತೆ ಇಂದು ಅಧಿಕವಾಗಿದೆ. ಇವು ಕೃತಕ ಉಸಿರಾಟ, ಅಪಘಾತ, ಅವಘಡಗಳಕ್ಕೀಡಾದವರಿಗೆ ಜೀವ ನೀಡುವ ಒಂದು ಅಧ್ಬುತ ಕಲೆಯಾಗಿದೆ. ಇನ್ನು ವೈದ್ಯರಾದ ನಾವುಗಳು ಅರಿತು ಮುಂದೆ ನಮ್ಮಲ್ಲಿಗೆ ಬರುವ ನಾಗರಿಕರಿಗೆ ಇದನ್ನು ತಿಳಿಸಿ ಕಲಿಸಿದರೆ ನೂರಾರು ಜನರ ಜೀವ ಉಳಿಸಿದಂತಾಗುತ್ತದೆ ಎಂದು ಕರೆ ನೀಡಿದರು.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹನಾಧಿಕಾರಿ  ನವೀನ .ಎನ್, ಬಿಎಲ್‌ಎಸ್ ಕಾರ್ಯಕ್ರಮದ ನಿರ್ದೇಶಕ ಡಾ. ಸಂತೋಷಕುಮಾರ ಕರಮಸಿ, ಡಾ. ಸೌಮ್ಯ ವೇರನೆಕರ ,ಡಾ. ಅಶೋಕ ಪಾಂಗಿ, ಡಾ. ಎಂ.ಎಸ್.ಕಡ್ಡಿ, ಡಾ.ಯೋಗೇಶ ರಾವಳ,ಡಾ. ಸ್ನೇಹಲ್ ವೆರನೆಕರ ಇತರರಿದ್ದರು.

Spread the love

About Laxminews 24x7

Check Also

ಕಬ್ಬಿನ ಬಿಲ್ ಬಾಕಿಗಾಗಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಎದುರು ರೈತ ಪ್ರತಿಭಟನೆ

Spread the loveಬೆಳಗಾವಿ: ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶುಕ್ರವಾರ ಮಹಾನಗರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ