ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರ ನೀಡಿರುವ 2D ಮೀಸಲಾತಿಯನ್ನು ತಿರಸ್ಕರಿಸಿರುವ ಪಂಚಮಸಾಲಿ ಸಮುದಾಯದ ನಾಯಕರು ತಮಗೆ 2A ಮೀಸಲಾತಿಯೇ ಬೇಕು ಎಂದು ಮತ್ತೊಮ್ಮೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಗುರುವಾರ ನಡೆದ ಸಮುದಾಯದ ನಾಯಕರ ಮಹತ್ವದ ಸಭೆ ನಡೆಸಿ ಚರ್ಚಿಸಿದರು.
2ಅ ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್, ತಮ್ಮ ಸರ್ಕಾರದ ವಿರುದ್ಧವೇ ಕಿಡಿಕಾರಿದ್ದಾರೆ. ‘ಬಸವರಾಜ ಬೊಮ್ಮಾಯಿಯವರು ಸಿಎಂ ಆದಾಗಿನಿಂದ ಈವರೆಗೂ ಹಾದಿ ತಪ್ಪಿಸುವ ಕೆಲಸವನ್ನೇ ಮಾಡಿದ್ದಾರೆ. ನಮ್ಮ ಸಮಾಜಕ್ಕೆ ಹಿಂದುಳಿದ ಆಯೋದ ವರದಿ ತರೆಸುತ್ತಾರೆ. ಪಂಚಮಸಾಲಿಗಳಿಗೆ ಟೋಪಿ ಹಾಕುವ ಕೆಲಸ . ಮುಂದಿನ 24 ಗಂಟೆಯಲ್ಲಿ ಮೀಸಲಾತಿ ಕೊಡ್ತಿರೋ ಇಲ್ಲವೋ ಹೇಳಬೇಕು’ ಅಂತಾ ಸಿಎಂಗೆ ಅಂತಿಮ ಗಡುವು ನೀಡಿದ್ದಾರೆ.
2A ಮೀಸಲಾತಿ ವಿಚಾರವಾಗಿ ಹೋರಾಡುತ್ತಿರುವ ನನಗೆ ಏನು ಮಾಡ್ತಾರೆ, ಪಕ್ಷದಿಂದ ಉಚ್ಛಾಟನೆ ಮಾಡ್ತಾರೆ ಅಷ್ಟೇ. ಸರ್ಕಾರದ ಮಂತ್ರಿಗಳಿಗೆ 2D ಅಂದ್ರೆ ಏನೂ ಅಂತಾನೇ ಗೊತ್ತಿಲ್ಲ. ಸಿಎಂ ಬೋಮ್ಮಾಯಿಯವರೇ ನಮಗೆ ಟಿಕೆಟ್ ಕೊಡದಿದ್ದರೂ ಪರವಾಗಿಲ್ಲ, ಮೀಸಲಾತಿ ಕೊಡುವುದಿಲ್ಲ ಅಂತನಾದ್ರೂ ಹೇಳಿ ಬಿಡಿ’ ಎಂದು ವಾಗ್ದಾಳಿ ನಡೆಸಿದ ಯತ್ನಾಳ್, ‘ನಮ್ಮ ಸಮಾಜದ ಮಂತ್ರಿಗೆ ಅಧಿಕಾರ ಬೇಕಿದೆ’ ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿಗೆ ಟಾಂಗ್ ನೀಡಿದರು.
ಮೀಸಲಾತಿ ನೀಡುವ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು 24 ಗಂಟೆಯಲ್ಲಿ ಸ್ಪಷ್ಟ ನಿರ್ಧಾರ ತಿಳಿಸಬೇಕು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡ್ತಿರೋ ಇಲ್ಲವೋ ಅನ್ನೋದನ್ನು ಸ್ಪಷ್ಟಪಡಿಸಬೇಕು. ಸಿಎಂ ಬೊಮ್ಮಾಯಿಯವರು ಇಡೀ ಸಮಾಜಕ್ಕೆ ಮೋಸ ಮಾಡಿದ್ದಾರೆ. ನಮ್ಮ ನಮ್ಮಲ್ಲಿಯೇ ಜಗಳ ಹಚ್ಚಲು ಪ್ರಯತ್ನ ಮಾಡಿದ್ದಾರೆ. ನಮಗೆ ಹೇಳಿದ್ರಿ 2D ಮೀಸಲಾತಿ, ಉದ್ಯೋಗ, ಶಿಕ್ಷಣ ಸಮಾನವಾಗಿ ಕೊಡ್ತಿವಿ ಅಂತಾ. ಆದರೆ ನಮಗೆ ನೀವು ಮೋಸ ಮಾಡಿದ್ದೀರಿ’ ಎಂದು ಯತ್ನಾಳ್ ಬೇಸರ ವ್ಯಕ್ತಪಡಿಸಿದರು.
ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ವಿರುದ್ಧ ಇದೇ ವೇಳೆ ಕಿಡಿಕಾರಿದ ಯತ್ನಾಳ್, ‘ನಾವು ಯಾರಿಗೂ ಧಮ್ಕಿ ಹಾಕಿಲ್ಲ. ನಾವು ಧಮ್ಕಿ ಹಾಕಿದ್ರೆ ನೀವು ಸುವರ್ಣಸೌಧದಲ್ಲಿ ಮೂತ್ರ ವಿಸರ್ಜನೆ ಮಾಡಲು ಆಗ್ತಿರಲಿಲ್ಲ. ನನ್ನ ಮೇಲೆ 27 ಕೇಸ್ ಇದ್ದವು, ಅವೆಲ್ಲವೂ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖುಲಾಸೆಯಾಗಿವೆ. ನಾವು ಯಾರಿಗೂ ಅಂಜಿಲ್ಲ, ನಾನು ರಾಜಕಾರಣದಲ್ಲಿ ಎಲ್ಲವೂ ಆಗಿರುವೆ. ನಮ್ಮ ಸಿದ್ದೇಶ್ವರ ಸ್ವಾಮೀಜಿಗಳ ಅನಾರೋಗ್ಯದ ಕಾರಣ ನಾನು ಇಷ್ಟುದಿನ ಸುಮ್ಮನಾಗಿದ್ದೆ. ಇನ್ನು ಸುಮ್ಮನಿರುವ ಮಾತೇ ಇಲ್ಲ’ ಅಂತಾ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.