Breaking News

ಬೈಲಹೊಂಗಲ ಪಟ್ಟಣದ ಧಾರವಾಡ- ಸವದತ್ತಿ ಮಾರ್ಗದ ಬೈಪಾಸ್ ರಸ್ತೆಯ ಮೇಲೆ ಧರಣಿ ಕುಳಿತ ಪ್ರತಿಭಟನಾಕಾರರು,

Spread the love

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ಎಲ್ಲ 27 ವಾರ್ಡ್‌ಗಳಲ್ಲಿಯೂ ರಸ್ತೆಗಳು ಸಂಪೂರ್ಣ ಹಾಳಾಗಿವೆ. ತಕ್ಷಣ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಸೋಮವಾರ ರಸ್ತೆ ತಡೆ ನಡೆಸಿದರು.

 

ಬೈಲಹೊಂಗಲ ಪಟ್ಟಣದ ಧಾರವಾಡ- ಸವದತ್ತಿ ಮಾರ್ಗದ ಬೈಪಾಸ್ ರಸ್ತೆಯ ಮೇಲೆ ಧರಣಿ ಕುಳಿತ ಪ್ರತಿಭಟನಾಕಾರರು, ಸ್ಥಳೀಯ ಶಾಸಕ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧವೂ ಕಿಡಿ ಕಾರಿದರು.

 

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಹಲವು ನಾಗರಿಕರು ಎರಡು ತಾಸಿನಿಂದ ರಸ್ತೆ ಮೇಲೆ ಕುಳಿತಿದ್ದಾರೆ.

 

ಮುಖ್ಯ ರಸ್ತೆ ಬಂದ್ ಆಗಿದ್ದರಿಂದ ಸವದತ್ತಿ, ಧಾರವಾಡ ಮಾರ್ಗದಲ್ಲಿ ಸಂಚರಿಸುವ ಹಲವು ವಾಹನಗಳ ದಾರಿಯಲ್ಲಿ ನಿಂತಿವೆ. ಪ್ರಯಾಣಿಕರು ಪರದಾಡುವಂತಾಗಿದೆ.

 

ಶಾಲೆ, ಕಾಲೇಜು, ಸರ್ಕಾರಿ ಕೆಲಸಕ್ಕೆ ಹೋಗಬೇಕಾದವರು ಬಸ್ ಇಳಿದು, ಬೇರೆ ಮಾರ್ಗಗಳಲ್ಲಿ ಸಾಗುವ ವಾಹನಗಳನ್ನು ಹುಡುಕಾಡಿದರು.

 

ರಸ್ತೆ ದುರಸ್ತಿ ಬಗ್ಗೆ ಖಚಿತ ಉತ್ತರ ಸಿಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ