ಬಾಗಲಕೋಟೆ : ಬಾಗಲಕೋಟೆಯಲ್ಲಿ ನನ್ನ ಗೆಲುವಲ್ಲ, ಬಿಜೆಪಿ, ಹಿಂದುತ್ವದ ಗೆಲುವಾಗಲಿ ಎಂದು ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿಯಾದ ಡಾ,ವೀರಣ್ಣ ಚರಂತಿಮಠ ಹೇಳಿದರು.
ಅವರು ನಗರದ ಶಿವಾನಂದ ಜಿನ್ ನಲ್ಲಿರುವ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಚುನಾವಣಾ ಪ್ರಚಾರ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ತಮ್ಮನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ಪಕ್ಷ ಕೇಂದ್ರ ಹಾಗೂ ರಾಜ್ಯದ ಮುಖಂಡರಿಗೆ ಅಭಿನಂದನೆಗಳನ್ನು ತಿಳಿಸಿದ ಅವರು ಯಾವತ್ತಿದ್ದರೂ ಬಾಗಲಕೋಟೆ ಭಾರತೀಯ ಜನತಾ ಪಕ್ಷದ ಭದ್ರ ಕೋಟೆ, 2023 ಪಕ್ಷದಲ್ಲಿನ ಗೊಂದಲ ಹಾಗೂ ಕಾಂಗ್ರೆಸ್ಸಿನ ಗ್ಯಾರಂಟಿಗಳಿಂದ ಸೋಲಾಯಿತು, ಆದರೆ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೇಲುವು ಸಾಧಿಸಿದೇವು, ಈ ಚುನಾವಣೆ ಯಾರಿಗೂ ಬೇಕಾಗಿರಲಿಲ್ಲಾ ಅನಿವಾರ್ಯವಾಗಿ ಚುನಾವಣೆ ಬಂದಿದೆ, ರಾಜ್ಯದಲ್ಲಿ ಕಾಂಗ್ರೆಸ್ಸ ಸರಕಾರ ಇರುವುದರಿಂದ ಸರಕಾರವೇ ಇಲ್ಲಿ ಬಂದು ಕೂತರು ಸಹಿತ ಬಿಜೆಪಿ ಕಾರ್ಯಕರ್ತರೂ ನಿರ್ಭಿಡೆಯಿಂದ ಕೆಲಸ ಮಾಡಿರಿ, ಚುನಾವಣೆಯನ್ನು ಹಬ್ಬದಂತೆ ಆಚರಣೆ ಮಾಡೋಣ, ಇಲ್ಲಿ ಧರ್ಮ ಹಾಗೂ ಹಿಂದೂತ್ವ ಗೆಲ್ಲಬೇಕು. ಬಾಗಲಕೋಟೆ ಹಿಂದುತ್ವದ ಭದ್ರಕೋಟೆ ಇಲ್ಲಿ ಕಮಲ ಅರಳಿ ಕಾರ್ಯಕರ್ತರ ಪಕ್ಷದ ಗೇಲುವಾಗಲಿ ಎಂದರು.
ಚುನಾವಣಾ ಪ್ರಚಾರ ಕಾರ್ಯಾಲಯವನ್ನು ಉದ್ಘಾಟಿಸಿ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ತಳ್ಳಿಕೇರಿ ಭಾರತೀಯ ಜನತಾ ಪಾರ್ಟಿ ಅಧಿಕಾರ ಅವಧಿಯಲ್ಲಿನ ಅಭಿವೃದ್ಧಿ ಕೇಲಸಗಳೆ ನಮಗೆ ಮಾನದಂಡವಾಗಿದ್ದು ಈ ಚುನಾವಣೆಯಲ್ಲಿ ಅತ್ಯಧೀಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠರ ಗೇಲುವು ನಿಶ್ಚಿತ, ಯದ್ದೋಪಹಾದಿಯಲ್ಲಿ ಪ್ರಚಾರ ಕಾರ್ಯವನ್ನು ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.
ಚುನಾವಣಾ ಉಸ್ತುವಾರಿ ಅರುಣ ಶಹಾಪುರ ಮಾತನಾಡಿ ಬಾಗಲಕೋಟೆ ಅಭಿವೃದ್ಧಿ ಖಂಡಿದ್ದು ಬಿಜೆಪಿ ಸರಕಾರದ ಅವಧಿ ಡಾ.ವೀರಣ್ಣ ಚರಂತಿಮಠರು ಶಾಸಕರಾದ ಅವಧಿಯಲ್ಲಿ ಎಂಬುವುದು ಜನಜನಿತ, ಅಭಿವೃದ್ಧಿಯ ಆಧಾರ ಮೇಲೆ ಮನೆ ಮನೆ ಪ್ರಚಾರ ಮಾಡಿ ಬೂತ ಗೆಲ್ಲುವ ಮೂಲಕ ಬಾಗಲಕೋಟೆ ಮತಕ್ಷೇತ್ರವನ್ನು ಗೆದ್ದು ಹೊಸ ವರ್ಷ ಯುಗಾದಿಯ ಶುಭ ಸಂದೇಶವನ್ನು ಸಾರೋಣ ಎಂದರು.
ರಾಜ್ಯಸಭಾ ಸದಸ್ಯರ ನಾರಾಯಣಸಾ ಭಾಂಡಗೆ ಮಾತನಾಡಿ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ಸ ಆಡಳಿತದಿಂದ ಜನ ಕಂಗಾಲಾಗಿದ್ದಾರೆ, ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಬಾಗಲಕೋಟೆ ಜನ ಹೊಸ ಸಂದೇಶ ಸಾರಲಿದ್ದಾರೆ,
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ ಕಳೆದ ಮೂರು ವರ್ಷಗಳಲ್ಲಿ ಬಾಗಲಕೋಟೆಯಲ್ಲಿ ಅಭಿವೃದ್ಧಿ ಶೂನ್ಯ ವಾತಾವರಣ ನಿರ್ಮಾಣವಾಗಿದೆ, ಜನರ ಇಂದು ಬಿಜೆಪಿ ಪರವಾಗಿ ಮತ ನೀಡಲು ಸಿದ್ದರಾಗಿದ್ದಾರೆ, ಚುನಾವಣೆಯನ್ನು ಎದುರಿಸಲೂ ಪಕ್ಷದ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ, ಬಿಜೆಪಿಯನ್ನು ಮತ್ತೆ ಗೆಲ್ಲಿಸೋಣ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ, ಡಾ.ಎಂ.ಎಸ್.ದಡ್ಡೆನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೋಣ್ಣೂರ ವೇಧಿಕೆ ಮೇಲೆ ಉಪಸ್ಥಿತರಿದ್ದರು, ಹೆಚ್ಚಿನ ಸಂಖ್ಯೆಲ್ಲಿ ಪಕ್ಷದ ಮುಖಂಡರು, ವಿವಿಧ ಮೋರ್ಚಾಗಳ ಪಧಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
*23 ಸೋಮವಾರ ನಾಮಪತ್ರ ಸಲ್ಲಿಕೆ*: ಅಂದು ಕಣವಿ ವೀರಭದ್ರೇಶ್ವರ ದೇವಸ್ಥಾನದಿಂದ ಭವ್ಯ ಮೇರವಣಿಗೆ ಪ್ರಾರಂಭವಾಗಿ ಬಿಳೂರು ಅಜ್ಜನ ಗುಡಿ, ಕಾಲೇಜು ರಸ್ತೆ ಟೀಕಿನಮಠ, ಅಡತ ಬಜಾರ, ಪೋಲಿಸ ಚೌಕ, ಮಹಾತ್ಮ ಗಾಂಧಿ ರಸ್ತೆ ಮೂಲಕ ಬಸವೇಶ್ವರ ವೃತ್ತದಲ್ಲಿ ಸಮಾರೋಪಗೊಳ್ಳುವುದು, ರಾಜ್ಯದ ನಾಯಕರು ಸಾರ್ವಜನಿಕರನ್ನೂದ್ದೇಶಿಸಿ ಮಾತನಾಡುವರು, ನಂತರ ನಾಮಪತ್ರ ಸಲ್ಲಿಸಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ನಗರ ಗ್ರಾಮೀಣ ಭಾಗದ ಕಾರ್ಯಕರ್ತರು ಅಭಿಮಾನಿಗಳು.ಸಾರ್ವಜಿಕರು ಅಗಮಿಸಿ ಯಶಸ್ವಿಗೊಳಿಸವುಂತೆ ಬಿಜೆಪಿ ಅಭ್ಯರ್ಥಿಯಾದ ಡಾ.ವೀರಣ್ಣ ಚರಂತಿಮಠ ವಿನಂತಿಸಿದ್ದಾರೆ.
Laxmi News 24×7