ಬಾಗಲಕೋಟೆ: ಉಪಚುನಾವಣೆಯ ಹಿನ್ನೆಲೆ ಬಿಜೆಪಿ ಪ್ರಚಾರ ರಂಗೇರಿದ್ದು ಬಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಸಂಗೋದಿ, ಶಿರಗುಪ್ಪಿ ತಾಂಡಾ, ಸಿಕ್ಕೇರಿ, ಬೇವಿನಮಟ್ಟಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆ ಮಾಡಲಾಯಿತು.
ಮತಯಾಚನೆಯಲ್ಲಿ ವೀರಣ್ಣ ಚರಂತಿಮಠ ಮಾತನಾಡಿ ಸರಕಾರದಲ್ಲಿ ಹಣ ಇಲ್ಲ ಈ ಸರಕಾರ ತೊಲಗುವ ವರೆಗೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ಉಪಚುನಾವಣೆಯಿಂದಲೇ ಕಾಂಗ್ರೆಸ್ ಪತಣ ಶುರುವಾಗಬೇಕು. ಚುನಾವಣೆ ಬೂತ್ ಗೆದ್ದರೆ ದೇಶ ಗೆಲ್ಲುತ್ತದೆ. ಹಿಂದೂ ಮೆರವಣಿಗೆಗಳ ಮೇಲೆ ಚಪ್ಪಲಿ, ಕಲ್ಲುಗಳನ್ನು ಎಸೆಯುವ ಕೃತ್ಯಗಳು ನಡೆಯುತ್ತಿವೆ. ಸಿದ್ದರಾಮಯ್ಯ ಅವರು ಮುಂದಿನ ಜನ್ಮ ಇದ್ದರೆ ಮುಸ್ಲಿಂ ಧರ್ಮದಲ್ಲಿ ಹುಟ್ಟಿಸು ಎಂದು ಹೇಳಿ ಅಲ್ಪಸಂಖ್ಯಾತರ ತುಷ್ಠಿಕರಣ ಮಾಡುತ್ತಿದ್ದಾರೆ. ಹಿಂದೂಗಳು ಒಂದಾಗುವ ಸಮಯ ಬಂದಿದೆ ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ ಮನಸ್ಸಿಟ್ಟು ಮಾಡಿದರೆ ಚುನಾವಣೆ ಎದುರಿಸಿವುದು ಸುಲಭ. ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳ ಆಡಳಿತವನ್ನು ನೋಡಿದ ನಾವುಗಳು ಬದಲಾಗಬೇಕು. ಹಿಂದೂ ಎಂದರೆ ಜಾತಿಯಲ್ಲ ಬದುಕುವ ಪದ್ದತಿಯಾಗಿದೆ. ಹಿಂದೂಗಳು ಯಾರನ್ನು ವಿರೋಧಿಸುವ ಕೆಲಸ ಮಾಡಿಲ್ಲ ಆದರೆ ಕಾಂಗ್ರೆಸ್ ಪಕ್ಷ ನಮ್ಮನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಎಚ್ಚೆತ್ತುಕೊಳ್ಳಬೇಕು. ಜಾತಿ, ಉಪಜಾತಿಗಳ ಕಿತ್ತಾಟದಿಂದ ಹೊರಬಂದು ಭವಿಷ್ಯತ್ತಿನ ಜೀವನಕ್ಕೆ ಭದ್ರಬುನಾದಿ ಹಾಕುವ ಕೆಲಸ ಮಾಡಬೇಕಿದೆ. ವ್ಯಕ್ತಿ ಮತ್ತು ರಾಜಕೀಯ ಶಾಶ್ವತವಲ್ಲ ದೇಶ ಮತ್ರು ಧರ್ಮ ಶಾಶ್ವತ ಎಂದು ಅರಿತುಕೊಂಡು ಬಿಜೆಪಿ ಗೆಲ್ಲಿಸಲು ಪಣತೊಡಬೇಕು ಎಂದರು.
ಶಾಸಕ ಪಿ. ರಾಜೀವ ಮಾತನಾಡಿ ಮಾತನಾಡಿ ಸರ್ವರನ್ನೂ ಸಮಾನರನ್ನಾಗಿ ಕಾಣುವ ಬಿಜೆಪಿಯನ್ನು ಬೆಂಬಲಿಸಿ ಹಳ್ಳಿಗಳ ಮೂಲೆಗಳವರೆಗೂ ಅಭಿವೃದ್ಧಿ ಹೊಳೆ ಹರಿಸಿದ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಿ ಎಂದರು.
ರಾಜು ನಾಯ್ಕರ ಮಾತನಾಡಿ ಬಿಜೆಪಿ ಆಡಳಿತದಲ್ಲಿ ವಾಲ್ಮಿಕಿ ಸಮುದಾಯದ ಅಭಿವೃದ್ಧಿಗೆ ಅನುದಾನ, ಮಿಸಲಾತಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದ್ದು ಕಾಂಗ್ರೆಸ್ ಪಕ್ಷ ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ನಡು ನೀರಲ್ಲಿ ಕೈಬಿಡುವ ಕೆಲಸ ಮಾಡಿದೆ. ಚುನಾವಣೆ ಬಂದಾಗ ಸಮಾಜದ ಸಭೆ ಕರೆಯುತ್ತಾರೆ. ಇದು ಸಮಾಜದ ಅಭಿವೃದ್ಧಿಗೆ ಅಲ್ಲ, ಕಾಂಗ್ರೆಸ್ ಪಕ್ಷ ಗೆಲುವಿಗೆ ಮಾತ್ರ ಎನ್ನುವುದನ್ನು ಅರಿತುಕೊಳ್ಳಬೇಕು. ಚುನಾವಣೆಯ ಪೂರ್ವ ಫಲಿತಾಂಶಗಳಲ್ಲಿ ಕಾಂಗ್ರೆಸ್ ಸೋಲಿತ್ತದೆ ಎಂದು ತಿಳಿದ ಕೂಡಲೆ ಮುಖ್ಯಮಂತ್ರಿಗಳು ಬಾಗಲಕೋಟೆಗೆ ಓಡಿ ಬಂದಿದ್ದಾರೆ ಇದು ವೀರಣ್ಣ ಚರಂತಿಮಠ ಅವರ ಅಭಿವೃದ್ಧಿ ಕಾರ್ಯಗಳ ಶಕ್ತಿ ಎನ್ನುವುದನ್ನು ಮತದಾರರು ತಿಳಿದುಕೊಳ್ಳಬೇಕಿದೆ. ಸಮಾಜದ ಯುವಕರು ಜಾಗೃತರಾಗಿ ಬಿಜೆಪಿ ಗೆಲ್ಲಿಸೋಣ ಎಂದರು.
ಮಹಾಂತೇಶ ಮಮದಾಪೂರ ಮಾತನಾಡಿ ಶಾಂತಿ ಮತ್ತು ಸೌಹಾರ್ದತೆಯ ದೇಶದಲ್ಲಿ ಕೋಮುಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ದೇಶವನ್ನು ವಿರೋಧಿಸುವವರನ್ನು ದ್ವೇಷಿಸಿದರೆ ತಪ್ಪಿಲ್ಲ. ಧರ್ಮಗಳ ಮಧ್ಯೆ ಬಿರುಕು ಮೂಡಿಸುವ ಕಾಂಗ್ರೆಸ್ ಸೋಲಿಸಿ ಬಿಜೆಪಿಯನ್ನು ಗೆಲ್ಲಿಸೋಣ ಎಂದರು.
ಪ್ರತಿ ಗ್ರಾಮಗಳಲ್ಲೂ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತ್ತು ಪಟಾಕಿ ಸಿಡಿಸಿ, ಡೊಳ್ಳು ಭಾರಿಸುತ್ತ ಸ್ವಾಗತಿಸಿ ಸನ್ಮಾನಿಸಿ ಬಿಜೆಪಿಗೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಪ್ರಭುಸ್ವಾಮಿ ಸರಗಣಾಚಾರಿ,
ಪ್ರೀಥಮ ಅರಕೇರಿ, ಮಹಾಂತೇಶ ಮಮದಾಪೂರ, ದುಂಡಪ್ಪ ಏಳೆಮ್ಮಿ, ವಿಶ್ವನಾಥ ಶಾಬನ್ನವರ, ಪರಶುರಾಮ ಛಬ್ಬಿ, ಶಂಕ್ರಯ್ಯ ಹಿರೇಮಠ, ಹೂವಪ್ಪ ರಾಠೋಡ, ದಿಲೀಪ್ ರಾಠೋಡ ಸೇರಿದಂತೆ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.
Laxmi News 24×7