Breaking News

Laxminews 24x7

ರಾಜ್ಯ ಕಾಂಗ್ರೆಸ್​ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್​

ಬೆಂಗಳೂರು: ಬಹಿರಂಗ ಹೇಳಿಕೆ ಯಾರು ಕೊಡಬಾರದು. ಇದು ನನ್ನ ಸೂಚನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಸದಾಶಿ‌ವನಗರ ನಿವಾಸದ ಬಳಿ ಮಾತನಾಡಿದ ಅವರು, ಇಂತಹ ಹೇಳಿಕೆ ಯಾರು ಕೊಡಬಾರದು ಇದು ನನ್ನ ಮೊದಲ ಸೂಚನೆ. ಏನೇ ತೀರ್ಮಾನ‌ ಮಾಡುವುದಿದ್ದರೂ ನಾನು, ರಾಹುಲ್‌ಗಾಂಧಿ, ಸೋನಿಯಾಗಾಂಧಿ ಇದ್ದೇವೆ. ನಾವೆಲ್ಲಾ ಕುಳಿತು ಸೂಕ್ತ ಕಾಲದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಬದಲಾವಣೆ, ಬದಲಾವಣೆ ಅಂತೀರಿ. ಎಲ್ಲಿದೆ ಬದಲಾವಣೆ?. ಸೂಕ್ತ ಕಾಲದಲ್ಲಿ ಅಂದ್ರೆ ನಾಳೆ ನಾಡಿದ್ದೇ ಅಲ್ಲ …

Read More »

ಕರ ವಸೂಲಾತಿಯಲ್ಲಿ ರಾಜ್ಯಕ್ಕೆ ಪ್ರಥಮಮುಂಡಗೋಡ ತಾಲೂಕು!

ಕಾರವಾರ: ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು 2024-25ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನೂ ಎರಡೂವರೆ ತಿಂಗಳು ಬಾಕಿ ಇರುವಾಗಲೇ ಗ್ರಾಮ ಪಂಚಾಯತ್ ಮಟ್ಟದ ಕರ ಸಂಗ್ರಹಣೆಯಲ್ಲಿ ಒಟ್ಟು ಬೇಡಿಕೆಯ ಶೇ.100 ರಷ್ಟು ವಸೂಲಾತಿ ಮಾಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿ ಕರ ಸಂಗ್ರಹಣೆಯಲ್ಲಿ ವಿನೂತನ ದಾಖಲೆ ಬರೆದಿದೆ.  ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುಂಡಗೋಡ ತಾಲೂಕಿನಲ್ಲಿ 1.52 ಕೋಟಿ ರೂ. ತೆರಿಗೆ ಸಂಗ್ರಹ ಗುರಿಗೆ ಪ್ರತಿಯಾಗಿ 1.53 ಕೋಟಿ …

Read More »

ಬೆಳಗಾವಿ ಸಾರ್ವಜನಿಕ ವಾಚನಾಲಯದ ಪ್ರಶಸ್ತಿ ಪ್ರಕಟ

ಬೆಳಗಾವಿ ಸಾರ್ವಜನಿಕ ವಾಚನಾಲಯದ ಪ್ರಶಸ್ತಿಯನ್ನು ಪ್ರಕಟ ಮಾಡಿದ್ದು ಕನ್ನಡಮ್ಮ ಸಂಸ್ಥೆಯ ಕೆಎಂಎಂ ಸುದ್ದಿ ವಾಹಿನಿಯ ಆ್ಯಂಕರ್ ಲಾವಣ್ಯ ಅನಿಗೋಳ ಸೇರಿದಂತೆ ಮೂವರು ಪತ್ರಕರ್ತರಾದ ಪುಂಡಾರಿ ಪತ್ರಿಕೆಯ ಸಂಜಯ ಸೂರ್ಯವಂಶಿ, ನ್ಯೂಸ್ 18 ಸುದ್ದಿವಾಹಿನಿಯ ಜಿಲ್ಲಾ ವರದಿಗಾರ ಚಂದ್ರಕಾಂತ ಸುಗಂದಿ, ಇನ್ ಬೆಳಗಾವಿ ಸುದ್ದಿವಾಹಿನಿಯ ನಿಲೀಮಾ ಲೋಹಾರ್ ಅವರಿಗೆ ಜ. 18 ರಂದು ಸಂಜೆ ವಾಚನಾಯಲದ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಸಾರ್ವಜನಿಕ ವಾಚನಾಲಯದ ಕಾರ್ಯದರ್ಶಿ ಸುನಿತಾ …

Read More »

ಹುಕ್ಕೇರಿ ತಾಲೂಕಿನ ಯರನಾಳ ಕಾಳಿಕಾ ಮಠಕ್ಕೆ ಭೇಟಿ ನೀಡಿದ್ಯ ಪ್ರೀಯಾಂಕಾ ಜಾರಕಿಹೋಳಿ

ಹುಕ್ಕೇರಿ : ಸತೀಶ ಜಾರಕಿಹೋಳಿ ಹೇಳಿಕೆಗೆ ಸ್ಪಷ್ಟನೆ ನಿಡಿದ್ದಾರೆ – ಸಂಸದೆ ಪ್ರೀಯಾಂಕ. ಸತಿಶ ಜಾರಕಿಹೋಳಿ ರಾಜ್ಯ ಅದ್ಯಕ್ಷ ಸ್ಥಾನದ ಕುರಿತು ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ ಅದರ ಬಗ್ಗೆ ಹಿರಿಯ ನಾಯಕರು ತಿರ್ಮಾನ ಮಾಡುತ್ತಾರೆ ಆ ಕುರಿತು ನಾನು ಹೇಳಿಕೆ ನೀಡುವಷ್ಟು ದೊಡ್ಡವಳಲ್ಲಾ ಎಂದು ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೋಳಿ ಹೇಳಿದರು. ಅವರು ಹುಕ್ಕೇರಿ ತಾಲೂಕಿನ ಯರನಾಳ ಕಾಳಿಕಾ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬ್ರಮ್ಮಾನಂದ ಅಜ್ಜನವರಿಂದ …

Read More »

ನಮ್ಮ ಠೇವಣಿ ಹಣ ಮರಳಿಸುವಂತೆ ಕಿತ್ತೂರು ಚನ್ನಮ್ಮ ಬ್ಯಾಂಕ್ ಗ್ರಾಹಕರು ಪ್ರತಿಭಟನೆ

ಬೆಳಗಾವಿ: ಬೈಲಹೊಂಗಲ ಕಿತ್ತೂರು‌ ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಠೇವಣಿದಾರರ ಹಣ ಮರು ಪಾವತಿಸುತ್ತಿಲ್ಲ. ಅಲ್ಲದೇ ಬ್ಯಾಂಕಿನಲ್ಲಿ ಸುಮಾರು 600 ಕೋಟಿ ರೂ.‌ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನೂರಾರು ಠೇವಣಿದಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಧರಣಿ‌ ನಡೆಸಿದರು. ನಗರದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದ ಠೇವಣಿದಾರರು, ಸೊಸೈಟಿ ಚೇರ್ಮನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಡವರು, ಕೂಲಿಕಾರರು ಕಷ್ಟಪಟ್ಟು …

Read More »

ಬೀದರ್​ ಎಟಿಎಂ ದರೋಡೆಕೋರರು ಹೈದರಾಬಾದ್​ನಲ್ಲಿ ಪತ್ತೆ

ಹೈದರಾಬಾದ್​/ಬೀದರ್​: ಬೀದರ್​​ನಲ್ಲಿ ಗುರುವಾರ ಬೆಳಗ್ಗೆ ಎಟಿಎಂಗೆ ಹಣ ತುಂಬಿಸುವ ಬ್ಯಾಂಕ್​ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಗಳು ಹೈದರಾಬಾದ್​ನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಹಿಡಿಯುವ ವೇಳೆ ಮತ್ತೆ ಗುಂಡು ಹಾರಿಸಿದ್ದಾರೆ. ಮೂವರು ದರೋಡೆಕೋರರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ. ಬೀದರ್​ನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಎಟಿಎಂಗೆ ಹಣ ತುಂಬಿಸಲು ಬ್ಯಾಂಕ್​ ಸಿಬ್ಬಂದಿ ತೆರಳಿದ್ದಾಗ, ದರೋಡೆಕೋರರು ಗುಂಡು ಹಾರಿಸಿ ಓರ್ವನನ್ನು ಕೊಂದು ಹಣದ ಸಮೇತ ಪರಾರಿಯಾಗಿದ್ದರು. ಪ್ರಕರಣ …

Read More »

ಮುಸುಕುಧಾರಿಗಳ ತಂಡವೊಂದು ಬಂದೂಕು ತೋರಿಸಿ ಉಳ್ಳಾಲದ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆ ನಡೆಸಿ ಪರಾರಿ

ಮಂಗಳೂರು: ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದ ಸಿಬ್ಬಂದಿಗೆ ಗುಂಡು ಹಾರಿಸಿ ಹಣ ದೋಚಿರುವ ಪ್ರಕರಣದ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದೆ. ನಗರದ ಹೊರವಲಯದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಇಂದು ಹಾಡಹಗಲೇ ಮುಸುಕುಧಾರಿಗಳು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರ ನಡುವೆ ಶಸ್ತ್ರಸಜ್ಜಿತ ತಂಡದಿಂದ ದರೋಡೆ ನಡೆದಿದೆ. ಸುಮಾರು 25 ರಿಂದ 35 ವರ್ಷ ವಯಸ್ಸಿನ ಐದಾರು ಜನರ …

Read More »

ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಹೊಸ ನಿಯಮ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆ ತರುವ ಹಿನ್ನೆಲೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ಇಲಾಖೆಯಲ್ಲಿನ ವರ್ಗಾವಣೆಗೆ ಹೊಸ ನಿಯಮಗಳನ್ನು ರೂಪಿಸಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಅಬಕಾರಿ‌ ಇಲಾಖೆಯ ವರ್ಗಾವಣೆ ನಿಯಮಗಳನ್ನು ಮಾರ್ಪಾಡು ಮಾಡುವ ಮೂಲಕ ಪಾರದರ್ಶಕ ಮತ್ತು ನಿಯಮಾಧಾರಿತ ವರ್ಗಾವಣೆ ಪದ್ಧತಿ ಜಾರಿಗೊಳಿಸುವುದರಿಂದ ಇತರೆ ಪ್ರಭಾವಗಳಿಗೆ ಒಳಗಾಗುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ …

Read More »

ಬೆಳಗಾವಿಯ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ರ‌್ಯಾಲಿ ಹೊಸ ಕ್ರಾಂತಿಗೆ ಸೂತ್ರ

ಬೆಳಗಾವಿ: ಕಾಂಗ್ರೆಸ್ ನೋಟಿಸ್ ನೀಡಿದೆ ಎಂಬ ವದಂತಿಗಳನ್ನೆಲ್ಲ ಯಾರೂ ಹಬ್ಬಿಸುತ್ತಿದ್ದಾರೆ ನನಗೆ ಗೊತ್ತಿಲ್ಲ. ಯಾವ ಸಚಿವರಿಗೂ, ಯಾವ ವ್ಯಕ್ತಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ. ಬಿಜೆಪಿ ಪ್ರಾಯೋಜಿತ ಆಧಾರ ರಹಿತ ಮಾತುಗಳ ಮೇಲೆ ವಿಶ್ವಾಸ ಇಡಬೇಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ‌ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸ್ಪಷ್ಟಪಡಿಸಿದರು. ಬೆಳಗಾವಿ ಸಾಂಬ್ರಾ ವಿಮಾನ‌ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಸುರ್ಜೇವಾಲ ಅವರು ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಪಕ್ಷದಿಂದ ನೋಟಿಸ್ ವದಂತಿ ವಿಚಾರಕ್ಕೆ …

Read More »

ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ಲಾಲಭಾಗನಲ್ಲಿ ಫಲ ಪುಷ್ಪ ಪ್ರದರ್ಶನ

ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ಲಾಲಭಾಗನಲ್ಲಿ ಫಲ ಪುಷ್ಪ ಪ್ರದರ್ಶನ 1 ಗಣರಾಜ್ಯೋತ್ಸವ ಅಂಗವಾಗಿ ಫಲ ಪುಷ್ಪ ಪ್ರದರ್ಶನ. 2 ಸಿ ಎಂ ಸಿದ್ದರಾಮಯ್ಯ ರಿಂದ ಚಾಲನೆ. 3 ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇಂದಿನಿಂದ ಆರಂಭ 4 …ಜನವರಿ 16 ರಿಂದ 27ರವರೆಗೆ ನಡೆಯುವ ಪ್ರದರ್ಶನ. – ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಇಂದಿನಿಂದ ಅಂದರೆ ಜನವರಿ 16 ರಿಂದ 27 …

Read More »