Breaking News

Laxminews 24x7

30 ವರ್ಷಗಳ ಅವಧಿಗೆ ಕಸ ವಿಲೇವಾರಿಗೆ ಟೆಂಡರ್ ಕರೆಯಲು ಸರ್ಕಾರದಿಂದ ಗ್ರೀನ್ ಸಿಗ್ನಲ್

ಬೆಂಗಳೂರು, ಅ.14- ನಗರದಲ್ಲಿ 30 ವರ್ಷಗಳ ಅವಧಿಗೆ ಕಸದ ಟೆಂಡರ್ ಕರೆಯಲು ಸರ್ಕಾರ ಅನುಮೋದನೆ ನೀಡಿದೆ ಎಂದು ಬಿ ಬಿ ಎಂ ಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. 30 ವರ್ಷಗಳ ಅವಧಿಗೆ ಕಸದ ಟೆಂಡರ್ ಕರೆಯುವ ಸವಿಸ್ತಾರವಾದ ಡ್ರಾಪ್ಟ್ ಅನ್ನು ನಾವು ಸರ್ಕಾರಕ್ಕೆ ಕಳುಹಿಸಿದ್ದೇವು. ಇದೀಗ ನಮ್ಮ ಕರಡಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಅದಷ್ಟು ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು. 30 ವರ್ಷಗಳ …

Read More »

ಸಾರಿಗೆ ಇಲಾಖೆಯ ಸ್ಮಾರ್ಟ್ ಕಾರ್ಡ್ ವಿತರಣೆ ಒಪ್ಪಂದ ವಿಸ್ತರಣೆ

ಬೆಂಗಳೂರು, ಅ.14- ಸಾರ್ವಜನಿಕರ ಚಾಲನಾ ಪರವಾನಗಿ ಪತ್ರದ ಸ್ಮಾರ್ಟ್ ಕಾರ್ಡ್ ಹಾಗೂ ವಾಹನ ನೋಂದಣಾ ಪತ್ರಗಳ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ವ್ಯತ್ಯಯವಾಗದಂತೆ ರಾಜ್ಯದ ಸಾರಿಗೆ ಇಲಾಖೆಯ ಸಾರಿಗೆ ಕಚೇರಿಗಳಲ್ಲಿ ಜಾರಿಗೊಳಿಸಿರುವ ಗಣಕೀಕೃತ ಸೇವಾ ವಿತರಣೆ (ಸಿಎಸ್‌ಡಿಎಸ್‌ಟಿಓಕೆ) ಯೋಜನೆಯನ್ನು ಡಿಸೆಂಬರ್ 24ರವರೆಗೆ ಮುಂದುವರಿಸಲಾಗಿದೆ. ಈ ಯೋಜನೆಯನ್ನು ಜಾರಿಗೊಳಿಸಲು ರೋಸ್ ಮರ್ಟ ಟೆಕ್ನಾಲಜೀಸ್ ಎಂಬ ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ 15 ವರ್ಷಗಳ ಅವಧಿಯ ಒಪ್ಪಂದ ಕಳೆದ ಸೆ.24ಕ್ಕೆ ಮುಗಿದಿದೆ. ಹೀಗಾಗಿ ಸೆ.25ರಿಂದ ಡಿಸೆಂಬರ್ 24ರವರೆಗೆ …

Read More »

ಸಿಎಂ ಬಂಧಿಸಿ ವಿಚಾರಣೆ ನಡೆಸುವಂತೆ ಲೋಕಾಯುಕ್ತಕ್ಕೆ ಮತ್ತೊಂದು ದೂರು

ಮೈಸೂರು, ಅ.14- ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಹಾಗೂ ಪ್ರಚೋದನೆ ನೀಡುವ ಕೃತ್ಯದಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಬಂಧಿಸಿ ವಿಚಾರಣೆಗೊಳ ಪಡಿಸುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸ್ ಅಧ್ಯಕ್ಷಕರಿಗೆ ದೂರು ನೀಡಿದ್ದಾರೆ. ದಸರಾ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ನೀಡಲಾದ ಜಾಹೀರಾತುವಿನಲ್ಲಿ ಮುಖ್ಯಮಂತ್ರಿಯವರು ತಮ್ಮ ಮೇಲಿನ ಆರೋಪವನ್ನು ಮುಚ್ಚಿಕೊಳ್ಳಲು ಹಾಗೂ ಪ್ರಚೋದನೆ ನೀಡಲು ಸಾರ್ವಜನಿಕರ ಹಣವನ್ನು ದುರ್ಬಳಕೆ …

Read More »

ವಿಜಯೇಂದ್ರ ತಂದೆ ಪೋಕ್ಸೊ ಕೇಸ್ ನಲ್ಲಿದ್ದಾರೆ ಅವರು ರಾಜೀನಾಮೆ ಕೊಡಲಿ.

ವಿಜಯೇಂದ್ರ ಪುರೋಹಿತನಾ, ಭವಿಷ್ಯ ಹೇಳೋರಾ ??? ಬೆಳಗಾವಿ ಅಧಿವೇಶನಕ್ಕೆ ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಎಂಬ ವಿಚಾರ. ವಿಜಯೇಂದ್ರ ಪುರೋಹಿತನಾ, ಭವಿಷ್ಯ ಹೇಳೋರಾ ಅವರು. ದಸರಾ ಮುಗಿಯುದರೊಳಗೆ ಬದಲಾಗ್ತಾರೆ ಅಂತಾ ಒಬ್ಬರು ಹೇಳಿದ್ರೂ. ದಸರಾ ಮುಗಿತು ಅಲ್ವಾ, ಈಗ ವಿಜಯೇಂದ್ರ ಎನ್ ಹೇಳ್ತಾನೆ. ವಿಜಯೇಂದ್ರ ಮೊದಲು ಅವರ ತಂದೆ ಪೋಕ್ಸೊ ಕೇಸ್ ನಲ್ಲಿದ್ದಾರೆ ಅವರು ರಾಜೀನಾಮೆ ಕೊಡಲಿ. ಅವನು ರಾಜೀನಾಮೆ ಕೊಡಲಿ. ಅವರು ರಾಜೀನಾಮೆ ಕೊಡದೇ ಅವರು ಇಡಿಯಲ್ಲಿದ್ದಾರೆ. ಇನ್ನೊಬ್ಬರ ಬಗ್ಗೆ …

Read More »

ರಾಜ್ಯದ 3 ಉಪಚುನಾವಣೆ ಈ ವಾರವೇ ಘೋಷಣೆ?

  ತುಕಾರಾಂ ಅವರು ಗೆದ್ದು ಸಂಸದರಾಗಿದ್ದಾರೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದರಿಂದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ದಸರಾ ಅನಂತರ ವೇಳಾಪಟ್ಟಿ ಪ್ರಕಟಿಸಲು ಆಯೋಗ ತಯಾರಿ ಮಾಡಿಕೊಂಡಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿಯಿಂದ ಈಗಾಗಲೇ ವರದಿ ಪಡೆದುಕೊಂಡಿದೆ.

Read More »

ಗೋಕಾಕನ ಮಾರ್ಕಂಡೇಯ ನದಿಯಲ್ಲಿ ಆಯತಪ್ಪಿ ಕಾಲು ಜಾರಿ ಬಿದ್ದ ಯುವಕ

ಗೋಕಾಕನ ಮಾರ್ಕಂಡೇಯ ನದಿಯಲ್ಲಿ ಆಯತಪ್ಪಿ ಕಾಲು ಜಾರಿ ಬಿದ್ದ ಯುವಕ ನದಿಯಲ್ಲಿ ಕಣ್ಮರೆಯಾದ ಯುವಕನಿಗಾಗಿ ಅಗ್ನಿಶಾಮಕ ಹಾಗೂ ಪೊಲೀಸರ ಹುಡುಕಾಟ. ಸಾಗರ ಮಾರುತಿ ಗೌಳಿ(೧೬) ನದಿಯಲ್ಲಿ ಕಣ್ಮರೆಯಾಗಿರೋ ಯುವಕ. ಗೋಕಾಕನ ಮಾರ್ಕಂಡೇಯ ನದಿಯಲ್ಲಿ ನಡೆದ ಘಟನೆ. ನಿನ್ನೆ ಮಧ್ಯಾಹ್ನ ನದಿಗೆ ಆಯತಪ್ಪಿ ಬಿದ್ದಿರುವ ಯುವಕ. ನಿನ್ನೆಯಿಂದ ಸತತವಾಗಿ ಯುವಕನಿಗಾಗಿ ಕುಡುಕಾಟ ನಡೆಸ್ತಿರೋ ಅಗ್ನಿಶಾಮಕ ಸಿಬ್ಬಂಧಿ. ಗೋಕಾಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

Read More »

ಪ್ರಿಯಕರನ ಜತೆ ಸೇರಿ ಇಬ್ಬರು ಎಳೆಯ ಮಕ್ಕಳನ್ನೇ ಕೊಂದ ತಾಯಿ!

ಪ್ರಿಯಕರನ ಜತೆ ಸೇರಿ ಇಬ್ಬರು ಎಳೆಯ ಮಕ್ಕಳನ್ನೇ ಕೊಂದ ತಾಯಿ!   ರಾಮನಗರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂದು ಪ್ರಿಯಕರನ ಜತೆ ಸೇರಿ ತಾಯಿಯೇ ತನ್ನ 2 ಗಂಡು ಮಕ್ಕಳನ್ನು ಕೊಂದು ಶ್ಮಶಾನದಲ್ಲಿ ಹೂತು ಹಾಕಿದ ಘಟನೆ ನಗರದ ಜಾಲಮಂಗಲ ರಸ್ತೆ ಗೀತಾಮಂದಿರ ಬಡಾವಣೆಯಲ್ಲಿ ನಡೆದಿದೆ. ಕಬಿಲ (2), ಕಬಿಲನ್‌ (11 ತಿಂಗಳು) ಹತ್ಯೆಯಾದ ಮಕ್ಕಳು. ತಾಯಿ ಸ್ವೀಟಿ, ಪ್ರಿಯಕರ ಜಾರ್ಜ್‌ ಫ್ರಾನ್ಸಿಸ್‌ ಮಕ್ಕಳನ್ನು ಕೊಂದು ಹೂತುಹಾಕಿದ್ದು ಇವರ ವಿರುದ್ಧ ಕ್ರಮಕ್ಕೆ ತಂದೆ …

Read More »

ಗೌರಿ ಲಂಕೇಶ್‌ ಹತ್ಯೆ ಆರೋಪಿಗಳಿಗೆ ಜಾಮೀನು; ಅದ್ದೂರಿ ಸ್ವಾಗತ, ಸಮ್ಮಾನ!

ವಿಜಯಪುರ: ಜಾಮೀನು ಮೇಲೆ ಬಿಡುಗಡೆಯಾಗಿರುವ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಾದ ಜಿಲ್ಲೆಯ ಪರಶುರಾಮ ವಾಘ್ಮೋರೆ ಮತ್ತು ಮನೋಹರ್‌ ಯಡವೆಯನ್ನು ಹಿಂದೂಪರ ಸಂಘಟನೆ ಮುಖಂಡರು ಸಮ್ಮಾನಿಸುವುದರೊಂದಿಗೆ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ಬೆಂಗಳೂರಿನಲ್ಲಿ 2017ರ ಸೆ. 5ರಂದು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ವಿಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆ, ಸಿಂದಗಿ ತಾಲೂಕಿನ ಪರಶುರಾಮ ವಾಘ್ಮೋರೆ ಅವರನ್ನು ಬಂಧಿಸಲಾಗಿತ್ತು. ಆರೂವರೆ ವರ್ಷ ಜೈಲಿನಲ್ಲಿದ್ದ ಅವರಿಗೆ ಕೋರ್ಟ್‌ …

Read More »

ಯಲ್ಲಮ್ಮ ದೇವಿ ಭಕ್ತರಿಗೆ ದಾಸೋಹ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ನೀಡಿ: ಸಿಎಂ

ಬೆಳಗಾವಿ: ಶ್ರೀರೇಣುಕಾ ಯಲ್ಲಮ್ಮ ದೇವಿ ಸನ್ನಿಧಿಗೆ ಪ್ರತೀ ವರ್ಷ 1.5 ಯಿಂದ 2 ಕೋಟಿ ಭಕ್ತರು ಬರುವುದರಿಂದ ಆರೋಗ್ಯಕರ ದಾಸೋಹ ವ್ಯವಸ್ಥೆ ಮತ್ತು ವೈಜ್ಞಾನಿಕ ಪದ್ಧತಿಯ ಕಸ ವಿಲೇವಾರಿ ವ್ಯವಸ್ಥೆ ರೂಪಿಸಬೇಕು. ಹಾಗೆಯೇ ಬರುವ ಭಕ್ತರಿಗೆ ತಾಯಿಯ ದರ್ಶನ ಕಡ್ಡಾಯ ಸಿಗುವ ವ್ಯವಸ್ಥೆಯ ಪ್ರಥಮ ಆದ್ಯತೆಯಲ್ಲಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.   ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ರವಿವಾರ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮತ್ತು ರೇಣುಕಾ ಯಲ್ಲಮ್ಮ …

Read More »

ಭಾರೀ ಮಳೆ; ವಾಹನ ಸಂಚಾರ ಅಸ್ತವ್ಯಸ್ತ

ಬೆಳ್ತಂಗಡಿ: ತಾಲೂಕಿನ ಹಲವೆಡೆ ರವಿವಾರ ಸಂಜೆ ಭಾರೀ ಮಳೆಯಾ ಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿ ಅಲ್ಲಲ್ಲಿ ರಸ್ತೆ ತಡೆಯುಂಟಾದ ಘಟನೆ ನಡೆದಿದೆ. ತಾಲೂಕಿನಾದ್ಯಂತ ಮುಂಜಾನೆ ಬಿಸಿಲಿನ ವಾತಾವರಣ ಕಂಡುಬಂದರೆ, ಮಧ್ಯಾಹ್ನ ಬಳಿಕ ನಿರಂತರ ಮಳೆಯಾಗುತ್ತಿದೆ. ರವಿವಾರ ಸಂಜೆ ಸುಮಾರು 5 ಗಂಟೆಯಿಂದ ಧರ್ಮಸ್ಥಳ, ಉಜಿರೆ, ಮುಂಡಾಜೆ ಸಹಿತ ತಾಲೂಕಿನಾದ್ಯಂತ ಹಲವಡೇ ತಾಸುಗಟ್ಟಲೆ ಭಾರೀ ಮಳೆ ಸುರಿದಿದೆ. ಉಜಿರೆ ಕೆಳಗಿನ ಪೇಟೆ ಸಹಿತ ಅಲ್ಲಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. …

Read More »