Breaking News

Laxminews 24x7

ಬಾಲಕಿಯನ್ನು ಕರೆದ್ಯೊಯ್ದು ಸುಲೇಮಾನ್ ಅತ್ಯಾಚಾರ: ವಿಡಿಯೋ ಮಾಡಿದ ಅಲ್ತಾಫ್ ಅರೆಸ್ಟ್!

ಗದಗ, ): ಮಂಡ್ಯದಲ್ಲಿ 8 ವರ್ಷದ ಬಾಲಕಿಯ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಇಂದು (ಫೆಬ್ರವರಿ 03) ಗದಗನಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದ್ಯೊಯ್ದು ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಗದಗ ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಘಟನೆ ನಡೆದಿದ್ದು,  ಕಾಮಾಂಧರ ದುಷ್ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.  ಅತ್ಯಾಚಾರಿ ಆರೋಪಿ ಸುಲೇಮಾನ್​ ಸೇರಿದಂತೆ ಅತ್ಯಾಚಾರ ಎಸಗುವುದನ್ನು ವಿಡಿಯೋ ಮಾಡಿದ್ದ …

Read More »

ಸರ್ಕಾರಿ ವೈದ್ಯರ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವು

ಚಾಮರಾಜನಗರ, : ‘ವೈದ್ಯೋ ನಾರಾಯಣೋ ಹರಿಃ’ ಎಂಬ ಉಕ್ತಿಯಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆದರೆ ಪ್ರಾಣ ಉಳಿಸಬೇಕಿರುವ ವೈದ್ಯನೇ ಬದುಕಿ ಬಾಳ ಬೇಕಾಗಿದ್ದ ಪುಟ್ಟ ಕಂದನ ಪ್ರಾಣ (death) ತೆಗೆದಿರುವ ಆರೋಪ ಕೇಳಿಬಂದಿದೆ. ವೈದ್ಯ ಮಾಡಿದ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ. ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯ 6 ತಿಂಗಳ ಮಗುವಿನ ಪ್ರಾಣವನ್ನು ತೆಗೆದಿದ್ದಾನೆ. ಡಾಕ್ಟರ್ ಮಾಡಿದ ಸಣ್ಣದೊಂದು ಎಡವಟ್ಟಿಗೆ ಬದುಕಿ …

Read More »

ಬೆಂಗಳೂರಲ್ಲಿ ಆರ್​ಟಿಓ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ತೆರಿಗೆ ಪಾವತಿಸದ 30 ಐಷಾರಾಮಿ ಕಾರುಗಳು ಸೀಜ್‌

ಬೆಂಗಳೂರು, : ತೆರಿಗೆ (tax) ಪಾವತಿ ಮಾಡದೆ ಅನಧಿಕೃತವಾಗಿ ನಗರದಲ್ಲಿ ಸಂಚಾರ ಮಾಡುತ್ತಿದ್ದ ಫೆರಾರಿ, ಪೋರ್ಷೆ ಮತ್ತು ರೇಂಜ್ ರೋವರ್​ ಸೇರಿದಂತೆ 30 ಐಷಾರಾಮಿ ಸ್ಪೋರ್ಟ್ಸ್ ಕಾರುಗಳನ್ನು ಆರ್‌ಟಿಒ ಅಧಿಕಾರಿಗಳು ಸೋಮವಾರ ಸೀಜ್‌ ಮಾಡಿದ್ದಾರೆ. ಜಪ್ತಿಯಾದ ಕಾರುಗಳಿಂದ 3 ಕೋಟಿ ರೂ. ತೆರಿಗೆ ವಸೂಲಿ ಆಗಬೇಕಿದೆ. ನಿನ್ನೆ ನಗರದಲ್ಲಿ ಕಾರ್ಯಚರಣೆ ಮಾಡಿದ ಆರ್‌ಟಿಒ ಅಧಿಕಾರಿಗಳು ಮಾಸೆರಾಟಿ, ಫೆರಾರಿ, ಪೋರ್ಷೆ, ರೇಂಜ್ ರೋವರ್, ಬಿಎಂಡಬ್ಲ್ಯು ಸೇರಿ 30 ಲಕ್ಸುರಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ದೆಹಲಿ, …

Read More »

ಕರ್ನಾಟಕದಲ್ಲಿಂದು ಒಂದೇ ದಿನ 7 ಆತ್ಮಹತ್ಯೆ

ಬೆಂಗಳೂರು, (ಫೆಬ್ರವರಿ 03): ಕರ್ನಾಟಕದಲ್ಲಿಂದು (ಫೆಬ್ರವರಿ 03) ಒಂದೇ ದಿನ ಬರೋಬ್ಬರಿ ಏಳು ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ಐದು ಜನರು ಸಾಲಬಾಧೆಯಿಂದ ಸಾವಿನ ಹಾದಿ ತುಳಿದಿದ್ದರೆ,. ಸಾಲಬಾಧೆಯಿಂದ ಚಿಕ್ಕಬಳ್ಳಾಪುರದಲ್ಲಿ ಇಬ್ಬರು, ಹಾಸನ-1 , ಬೀದರ್-1, ದಾವಣಗೆರೆ ಜಿಲ್ಲೆಯಲ್ಲಿ ಓರ್ವ ರೈತ ಸಾವಿನ ಹಾದಿ ತುಳಿದಿದ್ದಾರೆ. ಇನ್ನು ತುಮಕೂರಿನ ವ್ಯಕ್ತಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗೆಳೆಯ ಮೋಸ ಮಾಡಿದ್ದಾನೆಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ …

Read More »

ದೆಹಲಿಯಲ್ಲಿ ಯತ್ನಾಳ್ ಬಣದಿಂದ ಅಂತಿಮ ಹಂತದ ಕದನ

ನವದೆಹಲಿ, (ಫೆಬ್ರವರಿ 03): ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಕಿತ್ತಾಟದಿಂದ ಆರಂಭವಾದ ಬಿಜೆಪಿ ಬಣ ಬಡಿದಾಟ ಜಿಲ್ಲಾಧ್ಯಕ್ಷರ ನೇಮಕದವರೆಗೂ ಬಂದು ನಿಂತಿದೆ. ವಿಜಯೇಂದ್ರ ವಿರುದ್ಧ ಸಮರ ಸಾರಿರೋ ಯತ್ನಾಳ್ ಬಣ ದಿನಕ್ಕೊಂದು ಬಾಣ ಪ್ರಯೋಗಿಸ್ತಿದೆ. ಇಷ್ಟು ದಿನ ರಾಜ್ಯದಲ್ಲಿ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಅಸ್ತ್ರ ಪ್ರಯೋಗಿಸುತ್ತಿದ್ದ ಯತ್ನಾಳ್ ಆ್ಯಂಡ್ ಟೀಂ ದೆಹಲಿಗೆ ಶಿಫ್ಟ್ ಆಗಿದ್ದು, ವಿಜಯೇಂದ್ರ ವಿರುದ್ಧ ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಹಂತದ ಪ್ರಹಾರಕ್ಕೆ ಮುಂದಾಗಿದೆ. ಈಗಾಗಲೇ ಯತ್ನಾಳ್ …

Read More »

ದಳಪತಿ ವಿಜಯ್ ಕೊನೆ ಸಿನಿಮಾ ‘ಜನನಾಯಗನ್’ ಓವರ್ ಸೀಸ್ ಹಕ್ಕಿಗೆ PHF film ಸಾರಥ್ಯ

ದಾಖಲೆ‌ ಅಂದರೆ ದಳಪತಿ.. ದಳಪತಿ ಅಂದರೆ ದಾಖಲೆ ಅನ್ನೋದು ಪ್ರತಿ ಸಿನಿಮಾದಲ್ಲಿಯೂ ಸಾಬೀತು ಆಗುತ್ತಲೆ‌ ಇದೆ. ಅದರಲೂ ರಾಜಕೀಯ ಅಖಾಡಕ್ಕೆ ಇಳಿದಿರುವ ವಿಜಯ್ ವೃತ್ತಿಜೀವನದ ಕೊನೆ ಸಿನಿಮಾ ಜನನಾಯಗನ್ ಪ್ರಭೆ ಎಲ್ಲೆಡೆ ಹಬ್ಬಿದೆ. ಬಿಡುಗಡೆಗೂ‌‌ ಮೊದಲೇ ಈ ಚಿತ್ರ ಹಲವು ರೆಕಾರ್ಡ್ ಬರೆಯುತ್ತಿದೆ. ವಿಜಯ್ರ ಕೊನೆಯ ಚಿತ್ರ ಇದಾಗಿರುವ ಕಾರಣ ಭಾರಿ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಅತಿ ದೊಡ್ಡ ಬಜೆಟ್ ನಲ್ಲಿ ಜನನಾಯಗನ್ ಸಿನಿಮಾವನ್ನು ಕರ್ನಾಟಕದ ಹೆಮ್ಮೆಯ …

Read More »

ಪಟ್ಟಾ ಜಮೀನು ಹೊಂದಿರುವವರ ಅರಣ್ಯ ಹಕ್ಕು ಅರ್ಜಿ ಪರಿಶೀಲನೆಗೆ ಖಂಡ್ರೆ ಸೂಚನೆ.

ಬೆಂಗಳೂರು : ಅರಣ್ಯ ಹಕ್ಕು ಕಾಯಿದೆ ಅಡಿ ಸೌಲಭ್ಯಕ್ಕಾಗಿ ಪಟ್ಟಾ ಜಮೀನು ಹೊಂದಿರುವವರೂ ಅರ್ಜಿ ಹಾಕಿದ್ದರೆ ಪರಿಶೀಲಿಸಿ ಕೈಬಿಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ. ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಸಚಿವರು, ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಹ ಫಲಾನುಭವಿಗಳಿಗೆ ಅಂದರೆ 2005ರ ಡಿಸೆಂಬರ್ 13ಕ್ಕೆ ಮೊದಲು ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಬಳಸುತ್ತಿರುವ ಮತ್ತು ಅರಣ್ಯದಲ್ಲಿ ವಾಸಿಸುತ್ತಿರುವವರಿಗೆ ಅನ್ಯಾಯವಾಗದಂತೆ …

Read More »

ಬೆಳಗಾವಿ ಕೆ.ಎಲ್.ಇ ಆಸ್ಪತ್ರೆ ಎದುರಿನ ಬೈಕ್ ಕದಿಯುತ್ತಿದ್ದ ಕಳ್ಳ ಅಂದರ್; ಒಟ್ಟು 4 ಬೈಕ್ ವಶ.

ಬೆಳಗಾವಿ:  ಎಪಿಎಂಸಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಕೆಎಲ್ಇ ಆಸ್ಪತ್ರೆಯ ಮುಂದುಗಡೆ ನಿಲಿಸಲಾಗಿರುವ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನ ಪತ್ತೆ ಹಚ್ಚಿ ಆತನಿಂದ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಎಪಿಎಮ್ ಸಿಯ ಪೋಲಿಸ್ ಇನ್ಸ್ಪೆಕ್ಟರ್ ಯು.ಎಸ್.ಅವಟಿ ಅವರು ತನ್ನ ತಂಡದೊಂದಿಗೆ ಕಾಕತಿಯ ಅಂಬೇಡ್ಕರಗಲ್ಲಿಯ ಮೋಹಮ್ಮದ ಶಾಯಿದ ಅಬ್ದುಲ್ ಹಮೀದ್ ಮುಲ್ಲಾ ಈತನನ್ನು ಪತ್ತೆ ಹಂಚಿ ತನಿಖೆ ನಡೆಸಿ ಕಳ್ಳತನ ಮಾಡಿದ ಎರಡು ಹಿರೋ ಹೊಂಡಾ ಸ್ಪೆಂಡರ್, ಒಂದು ಹೋಂಡಾ ಆಕ್ಟಿವಾ, ಒಂದು …

Read More »

ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ನಗರದಲ್ಲಿ ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸಿದರು.

ಬೆಳಗಾವಿ: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ‌ಧರಿಸಿಕೊಂಡು ವಾಹನ ಚಲಾಯಿಸಬೇಕೆಂದು ನಗರದ ಚನ್ನಮ್ಮ ವೃತ್ತದಲ್ಲಿ ನಗರ ಸಂಚಾರ ಪೊಲೀಸರು ವಿಶೇಷ ಅಭಿಯಾನ ನಡೆಸಿದರು. ನಗರದಲ್ಲಿ ರಸ್ತೆ ಅಪಘಾತದಲ್ಲಿ ವಾಹನ ಸವಾರರು ಹೆಲ್ಮೆಟ್ ಧರಸಿದೆ ಮೃತಪಟ್ಟ ಘಟನೆ ಹೆಚ್ಚಾಗುತ್ತಿದೆ. ಆದ್ದರಿಂದ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಮೊದಲು ಹೆಲ್ಮೆಟ್ ‌ಧರಿಸದ ಪೊಲೀಸ್ ಸಿಬ್ಬಂದಿಗಳಿಗೆ ದಂಡ ವಿಧಿಸಿದ್ದ ಸಂಚಾರ ಪೊಲೀಸರು ಈಗ ಸಾರ್ವಜನಿಕರು ಹೆಲ್ಮೆಟ್ ಧರಿಸದವರ ವಿರುದ್ಧ ವಿಶೇಷ ಅಭಿಯಾನ …

Read More »

ಸಮುದಾಯ ಭವನ ಉದ್ಘಾಟಿಸಿದ ಚನ್ನರಾಜ ಹಟ್ಟಿಹೊಳಿ.

ಮುತ್ನಾಳ ಗ್ರಾಮದ ಶ್ರೀ 1008 ಚಂದ್ರಪ್ರಭು ತೀರ್ಥಂಕರ ಜಿನ ಮಂದಿರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಮುದಾಯ ಭವನ ಹಾಗೂ ಜೀರ್ಣೋದ್ಧಾರ ಕಾರ್ಯಕ್ರಮಗಳನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಬೆಳಗ್ಗೆ ಉದ್ಘಾಟಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಸಮುದಾಯ ಭವನ ನಿರ್ಮಾಣಗೊಂಡಿದೆ. ಕ್ಷೇತ್ರದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕೆಲಸ-ಕಾರ್ಯಗಳಿಗೆ ಸಹೋದರಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮೊದಲ ಪ್ರಾಶಸ್ತ್ಯ ನೀಡುತ್ತಿದ್ದು, ಸರ್ವ …

Read More »