“ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶಿಲನೆ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷರು” ಹುಕ್ಕೇರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇಲ್ಲಿನ ಸಮೀಪದ ಮಸರಗುಪ್ಪಿ ಬಳಿಯ ಹಿರಣ್ಯಕೇಶಿ ನದಿಯ ಹೂಳೆತ್ತುವ ಮತ್ತು ಪುನಶ್ಚೇತನಗೊಳಿಸುವ ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು. ಬಳಿಕ ಸಮೀಪದ ಚಿಕ್ಕಾಲಗುಡ್ಡ ಗ್ರಾಮದಲ್ಲಿ ಕೈಷಿ ಇಲಾಖೆಯಿಂದ ರೈತರಿಗೆ ಬೀಜ ವಿತರಣೆ ಕಾರ್ಯಕ್ರಮವನ್ನು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿ.ಪಂಚಾಯತಿ ಸಿಇಒ …
Read More »ದುರ್ಯೋಧನ ಐಹೊಳೆ ವಿರುದ್ಧ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆಕ್ರೋಶ
ಚಿಕ್ಕೋಡಿ: ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕಾಗಿರುವ ರಾಯಬಾಗ ಶಾಸಕರು ತಮ್ಮ ಕ್ಷೇತ್ರದಲಿ ಒಂದು ಊರಿಗೆ ಕೇವಲ 20 ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆಕ್ರೋಶ ವ್ಯಕ್ತ ಪಡಿಸಿದರು. ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಬಾಗ ಶಾಸಕರ ಮೂರು ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿರುವ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿ ಹಳ್ಳಿಗಳ ಬಡ ಮತ್ತು …
Read More »ರಾಮದುರ್ಗ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹಿರಿಕಿರಿಯ ಎಲ್ಲ NHM ಗುತ್ತಿಗೆ ಆಧಾರದ ಮೇಲೆ ಕಾರ್ಯ ಮಾಡುತ್ತಿರುವ ವರ್ಗದ ಸಿಬ್ಬಂದಿಗಳು ಹಾಗೂ ವೈದ್ಯರು ಸರಕಾರಕ್ಕೆ ತಮ್ಮ ಕೂಗು ನಿಲುಕಲಿ ಎಂದು.
ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹಿರಿಕಿರಿಯ ಎಲ್ಲ NHM ಗುತ್ತಿಗೆ ಆಧಾರದ ಮೇಲೆ ಕಾರ್ಯ ಮಾಡುತ್ತಿರುವ ವರ್ಗದ ಸಿಬ್ಬಂದಿಗಳು ಹಾಗೂ ವೈದ್ಯರು ಸರಕಾರಕ್ಕೆ ತಮ್ಮ ಕೂಗು ನಿಲುಕಲಿ ಎಂದು.. ದಿನದ ಕರ್ತವ್ಯ ನಿಭಾಯಿಸುತ್ತಲೇ.. ಸಮವಸ್ತ್ರದಲ್ಲಿದ್ದೂ ರಟ್ಟೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಿ.. ಈ ಮೂಲಕ ಮನವಿ ಕೂಡ ಅರ್ಪಿಸಿದರು. ಸಮಾನ ವೇತನ, ಸೇವಾಭದ್ರತೆ ಹಾಗೂ ಇನ್ನಿತರ ವಿಷಯಗಳನ್ನು ಇಟ್ಟುಕೊಂಡು.. ಈ ವಿಷಯಗಳ ಭಿತ್ತಿಚಿತ್ರ …
Read More »ಕಿಮ್ಸ್ ವೈದ್ಯರ ಜೊತೆ ಕೊರೊನಾ ಚಿಕಿತ್ಸೆ ಬಗ್ಗೆ ಬೊಮ್ಮಾಯಿ ಚರ್ಚೆ………
ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ವೈದ್ಯರ ನಿಯೋಗ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಹುಬ್ಬಳ್ಳಿಯ ಗೃಹ ಕಛೇರಿಯಲ್ಲಿ ಭೇಟಿ ಮಾಡಿ, ಕೋವಿಡ್-19 ಕುರಿತು ಚರ್ಚಿಸಿದರು. ಕಿಮ್ಸ್ ಆಸ್ಪತ್ರೆ ವೈದ್ಯರ ತಂಡ ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿದ್ದು, ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಐಸಿಎಂಆರ್ ಕಿಮ್ಸ್‍ಗೆ ಅನುಮತಿ ನೀಡಿದೆ. ಹೀಗಾಗಿ ತಮ್ಮ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಮನವಿಯನ್ನು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅವರ ನೇತೃತ್ವದ ತಂಡ ಗೃಹ ಸಚಿವರಿಗೆ ಸಲ್ಲಿಸಿದೆ. ಮನವಿಯನ್ನು …
Read More »ಸರ್ಕಾರದಿಂದ 5 ಸಾವಿರ ರೂ. ನೆರವು – ಯಾವ ಕಾಮಿರ್ಕರಿಗೆ ಅನ್ವಯ? ಯಾವ ದಾಖಲೆ? ಎಲ್ಲಿ ಸಲ್ಲಿಸಬೇಕು?
ಮಡಿಕೇರಿ: ಲಾಕ್‍ಡೌನ್ ಸಮಯದಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕಾರ್ಮಿಕರಿಗೆ ಧನ ಸಹಾಯ ಮಾಡಲು ಮುಂದಾಗಿದೆ. ಈಗ ಈ ಧನಸಹಾಯವನ್ನು ಪಡೆಯಲು ಕಾರ್ಮಿಕರು ಯಾವ ಮಾರ್ಗವನ್ನು ಅನುಸರಿಸಬೇಕು ಮತ್ತು ಸರ್ಕಾರದ ಈ ಹಣವನ್ನು ಪಡೆಯಲು ಯಾರು ಅರ್ಹರು ಎಂಬ ಮಾಹಿತಿಯನ್ನು ಮಡಿಕೇರಿ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಮಡಿಕೇರಿ ಜಿಲ್ಲಾಡಳಿತ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದೆ. ಕರ್ನಾಟಕ ಸರ್ಕಾರದ ಅದೇಶದನ್ವಯ ಕರ್ನಾಟಕ ಕಟ್ಟಡ ಮತ್ತು ಇತರೆ …
Read More »ತಮ್ಮ ವೇತನದಿಂದ ಕಂಟೈನ್ಮೆಂಟ್ ಝೋನ್‍ನಲ್ಲಿರೋ ಬಡವರಿಗೆ ಉಚಿತ ದಿನಸಿ ವಿತರಿಸ್ತಿರೋ ಪೇದೆ
ಬೆಳಗಾವಿ/ಚಿಕ್ಕೋಡಿ: ಕಂಟೈನ್ಮೆಂಟ್ ಝೋನ್‍ನಲ್ಲಿರುವ ಬಡ ಜನರು ಹೊರಗೆ ಬರಲಾಗದೆ ಅವರ ಜೀವನ ತುಂಬಾ ಕಷ್ಟವಾಗಿದೆ. ಇದೀಗ ಇವರ ಸ್ಥಿತಿಯನ್ನ ನೋಡಿ ಪೊಲೀಸ್ ಕಾನ್ಸ್‌ಟೇಬಲ್ ಸಹಾಯ ಮಾಡುತ್ತಿದ್ದಾರೆ. ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಬಿ.ಕೆ.ನಾಗನೂರೆ ದಿನನಿತ್ಯ ಬಡವರಿಗೆ ತರಕಾರಿ ಹಂಚುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸಂಕೇಶ್ವರ ಪಟ್ಟಣವನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಸಂಕೇಶ್ವರ ಪಟ್ಟಣದಲ್ಲಿ ಬಡವರು ದಿನಗೂಲಿ ಇಲ್ಲದೇ ಆಹಾರಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ …
Read More »ಪೊಲೀಸರು ಮಾಡಿದ ಒಂದು ತಪ್ಪಿನಿಂದ ಧಾರವಾಡದಲ್ಲಿ ಓರ್ವ ಅಂಗವಿಕಲ ಇಂದು ಕೊಲೆಯಾಗಿದ್ದಾರೆ ಎಂಬ ಆರೋಪ?
ಧಾರವಾಡ: ಪೊಲೀಸರು ಮಾಡಿದ ಒಂದು ತಪ್ಪಿನಿಂದ ಧಾರವಾಡದಲ್ಲಿ ಓರ್ವ ಅಂಗವಿಕಲ ಇಂದು ಕೊಲೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೌದು. ಧಾರವಾಡದ ಪತ್ರೇಶ್ವರ ನಗರದಲ್ಲಿ ಈ ಕೊಲೆ ನಡೆದಿದ್ದು, ಉಮೇಶ್ ಬಾಳಗಿ (37) ಕೊಲೆಯಾದ ಅಂಗವಿಕಲ. ಕಳೆದ ಹಲವು ವರ್ಷಗಳಿಂದ ಉಮೇಶ್ ಬಾಳಗಿ ಹಾಗೂ ಸಂಬಂಧಿಕರ ನಡುವೆ ಆಸ್ತಿ ವಿವಾದ ನಡೆದಿತ್ತು. ಈ ಮೊದಲು ಉಮೇಶ್‍ನ ಮೇಲೆ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆಗ ಉಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. …
Read More »ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಲು,ಬ್ರೇಡ್, ಬಿಸ್ಕತ್ತು ವಿತರಣೆ
ಹುಕ್ಕೇರಿ:ಸ್ಥಳೀಯ ಗುಡಸ ಗ್ರಾಮದ ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮೀತಿಯ ತಾಲೂಕ ಅಧ್ಯಕ್ಷರಾದ ರವೀಂದ್ರ ಬಡಿಗೇರ ಅವರು ಮಹಾಮಾರಿ ಕೊರೋನ ರೋಗ ತಡೆಗಟ್ಟಲು ಪ್ರತಿನಿತ್ಯ ಪ್ರಾಣದ ಹಂಗಿಲ್ಲದೇ ಹೋರಾಡುತ್ತಿರುವ ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಲು, ಬ್ರೇಡ್, ಬಿಸ್ಕತ್ತುಗಳು ಕೊಟ್ಟು ವಿತರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಸುರೇಶ ಪತ್ತಾರ.ರಾಜ್ಯ ಉಪಾಧ್ಯಕ್ಷರಾದ ಸಿದ್ದಾರೋಡ ಬಡಿಗೇರ. ಮಹೇಶ್ ಪತ್ತಾರ.ಬಸವರಾಜ ಬಡಿಗೇರ.ಆಶಾ-ಅಂಗನವಾಡಿ ಕಾರ್ಯಕರ್ತೆಯರು,ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.
Read More »ಮೇ 18ರ ನಂತರ ಬಸ್ ಸೇವೆ ಪ್ರಾರಂಭದ ಸುಳಿವು ಕೊಟ್ಟ ಬಿಎಂಟಿಸಿ…….
ಬೆಂಗಳೂರು: ಮೇ 17ಕ್ಕೆ ಲಾಕ್‍ಡೌನ್ ಅವಧಿ ಮುಗಿಯುತ್ತಿರುವ ಹಿನ್ನೆಲೆ ಸಿಬ್ಬಂದಿಗೆ ಬಿಎಂಟಿಸಿ ಆದೇಶ ಹೊರಡಿಸಿದ್ದು, ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಬಸ್ ಸೇವೆ ಮತ್ತೆ ಆರಂಭವಾಗುವ ಸುಳಿವನ್ನು ನೀಡಿದೆ. ಮೇ 18ರಿಂದ ಎಲ್ಲಾ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಜಾರಿಗೊಳಿಸಿದ ಹಿನ್ನೆಲೆ ಬಿಎಂಟಿಸಿ ಸೇರಿದಂತೆ ಎಲ್ಲಾ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಸ್ಥಗಿತಗೊಂಡಿದ್ದವು. ಕೆಲ ಬಿಎಂಟಿಸಿ ಬಸ್‍ಗಳು …
Read More »ಯುಎಇಯಿಂದ ಉಡುಪಿಗೆ ಬಂದ ಐವರಿಗೆ ಕೊರೊನಾ……..
ಉಡುಪಿ: ಯುಎಇಯಿಂದ ಉಡುಪಿಗೆ ಬಂದ 49 ಮಂದಿ ಪೈಕಿ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇನ್ನಿಬ್ಬರ ವರದಿ ಬರುವುದು ಬಾಕಿಯಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. 47 ದಿನದಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿರಲಿಲ್ಲ, ಹೀಗಾಗಿ ಜಿಲ್ಲೆ ಗ್ರೀನ್ ಝೋನ್‍ನಲ್ಲಿ ಇತ್ತು. ಆದರೆ ವಿದೇಶಿ ನೆಲದಲ್ಲಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಕ್ಕೆ ಭಾರತ ಮುಂದಾಗಿದ್ದು, ಉಡುಪಿ ಜಿಲ್ಲೆಗೆ 49 ಮಂದಿ ಯುಎಇಯಿಂದ ಬಂದಿದ್ದು, ಅವರಲ್ಲಿ …
Read More »
Laxmi News 24×7