Breaking News

Laxminews 24x7

ಗ್ರಾಮ ಪಂಚಾಯತ್​ ಚುನಾವಣೆಯನ್ನ ನಡೆಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್.ಕೆ.ಪಾಟೀಲ್ ಪತ್ರ

ಬೆಂಗಳೂರು: ಗ್ರಾಮ ಪಂಚಾಯತ್​ ಚುನಾವಣೆ ನಡೆಸುವಂತೆ ಮಾಜಿ ಸಚಿವ ಹೆಚ್.ಕೆ. ಪಾಟೀಲ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ. ಈಗ ವಿಶ್ವದಲ್ಲಿ ಕೊರೋನಾ ವೈರಸ್​ ಹಾವಳಿಯಿದೆ. ವೈರಸ್ ನಿಂದ ವಿಶ್ವವೇ ತತ್ತರಿಸಿದೆ. ಈ ಸಂಕಷ್ಟದ ಕಾಲದಲ್ಲಿ ಚುನಾವಣೆಗಳು ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಪಂಚಾಯತ್ ಚುನಾವಣೆಗಳನ್ನು ಮುಂದೂಡಬೇಕು ಎಂದು ಚುನಾವಣಾ ಆಯೋಗಕ್ಕೆ ವಿನಂತಿಸಿಕೊಂಡಿದೆ. ಇದು ಸರಿಯಲ್ಲ. ಸರ್ಕಾರ ಚುನಾವಣೆ ಮುಂದೂಡಿಕೆಗೆ ಪ್ರಯತ್ನ ನಡೆಸಿದೆ ಜೊತೆಗೆ ಡಿಸಿಗಳ …

Read More »

ಜನರನ್ನು ಮೂರ್ಖರನ್ನಾಗಿ ಮಾಡುವುದಷ್ಟೇ ಮೋದಿ ಪ್ಯಾಕೇಜ್………..

ಬೆಂಗಳೂರು: ರಾಜ್ಯಗಳಿಗೆ ಆರ್ಥಿಕ ನೆರವು ನೀಡುವಂತೆ 15ನೇ ಪೇ ಕಮೀಷನ್, ನಾಲ್ಕು ಅಂಶಗಳನ್ನು ಆಧರಿಸಿ​ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ರಾಜ್ಯಗಳಿಗೆ ಯಾವ ರೀತಿ ಹಣ ಸಂದಾಯ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಘೋಷಿಸಿರುವ ವಿಶೇಷ ಪ್ಯಾಕೇಜ್​ನಲ್ಲಿ ಕೇಂದ್ರದ ಪಾಲೆಷ್ಟು(?) ಆರೂವರೆ ಲಕ್ಷ ಕೋಟಿಯಲ್ಲಿ ಕೇಂದ್ರದ ಪಾಲು 2,500 ಕೋಟಿ ಮಾತ್ರ. ಕೇಂದ್ರದ 2,500 ಕೋಟಿಯಿಂದ …

Read More »

ತಾಯಿಯ ಶವದೊಂದಿಗೆ 5 ದಿನ ಮನೆಯಲ್ಲೇ ಕಳೆದ ಮಗಳು………

ಶಿವಮೊಗ್ಗ: ತಾಯಿ ಮೃತಪಟ್ಟು ಐದು ದಿನವಾದರೂ ಮಗಳು ಶವದೊಂದಿಗೆ ಐದು ದಿನಗಳ ಕಾಲ ಕಳೆದಿರುವ ಘಟನೆ ಶಿವಮೊಗ್ಗದ ಬಸವನಗುಡಿಯಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಬಸವನಗುಡಿ ನಿವಾಸಿ ನಿವೃತ್ತ ಶಾಲಾ ಶಿಕ್ಷಕಿ ರಾಜೇಶ್ವರಿ ಎಂದು ಗುರುತಿಸಲಾಗಿದೆ. ಮೃತ ರಾಜೇಶ್ವರಿ ಪತಿ ಸಹ ಕಳೆದ 20 ವರ್ಷದ ಹಿಂದೆಯೇ ಮೃತಪಟ್ಟಿದ್ದರು. ಹೀಗಾಗಿ ಮನೆಯಲ್ಲಿ ತಾಯಿ ಮಗಳು ಇಬ್ಬರೇ ವಾಸಿಸುತ್ತಿದ್ದರು. ಆದರೆ ಕಳೆದ ಹಲವು ವರ್ಷಗಳಿಂದ ಮೃತ ರಾಜೇಶ್ವರಿ ಸ್ತನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. …

Read More »

ರಾಜ್ಯದಲ್ಲಿ ಇಂದು ಒಂದೇ ದಿನ 127 ಜನರಿಗೆ ಕೊರೋನಾ ಸೋಂಕು……..

ರಾಜ್ಯದಲ್ಲಿ ಇಂದು ಒಂದೇ ದಿನ 127 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟೂ 1373 ಜರಿಗೆ ಸೋಂಕು ತಗುಲಿದಂತಾಗಿದೆ. ಮಂಡ್ಯ 51, ಉತ್ತರ ಕನ್ನಡ 4, ದಾವಣಗೆರೆ 19, ಶಿವಮೊಗ್ಗ 12, ಬೆಂಗಳೂರು 6, ಹಾಸನ 3, ಗದಗ 1, ಚಿಕ್ಕಮಗಳೂರು 2, ಚಿತ್ರದುರ್ಗ1, ಉಡುಪಿ 4, ಕಲಬುರ್ಗಿ 11, ಯಾದಗಿರಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇಂದು ಸೋಂಕು ದೃಢಪಟ್ಟವರ ಪೈಕಿ 59 ಮಹಿಳೆಯರಿದ್ದಾರೆ. ಗ್ರೀನ್ ಝೋನ್ ನಲ್ಲಿದ್ದ ಚಿಕ್ಕಮಗಳೂರಲ್ಲೂ …

Read More »

ಜೀ ವಾಹಿನಿಯ ಸಿಬ್ಬಂದಿಗಳಿಗೆ ಕೊರೊನಾ ಸೊಂಕು…!?

ಜೀ ಸುದ್ದಿ ವಾಹಿನಿ ದೇಶದ ಸುದ್ದಿ ವಾಹಿನಿಗಳ ಸಾಲಿನಲ್ಲಿ ಅಗ್ರ ಸ್ಥಾನ ಪಡೆಯುತ್ತದೆ, ಇಂತಹ ದೈತ್ಯ ಸಂಸ್ಥೆಯ ಸಿಬ್ಬಂದಿಗಳಿಗೆ ಕೊವಿಡ್ ೧೯ ದೃಡವಾಗಿದೆ. 28 ಸಿಬ್ಬಂದಿಗಳಿಗೆ ಕೊರೊನಾ ದೃಡವಾಗಿದ್ದು, ೩೫೦೦ ಸಿಬ್ಬಂದಿಗಳ ಗಂಟಲಿನ ದೃವದ ಪರಿಕ್ಷೆಗೆ ಕಳುಹಿಸಲಾಗಿದೆ. ಜೀ ವಾಹಿನಿಯ ಪ್ರಧಾನ ಸಂಪಾದಕರಾದ ಸುಧೀರ್ ಚೌದರಿಯವರು ಈ ಬಗ್ಗೆ ಟ್ವೀಟ್ ಮಾಡಿದ್ದು, ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ”ಇದು ಅತ್ಯಂತ ಕಷ್ಟದ ಸಮಯ ನಮ್ಮ 28 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. …

Read More »

ಹುಕ್ಕೇರಿ ಸದಲಗಾ ಪಟ್ಟಣದಲ್ಲಿರುವ ಏಕವೀರಾ ತಾಯಿ ದೇವಸ್ಥಾನದ ಕೆರೆಯನ್ನು ದುರಸ್ತಿ

ಚಿಕ್ಕೋಡಿ – ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಸದಲಗಾ ಪಟ್ಟಣದಲ್ಲಿರುವ ಏಕವೀರಾ ತಾಯಿ ದೇವಸ್ಥಾನದ ಕೆರೆಯನ್ನು ದುರಸ್ತಿ ಮಾಡಿಸಿದ್ದಾರೆ. ಆ ಮಾರ್ಗವಾಗಿ ಹೋಗುವಾಗ ಹತ್ತಿರವಿರುವ ಕೆರೆ‌ ಹಾಗೂ ಸುತ್ತಮುತ್ತಲಿ‌ನ ಪರಿಸ್ಥಿತಿಯನ್ನು ಗಮನಿಸಿದರು. ಅದು ಹೂಳು ಮತ್ತು ಪಾಚಿಯಿಂದ ತುಂಬಿರುವುದನ್ನು ಗಮನಿಸಿದ ಶಾಸಕರು  ಕೂಡಲೆ  ಸಂಪೂರ್ಣ ಕೆರೆಯನ್ನು ದುರಸ್ತಿ ಹಾಗೂ ಸ್ವಚ್ಛ ಮಾಡಿಸಿದರು . ಶಾಸಕರ ಈ ಕಳಕಳಿಗೆ ಏಕವೀರಾತಾಯಿ ದೇವಸ್ಥಾನದ ಕಮಿಟಿಯವರು ಕೃತಜ್ಞತೆ ಸಲ್ಲಿಸಿದರು.

Read More »

ಬೆಳಗಾವಿ ಇಂದ ಬೆಂಗಳೂರಿಗೆ ಮೊದಲನೇ ಬಸ್……..

ಬೆಳಗಾವಿ:  ಇಂದು ಬೆಳಗಾವಿ ಇಂದ ಬಸ್ ಸಂಚಾರ ಆರಂಭ ಮೊದಲು ಬೆಳಗಾವಿ ಇಂದ ಬೆಂಗಳೂರಿಗೆ ಮೊದಲನೇ ಬಸ್ ಹೊರಟಿತು ಹಾಗೇ ಮುನ್ನೆಚ್ಚರಿಕೆ ಕ್ರಮ ವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಕೇವಲ 30 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶ ಇತ್ತು ಹಾಗೇ ಸಿಹಿ ಹಂಚಿ ಬೆಳಗಾವಿ ಇಂದ ಮೊದಲನೇ ಬಸ್ ಬೆಂಗಳೂರಿನ ಕಡೆಗೆ ಹೊರಟಿತು ಬಸ್ ನಿಲ್ದಾಣದ ತುಂಬಾ ಮುನ್ನೆಚ್ಚರಿಕಾ ಕ್ರಮ ತೊಗೊಂಡು ಮಾಸ್ಕ್ ಧರಿಸುವುದು ಕಡ್ಡಾಯ ವಾಗಿತ್ತು ಸುಮಾರು ದಿನಗಳಿಂದ …

Read More »

ಕಲ್ಯಾಣ ಕರ್ನಾಟಕ್ಕೆ ಬಸ್ ಸಂಚಾರ ಇರುವುದಿಲ್ಲಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸಾರಿಗೆ ಸಚಿವರ ಈ ದಿಢೀರ್ ಹೇಳಿಕೆ ಈಗ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಕಲ್ಯಾಣ ಕರ್ನಾಟಕಕ್ಕೆ ನಾಳೆಯಿಂದ ಬಸ್ ಸಂಚಾರ ಆರಂಭವಾಗಲಿದೆ. ಇಂದು ಕಲ್ಯಾಣ ಕರ್ನಾಟಕ್ಕೆ ಬಸ್ ಸಂಚಾರ ಇರುವುದಿಲ್ಲಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸಾರಿಗೆ ಸಚಿವರ ಈ ದಿಢೀರ್ ಹೇಳಿಕೆ ಈಗ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಹೊರ ಜಿಲ್ಲೆಗಳಿಗೆ ಕೆ ಎಸ್ ಆರ್ ಟಿಸಿ ಸೇರಿದಂತೆ ಸಾಮಾನ್ಯ ಬಸ್ ಸಂಚಾರ ಇರಲಿದೆ ಎಂದು ನಿನ್ನೆ ಸಿಎಂ …

Read More »

ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ಎಲ್ಲ ಬಸ್‍ಗಳ ಟಿಕೆಟ್ ಸೋಲ್ಡ್ ಔಟ್…….

ಶಿವಮೊಗ್ಗ: ಲಾಕ್‍ಡೌನ್‍ನ ನಾಲ್ಕನೇ ಹಂತ ಆರಂಭವಾದ ಬೆನ್ನಲ್ಲೇ ರಾಜ್ಯದಲ್ಲಿ ನಿಗದಿತ ಬಸ್ ಸಂಚಾರವನ್ನು ಸರ್ಕಾರ ಆರಂಭಿಸಿದ್ದು, ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ಬಹುತೇಕ ಎಲ್ಲ ಬಸ್‍ಗಳ ಟಿಕೇಟ್ ಸೋಲ್ಡ್ ಔಟ್ ಆಗಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹಲವರು ಸೀಟ್ ಕಾಯ್ದಿರಿಸಿ ಪ್ರಯಾಣಿಸುತ್ತಿದ್ದು, ಇನ್ನೂ ಹಲವರು ನೇರ ಟಿಕೆಟ್ ಪಡೆದು ಸಂಚರಿಸುತ್ತಿದ್ದಾರೆ. ಈಗಾಗಲೇ 6 ಬಸ್‍ಗಳು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿವೆ. ಮಧ್ಯಾಹ್ನ 1 ಗಂಟೆಯವರೆಗೆ ಇನ್ನೂ ಆರೇಳು ಬಸ್‍ಗಳು ಸಿಲಿಕಾನ್ ಸಿಟಿಯತ್ತ ಪ್ರಯಾಣ ಬೆಳೆಸಲು …

Read More »

ಲಾರಿಯಲ್ಲಿ 74 ವಲಸೆ ಕಾರ್ಮಿಕರ ಸಾಗಾಟ…

ಧಾರವಾಡ: ಅಕ್ರಮವಾಗಿ 74 ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಧಾರವಾಡದ ಗರಗ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದ ಕಾಸರಗೋಡಿನಿಂದ 27 ಮತ್ತು ಮಂಗಳೂರಿನಿಂದ 47 ಕಾರ್ಮಿಕರನ್ನು ಹೊತ್ತ ಲಾರಿಗಳು ರಾಜಸ್ಥಾನಕ್ಕೆ ಹೊರಟಿದ್ದವು. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರ್.ಜೆ. 14 ಜಿಜೆ-2909 ಹಾಗೂ ಎಚ್‍ಆರ್- 46 ಸಿಎಸ್- 703 ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ಎಲ್ಲ …

Read More »