Breaking News

Laxminews 24x7

ಗ್ರೀನ್ ಎನರ್ಜಿ ಸೋಲಾರ್ ಸಿಸ್ಟಂ ಪವರ್ ಕಂಪನಿಯು ಕೊರೋನಾ ಸಂಕಷ್ಠದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತಕ್ಕೆ 50ಸಾವಿರ ರೂಪಾಯಿ ಬೆಲೆ ಬಾಳುವ ಆಹಾರ ಪದಾರ್ಥಗಳನ್ನು ವಿತರಿಸಿದರು

ಮಂಡ್ಯ:ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆಕೊಪ್ಪಲಿನಲ್ಲಿರುವ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಸಿಸ್ಟಂ ಪವರ್ ಕಂಪನಿಯು ಕೊರೋನಾ ಸಂಕಷ್ಠದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತಕ್ಕೆ 50ಸಾವಿರ ರೂಪಾಯಿ ಬೆಲೆ ಬಾಳುವ ಆಹಾರ ಪದಾರ್ಥಗಳನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಹಸ್ತಾಂತರಿಸಿದರು. ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಇಂದು ಸಂಕಷ್ಠದಲ್ಲಿದೆ. ಜನಸಾಮಾನ್ಯರ ಸಂಕಷ್ಠಗಳು ಹಾಗೂ ನೋವು ನಲಿವುಗಳಿಗೆ ಪ್ರಾಮಾಣಿಕವಾದ ಸ್ಪಂದನೆಯಲ್ಲಿ ತೊಡಗಿಸಿಕೊಂಡಿರುವ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಸಿಸ್ಟಂ ಕಂಪನಿಯು 50ಸಾವಿರ ರೂಪಾಯಿ …

Read More »

ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿರುವ ತಾಲ್ಲೂಕು ಆಡಳಿತಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ ಮುಂಬೈ ಕನ್ನಡಿಗರು.

ಮಂಡ್ಯ :ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನ 16 ಹೋಂ ಕ್ವಾರಂಟೈನ್ ಸೆಂಟರ್ ಗಳಲ್ಲಿರುವ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಹಾಲು ವಿತರಣೆ ಮಾಡಿದ ತಹಶೀಲ್ದಾರ್ ಎಂ.ಶಿವಮೂರ್ತಿ. ಮಕ್ಕಳಿಗೆ ನಂದಿನಿ ಬ್ರಾಂಡ್ ನ ಸುವಾಸಿತ ಬಾದಾಮಿ ಹಾಲಿನ ಪ್ಯಾಕೇಟ್ ಗಳು ಮತ್ತು ಗರ್ಭಿಣಿ ಮಹಿಳೆಯರಿಗೆ ಟೆಟ್ರಾ ಪ್ಯಾಕ್ ನಂದಿನಿ ವಿಶೇಷ ಹಾಲಿನ ಪ್ಯಾಕೇಟುಗಳನ್ನು ವಿತರಿಸಿ ಕ್ವಾರಂಟೈನ್ ಸೆಂಟರ್ ಗಳಲ್ಲಿರುವ ಮುಂಬೈ ಕನ್ನಡಿಗ ಬಂಧುಗಳ ಯೋಗಕ್ಷೇಮವನ್ನು ತಹಶೀಲ್ದಾರ್ ಶಿವಮೂರ್ತಿ ವಿಚಾರಿಸಿ …

Read More »

ಮಂಡ್ಯ ಮಾತನಾಡುವವರು ಮಾತಾಡಿಕೊಳ್ಳಲಿ. ಕೆಲಸ ಇಲ್ಲದವರು ಮಾತಾಡುತ್ತಾರೆ. ನಮಗೆ ಮಾಡಲು ಬೇಕಾದಷ್ಟು ಕೆಲಸವಿದೆ.

ಮಂಡ್ಯ :ಕೋವಿಡ್ -19 ತಡೆಗಟ್ಟುವ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣಗೌಡ ಹೇಳಿದ್ದಾರೆ. ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಿ, ಐಬಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದ್ರು. ನಮ್ಮ ಮೇಲೆ ಆರೋಪ ಮಾಡಿದವರ ಕ್ಷೇತ್ರಕ್ಕೇ ಮುಂಬೈನಿಂದ ಹೆಚ್ಚಿನ ಜನ ಬರುತ್ತಿದ್ದಾರೆ. ಇದಕ್ಕೆ ಅವರು ಏನು ಹೇಳುತ್ತಾರೆ ಇಂಥ ಸಂದರ್ಭದಲ್ಲಿ ರಾಜಕೀಯ ಮಾಡಬಾರದು. ಬಂದವರಿಗೆ ಕ್ವಾರಂಟೈನ್ ಸೌಲಭ್ಯ ನೀಡುವುದು …

Read More »

ರಾಜ್ಯದಲ್ಲಿ ಇಂದು 196 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ

ಬೆಂಗಳೂರು – ರಾಜ್ಯದಲ್ಲಿ ಇಂದು 196 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸ್ವಲ್ಪ ಹೊತ್ತಿನ ಮೊದಲು ಸಚಿವ ಸುರೇಶ ಕುಮಾರ 130 ಜನರಿಗೆ ಇಂದು ಸೋಂಕು ತಗುಲಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಅದು ತಪ್ಪು ಮಾಹಿತಿ ಎನ್ನುವುದು ದೃಢವಾಗಿದ್ದು, ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 196 ಜನರಿಗೆ ಸೋಂಕು ಪತ್ತೆಯಾಗಿದೆ. ಇಂದು ಈವರೆಗಿನ ದಾಖಲೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 1939 ಆಗಿದೆ. ಬೆಳಗಾವಿಯಲ್ಲಿ ಇಂದು …

Read More »

ಕ್ವಾರಂಟೈನ್ ಕೇಂದ್ರದ ಬಳಿ ಬ್ರೆಡ್, ಮೊಟ್ಟೆ ಮಾರಾಟ: ಓಡಿ ಬಂದ ಜನ

ರಾಯಚೂರು: ನಗರದ ಹೊರವಲಯದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದ ಜನ ಆಹಾರ ಪದಾರ್ಥಗಳಿಗಾಗಿ ಹೊರಬರುತ್ತಿದ್ದಾರೆ. ಬ್ರೆಡ್, ಮೊಟ್ಟೆ ಹಾಗೂ ತಿನಿಸು ಪದಾರ್ಥಗಳ ಖರೀದಿಸಲು ಕ್ವಾರಂಟೈನ್ ಕೇಂದ್ರದಿಂದ ಜನ ಹೊರಬರುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರದ ಮುಂದೆಯೇ ವ್ಯಾಪಾರಿಗಳು ಬ್ರೆಡ್ ಸೇರಿ ಇತರೆ ಆಹಾರ ಪದಾರ್ಥಗಳನ್ನ ತಂದು ಮಾರಾಟ ಮಾಡುತ್ತಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣದಿಂದ ಬಂದವರಿಗಾಗಿ ಮಾಡಿರುವ ಕ್ವಾರಂಟೈನ್ ಕೇಂದ್ರದಲ್ಲಿ ಜನರ ಓಡಾಟಕ್ಕೆ ಯಾವುದೇ ನಿರ್ಭಂದವಿಲ್ಲದಂತಾಗಿದೆ. ಕಾವಲಿಗೆ ಪೊಲೀಸರು ಇದ್ದರೂ ಕ್ವಾರಂಟೈನ್ ಕೇಂದ್ರದ ಗೇಟ್ …

Read More »

ಮೇ 29ರೊಳಗೆ SSLC ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ………

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಬಯಸಿದ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವ್ಯಾಸಂಗ ಮಾಡುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ತಾವು ಸದ್ಯ ವಾಸ ಮಾಡುತ್ತಿರುವ ಮನೆಯ ಹತ್ತಿರದ ಪರೀಕ್ಷಾ ಕೇಂದ್ರವನ್ನು ಗುರುತಿಸಿ ಮುಖ್ಯ ಶಿಕ್ಷಕರ ಲಾಗಿನ್ ಮೂಲಕ ಬದಲಿಸಿಕೊಳ್ಳಬಹುದು. ಪರೀಕ್ಷಾ ಕೇಂದ್ರ ಬದಲಾವಣೆಗೆ ಮೇ 29ರವರೆಗೆ ಅವಕಾಶ ನೀಡಲಾಗಿದೆ. ಬದಲಾವಣೆ ಮಾಡಿಕೊಳ್ಳದಿದ್ದರೆ ಮೂಲ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು. …

Read More »

ರಸ್ತೆಯುದ್ದಕ್ಕೂ ಕೊರೊನಾ ವಾರಿಯರ್ಸ್‍ಗೆ ಪುಷ್ಪವೃಷ್ಟಿ……….

ನೆಲಮಂಗಲ: ಕೋವಿಡ್-19 ವಿರುದ್ಧ ಪ್ರತಿನಿತ್ಯ ಹೋರಾಟ ನಡೆಸುತ್ತಿರುವ, ಕೊರೊನಾ ವಾರಿಯರ್ಸ್ ಗೆ ಜನರಿಂದ ಪುಷ್ಪವೃಷ್ಟಿ ನಡೆಸಲಾಯಿತು. ಸಿಎಂ ರಾಜಕೀಯ ಕಾರ್ಯದರ್ಶಿ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಪುಷ್ಪವೃಷ್ಟಿ ನಡೆದಿದೆ. ಈ ವೇಳೆ ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದರು. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಸ್ತೆಯುದ್ದಕ್ಕೂ ಹೂವಿನ ಸುರಿಮಳೆಗೈದ ಸಾರ್ವಜನಿಕರು ಕರೋನ ವಾರಿಯರ್ಸ್ ಗೆ ಸಲಾಂ …

Read More »

ರಾಜ್ಯಾದ್ಯಂತ ಭಾನುವಾರ ಕರ್ಫ್ಯೂ – ಏನಿರುತ್ತೆ? ಏನಿರಲ್ಲ?

ಬೆಂಗಳೂರು: ಸರ್ಕಾರ ಮೇ 31 ರವರೆಗೆ ಪ್ರತೀ ಭಾನುವಾರ ರಾಜ್ಯಾದ್ಯಂತ ಕಂಪ್ಲೀಟ್ ಲಾಕ್‍ಡೌನ್‍ಗೆ ಆದೇಶ ನೀಡಿದೆ. 4.0 ವಿನಾಯಿತಿ ಲಾಕ್‍ಡೌನ್‍ನ ನಡುವೆ ಮೊದಲ ಭಾನುವಾರ ಬಂದಿದ್ದು, ಇಂದು ಸಂಜೆಯಿಂದಲೇ ಕರ್ಫ್ಯೂ ಜಾರಿಯಲ್ಲಿರುತ್ತದೆ. ಜನರು ಮನೆಯಿಂದ ಹೊರಗೆ ಬಾರದಂತೆ ತಡೆಯಲು ಪೊಲೀಸ್ ಇಲಾಖೆ ನಿಯಮಗಳನ್ನು ರೂಪಿಸಿಕೊಂಡಿದೆ. ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, ಸಂಪೂರ್ಣ ಲಾಕ್‍ಡೌನ್ ಇರಲಿದೆ. ಹಾಗಾದರೆ ಭಾನುವಾರ ರಾಜ್ಯದಲ್ಲಿ …

Read More »

ಚಿಕನ್ ಊಟ ಕೊಟ್ಟಿಲ್ಲವೆಂದು ಆಶಾಕಾರ್ಯಕರ್ತೆಯ ಕೈ ಮುರಿದ ಭೂಪ!

ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿಯೊಬ್ಬ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ನಡೆದಿದೆ. ರೇಣುಕಾ ಕುಡಕಿ ಗಾಯಗೊಂಡ ಆಶಾ ಕಾರ್ಯಕರ್ತೆಯಾಗಿದ್ದು ಇವರ ಮೇಲೆ ಸೋಮನಾಥ್ ಕಾಂಬಳೆ ಹಲ್ಲೆ ಮಾಡಿದ್ದಾನೆ. ಚಿಕನ್ ಊಟ ಕೊಡದಿದ್ದಕ್ಕೆ ಸಿಟ್ಟಿಗೆದ್ದ ಸೋಮನಾಥ್, ಆಶಾ ಕಾರ್ಯಕರ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ರೇಣುಕಾ ಅವರ ಕೈ ಮುರಿದು ಆಳಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. …

Read More »

ಕ್ವಾರಂಟೈನ್‍ಗೆ ಹೆದರಿ ವಿಷ ಸೇವಿಸಿದ್ದ ವ್ಯಕ್ತಿ ಸಾವು

ಬಾಗಲಕೋಟೆ: ಕ್ವಾರಂಟೈನ್‍ಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತನನ್ನು ತುಕಾರಾಮ ಪವಾರ್ (40) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಯಾದಗಿರಿ ಜಿಲ್ಲೆ ಜುಮಲಾಪುರ ತಾಂಡಾದವರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಕ್ಕೂರು ಗ್ರಾಮದಲ್ಲಿ ಮೆ 16 ರಂದು ತುಕರಾಮ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೇ15 ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ತುಕರಾಮ ಊರಿಗೆ ಬಂದಿದ್ದರು. ಮೇ 16ರ ಬೆಳಗ್ಗೆ ವಿಷಯ ತಿಳಿದು ಆಶಾ ಕಾರ್ಯಕರ್ತೆಯರು, ಪಂಚಾಯ್ತಿಯವರು …

Read More »