Breaking News

Laxminews 24x7

ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು: ಪಿ ಎಸ್ ಐ ನರಳೆ

ಬೆಟಗೇರಿ:ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು: ಪಿ ಎಸ್ ಐ ನರಳೆ ಜಗತ್ತಿನಾಧ್ಯಂತ ಕರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರೋನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಹನಮಂತ ನರಳೆ ಹೇಳಿದರು. ಕರೋನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಟಗೇರಿ …

Read More »

ಪೆಟ್ರೋಲ್/ ಡಿಸೇಲ್ ಸೇವೆಯಲ್ಲಿ ವ್ಯತ್ಯಯ..!

ಬೆಂಗಳೂರು:  ಮಾರ್ಚ್31ರವರೆಗೆ ಕರ್ನಾಟಕ ಲಾಕ್‌ ಡೌನ್ ಆಗಲಿರುವ ಹಿನ್ನೆಲೆ, ನಾಳೆಯಿಂದ ಪೆಟ್ರೋಲ್/ ಡಿಸೇಲ್ ಸೇವೆಯಲ್ಲಿ ವ್ಯತ್ಯಯ ಕಂಡು ಬರಲಿದೆ. ಬೆಳಿಗ್ಗೆ 7ರಿಂದ ಸಂಜೆ 7ಗಂಟೆಯವರೆಗೆ ಮಾತ್ರ ಪೆಟ್ರೋಲ್ ಬಂಕ್ ಓಪನ್ ಇರಲಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ನಿಯಮ ಅನ್ವಯವಾಗಲಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಪೆಟ್ರೋಲ್ ಡೀಸಲ್ ಸೇವೆ ಲಭ್ಯವಿದ್ದು, ಕೇವಲ ಆ್ಯಂಬ್ಯುಲೆನ್ಸ್ ಹಾಗೂ …

Read More »

ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ (ರೋಗ ನಿರೋಧಕ) ಔಷಧಿ ಸಿಂಪಡನೆ

ಗೋಕಾಕ:ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ (ರೋಗ ನಿರೋಧಕ) ಔಷಧಿ ಸಿಂಪಡನೆ ಕೊರೋನಾ ವೈರಸ್ ತಡೆಗಟ್ಟುಲು ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ (ರೋಗ ನಿರೋಧಕ)ಔಷಧಿಯನ್ನು ಸೋಮವಾರದಂದು ಸಿಂಪಡಿಸಲಾಯಿತು. ಈ ಸಂದರ್ಭದಲ್ಲಿ ಪ್ರಕಾಶ ಹೊಳೆಪ್ಪಗೋಳ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಜನತೆ ಒಂದೆಡೆ ಸೇರದೇ ಮನೆಯಲ್ಲಿ ಇರಬೇಕು. ಅವಶ್ಯಕತೆ ಇದ್ದರೆ ಮಾತ್ರ ಹೊರಬರಬೇಕು. ಹೊರದೇಶಗಳಿಂದ ಬಂದಂತಹ ಜನರನ್ನು ಆರೋಗ್ಯ ತಪಾಸಣೆಯನ್ನು ನಡೆಸಲಾಗಿದ್ದು ಅವರಲ್ಲಿ ಅಂತಹ ಯಾವ ಲಕ್ಷಣಗಳು …

Read More »

138 ಕೋಟಿ ಜನರ ಆರೋಗ್ಯ ರಕ್ಷಣೆಯ ಜವಾಬ್ಧಾರಿ.ನಮ್ಮ ಪ್ರಧಾನಿ ಮೇಲೆ ಹಾಗೇ 7ಕೋಟಿ ಜನರ ಜವಾಬ್ದಾರಿ ನಮ್ಮ ಮುಖ್ಯ ಮಂತ್ರಿ ಮೇಲೆ ಇದೆ

ಪ್ರಧಾನಿಯ ವಯಸ್ಸು 69 ವರ್ಷ, ಆತನ ಮೇಲೆ ಇರೋದು 138 ಕೋಟಿ ಜನರ ಆರೋಗ್ಯ ರಕ್ಷಣೆಯ ಜವಾಬ್ಧಾರಿ… ನಮ್ಮ ಮುಖ್ಯಮಂತ್ರಿಯವರ ವಯಸ್ಸು 77 ವರ್ಷ, ಅವರ ಮೇಲೆ ಇರೋದು ಹತ್ ಹತ್ರ ಏಳು ಕೋಟಿ ಜನರ ಆರೋಗ್ಯ ರಕ್ಷಣೆಯ ಜವಾಬ್ದಾರಿ… ಒಮ್ಮೆ ಯೋಚಿಸಿ ನೋಡಿ ಅವರಿಬ್ಬರು ಈ ವಯಸ್ಸಿನಲ್ಲೂ ಶ್ರಮ ಪಡ್ತಿರೋದು ಯಾರಿಗೋಸ್ಕರ? ತಿಂಗಳುಗಳೇ ಕಳೆದು ಹೋಗಿವೆ ಪ್ರಧಾನಿಗಳು ಸರಿಯಾಗಿ ನಿದ್ದೆ ಮಾಡಿ, ಇಲ್ಲಿ ಅಷ್ಟೊಂದು ವಯಸ್ಸಾಗಿದ್ರು ಯಡ್ಯೂರಪ್ಪನವರು ಹೊತ್ತಿಲ್ಲದ …

Read More »

ಮನೆಯಲ್ಲೇ ಇರಿ ಎಂದ್ರೂ ಕೇಳಿಲ್ಲ – ರಸ್ತೆಗೆ ಬಂದವರಿಗೆ ಬಿತ್ತು ಲಾಠಿ ಏಟು

ಬೆಂಗಳೂರು: ರಸ್ತೆಗೆ ಇಳಿಯಬೇಡಿ, ಮನೆಯಲ್ಲೇ ಇರಿ ಎಂದು ಸಾಕಷ್ಟು ಬಾರಿ ಹೇಳಿದರೂ ಈ ಮನವಿಯನ್ನು ಲೆಕ್ಕಿಸದೇ ರಸ್ತೆಗೆ ಇಳಿದ ಜನತೆಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಕರ್ನಾಟಕ ಸಂಪೂರ್ಣ ಲಾಕ್‍ಡೌನ್ ಆಗಿದ್ದರೂ ಜನ ಇಂದು ಬೆಳಗ್ಗೆಯಿಂದಲೇ ರಸ್ತೆಗೆ ಇಳಿಯುತ್ತಿದ್ದರು. ಈ ವೇಳೆ ಪೊಲೀಸರು ಮನೆಗೆ ತೆರಳುವಂತೆ ಮನವಿ ಮಾಡುತ್ತಿದ್ದರು. ಮನವಿಗೂ ಕ್ಯಾರೇ ಎನ್ನದ ಜನರಿಗೆ ಪೊಲೀಸರಿಗೆ ಲಾಠಿ ಏಟು ನೀಡಿದ್ದಾರೆ. ಯಶವಂತಪುರದ ಗೋವರ್ಧನ್ ಥಿಯೇಟರ್ ಬಳಿ ಆಟೋಗಳು, ಸಾರ್ವಜನಿಕರ ಅನಗತ್ಯ …

Read More »

ಜಾತಕ ಭವಿಷ್ಯ ಹೇಳುವವರೆಲ್ಲ ಈಗ ಏನಾದರು ? ಕೊರೋನಾಗೆ ಅವರ ಬಳಿ ಪರಿಹಾರ ಕೇಳಿ ನೋಡೋಣ

ಜಾತಕ ಭವಿಷ್ಯ ಹೇಳುವವರೆಲ್ಲ ಈಗ ಏನಾದರು ? ಕೊರೋನಾಗೆ ಅವರ ಬಳಿ ಪರಿಹಾರ ಕೇಳಿ ನೋಡೋಣ. ಕನಸುಗಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಮಾದ್ಯಮಗಳ ಮುಂದೆ ಮಾತನಾಡುವು ಸಂದರ್ಭದಲ್ಲಿ ಕೊರೊನಾ ವೈರಸ್ ಬಗ್ಗೆ ಮಾತನಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲೆಡೆ ಕೊರೊನಾ ಭೀತಿ ಎದುರಾಗಿರುವ ಸಂದರ್ಭದಲ್ಲಿ ರವಿಚಂದ್ರನ್ ಅವರು ಜನರಿಗೆ ತಮ್ಮ ಮಾತಿನ ಮೂಲಕವೇ ಧೈರ್ಯವನ್ನು ಹೇಳಿರುವುದು ಮಾತ್ರವಲ್ಲದೇ, ಕೆಲವು ಡಂಭಾಚಾರಿಗಳ ಮಾತುಗಳನ್ನು ಕೂಡಾ ಅವರು …

Read More »

ಮೂಡಲಗಿ : ಶ್ರೀಗಂಧ ಕದ್ದಿಯುತ್ತಿರುವ ಕದಿಮರು ಅಂಧರ

ಮೂಡಲಗಿ : ತಾಲೂಕಿನ ಮುನ್ಯಾಳ ಗ್ರಾಮದ ಹಳ್ಳದ ದಂಡೆಯ ಮೇಲೆ ಇರುವ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಕಡಿಯುತ್ತಿರುವ ಖಚಿತ ಮಾಹಿತಿ ಮೇರಿಗೆ ಮೂಡಲಗಿ ಪಿಎಸ್‌ಐ ಎಮ್.ಎನ್ ಸಿಂಧೂರ, ಸಿಬ್ಬಂದಿಗಳಾದ ಆರ್. ಎಸ್ ಪೂಜೇರಿ, ಐ.ಎ ಸೌದಾಗರ, ಎಲ್.ಪಿ ಹಂಪಿಹೋಳಿ, ಡಿ.ಜಿ ಕೋಣ್ಣೂರ, ಬಿ.ಆರ್ ಪಾಟೀಲ್, ಜಿ.ಎನ್ ಕಾಗವಾಡ, ಎಸ್.ಜಿ ಉಜ್ಜಿನಕೋಪ ಆಧಿಕಾರಿಗಳು ದಾಳಿ ನಡೆಸಿ ರಾಯಬಾಗ ತಾಲೂಕಿನ ಮೂಗಳಖೋಡ ಗ್ರಾಮದ ಗೋಪಾಲ ನಾಮದೇವ ಕದಮ(50), ಮಚ್ಚೇಂದ್ರ ದತ್ತು ಕದಮ(55), ಪಾಲಭಾಂವಿ …

Read More »

ಕೊರೋನಾ ಭೀತಿಯಿಂದ ಕೇರಳ ಗಡಿ ಬಂದ್ – ಬಂಡೀಪುರ ಚೆಕ್ ಪೋಸ್ಟ್ ನಲ್ಲಿ ವಾಹನ ಸಂಚಾರ ನಿಷೇಧ

ನೆರೆಯ ಕೇರಳದಿಂದ ಯಾವುದೇ ವಾಹನ ಕರ್ನಾಟಕ ಪ್ರವೇಶ ಮಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ.  ಆ್ಯಂಬುಲೆನ್ಸ್ ನಂತಹ ತುರ್ತು ವಾಹನಗಳಿಗಷ್ಟೆ ಅವಕಾಶ ನೀಡಲಾಗಿದೆ ಚಾಮರಾಜನಗರ(ಮಾ.23) : ಕೊರೋನಾ ಭೀತಿಯ ಹಿನ್ನಲೆಯಲ್ಲಿ ಕರ್ನಾಟಕ ಕೇರಳ ಗಡಿ ಬಂದ್ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೆರೆಯ ಕೇರಳದಿಂದ ಯಾವುದೇ ವಾಹನ ಕರ್ನಾಟಕ ಪ್ರವೇಶ ಮಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಆ್ಯಂಬುಲೆನ್ಸ್ ನಂತಹ ತುರ್ತು ವಾಹನಗಳಿಗಷ್ಟೆ ಅವಕಾಶ …

Read More »

ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಸರಕಾರ ನಿರ್ಧರಿಸಿದೆ.

ರಾಜ್ಯದ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದ್ದ ರಾಜ್ಯ ಸರಕಾರ ಇದೀಗ ಸಂಪೂರ್ಣ ಕರ್ನಾಟಕವನ್ನು ಲಾಕ್ ಡೌನ್ ಮಾಡಿ ಆದಶ ಹೊರಡಿಸಿದೆ. ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಸರಕಾರ ನಿರ್ಧರಿಸಿದೆ. ಇದರಿಂದಾಗಿ ಇಡೀ ರಾಜ್ಯದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆ ಸ್ಥಗಿತವಾಗಲಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಂಚಾರ ಬಂದ್ ಆಗಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೇನೂ ಸಿಗುವುದಿಲ್ಲ. ಮಾರ್ಚ್ 31ರ ವರೆಗೆ ಇಡೀ …

Read More »

ಶಂಕರಗೌಡ ಪಾಟೀಲ ಇಂದು ಇಲ್ಲಿಯ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕೋರೋನಾ ಓಡಿಸಿ ದೇಶ ಉಳಿಸಿ ಜಾಗೃತಿ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಇಂದು ಇಲ್ಲಿಯ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕೋರೋನಾ ಓಡಿಸಿ ದೇಶ ಉಳಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂತ ಜಲಾರಾಂ ಫೌಂಡೇಶನ್ ಸಹಯೋಗದಲ್ಲಿ ಮಾಸ್ಕ್ ಮತ್ತು ಡೆಟಾಲ್ ಸೋಪ್ ಗಳನ್ನು ಕಾರ್ಮಿಕರಿಗೆ ಮತ್ತು ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು. ಸಂತ ಜಲಾರಾಂ ಫೌಂಡೇಶನ್ ಮುಖ್ಯಸ್ಥ ಕನ್ನುಭಾಯಿ ಟಕ್ಕರ್ ಕಾರ್ಯಕ್ರಮ ಆಯಜಿಸಿದ್ದರು. ಈ ಸಂದರ್ಭದಲ್ಲಿ ಧರ್ಮ ದಾಸ್ ಏಇಓ, ಅಪ್ಪಣ್ಣವರ ಡಿವಿಜನಲ್ ಎಕ್ಸಿಕ್ಯೂಟಿವ್, ಕರೂರ, ಗದಗ …

Read More »