Breaking News

Laxminews 24x7

ಮುಷ್ಕರದ ನಡುವೆಯು ರಸ್ತೆಗಿಳಿದ 943 ಬಸ್‍ಗಳು

ಬೆಂಗಳೂರು, ಡಿ.14- ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ಮುಂದುವರೆಸಿರುವ ನಡುವೆಯೇ ಹಂತ ಹಂತವಾಗಿ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಆರಂಭವಾಗಿವೆ. ಮಧ್ಯಾಹ್ನ 12 ಗಂಟೆ ವೇಳೆಗೆ ರಾಜ್ಯದಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳಿಂದ 943 ಬಸ್‍ಗಳ ಸಂಚಾರ ಪ್ರಾರಂಭವಾಗಿತ್ತು ಎಂದು ಸಂಸ್ಥೆಗಳ ಮೂಲಗಳು ತಿಳಿಸಿವೆ. ಕೆಎಸ್‌ಆರ್‌ಟಿಸಿ 234, ಬಿಎಂಟಿಸಿ 182, ಈಶಾನ್ಯ ಕೆಎಸ್‌ಆರ್‌ಟಿಸಿ 286, ವಾಯುವ್ಯಸಾರಿಗೆ ಸಂಸ್ಥೆಯ 241 ಬಸ್‍ಗಳು ವಿವಿಧ ಸ್ಥಳಗಳಿಂದ ಸಂಚಾರ ಆರಂಭಿಸಿದ್ದವು. …

Read More »

ಮೂರನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಇಲ್ಲಿನ ಕೃಪ ಅತಿಥಿಗೃಹದಲ್ಲಿ ನಡೆಯಿತು.

ಬೆಂಗಳೂರು:  ಸಚಿವ, ಎರಡನೇ ವರ್ಷದ ಜಾತ್ರಾ ಸಮಿತಿ ಅಧ್ಯಕ್ಷ ಬಿ.ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ   ಮೂರನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಇಲ್ಲಿನ ಕೃಪ ಅತಿಥಿಗೃಹದಲ್ಲಿ ನಡೆಯಿತು. ಸಚಿವರು, ಸಂಸದರು ಹಾಗೂ ಶಾಸಕರು ಮತ್ತು ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಮಹಿಳೆಯರು, ಹಾಗೂ ಯುವಕರ ಅಭಿಲಾಷೆಯಂತೆ  ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸವಾ೯ನುಮತದಿಂದ  ಮೂರನೇ ವಷ೯ದ ಜಾತ್ರಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಜತೆಗೆ ಮೀಸಲಾತಿ ಹೆಚ್ಚಳ ಮಾಡುವ …

Read More »

ಪೀರನವಾಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿಯೂ ನರೇಗಾ ಮುಂದುವರಿಸುವಂತೆ ಗ್ರಾ.ಕೂ.ಸ .ಆಗ್ರಹ

ಪೀರನವಾಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿಯೂ ನರೇಗಾ ಮುಂದುವರಿಸುವಂತೆ ಗ್ರಾಕೂಸ ಆಗ್ರಹ ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೊಳಿಸಿರುವ ಪಟ್ಟಣ ಪಂಚಾಯತಿಗಳಲ್ಲಿಯೂ ನರೇಗಾ ಉದ್ಯೋಗ ಖಾತ್ರಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೂರಾರು ಪದಾಧಿಕಾರಿಗಳು ನೂತನವಾಗಿ ಘೋಷಣೆ ಆಗಿರುವ ಪೀರನವಾಡಿ ಪಟ್ಟಣ ಪಂಚಾಯತಿಯಲ್ಲಿಯೂ ನರೇಗಾ ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭಿಸುವಂತೆ ಆಗ್ರಹಿಸಿ …

Read More »

ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಸ್ಪಂದಿಸಿ, ಉಪಸಮಿತಿ ರಚಿಸಿನನ್ನ ಅಧ್ಯಕ್ಷರನ್ನಾಗಿ ನೇಮಿಸಿದೆ’ :ಶ್ರೀರಾಮುಲು

ಬೆಂಗಳೂರು : ‘ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಸ್ಪಂದಿಸಿ, ಉಪಸಮಿತಿ ರಚಿಸಿದೆ. ಅದಕ್ಕೆ ನನ್ನ ಅಧ್ಯಕ್ಷರನ್ನಾಗಿ ನೇಮಿಸಿದೆ’ ಅಂತಾ ಸಚಿವ ಶ್ರೀರಾಮುಲು ಹೇಳಿದ್ದಾರೆ. ಇಲ್ಲಿನ ಕುಮಾರ ಕೃಪೆ ಗೃಹದಲ್ಲಿ ನಡೆದ ಮೂರನೇ ವಷ೯ದ ಶ್ರೀಮಹಷಿ೯ ವಾಲ್ಮೀಕಿ ಜಾತ್ರೆಯ ಪೂವ೯ಭಾವಿ ಸಭೆಯಲ್ಲಿ ಮಾತನಾಡಿದರು. ‘ವಾಲ್ಮೀಕಿ ಜನಾಂಗದವರು ಮೀಸಲಾತಿ ಹೆಚ್ಚಳದ ಬಗ್ಗೆ ಆತಂಕಕ್ಕೆ ಒಳಗಾಗಬಾರದು. ಸಮುದಾಯದ ಬೇಡಿಕೆಗೆ ನಾವೆಲ್ಲರೂ ಒಟ್ಟಾಗಿ ಶುಭ ಸುದ್ದಿಯನ್ನು ತಿಳಿಸುತ್ತೇವೆ. ಈಗಾಗಲೇ ಈ ವಿಚಾರದಲ್ಲಿ ನಾವು …

Read More »

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವವರೆಗೂ  ಮುಷ್ಕರ ಮುಂದುವರೆಯಲಿದೆ

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವವರೆಗೂ  ಮುಷ್ಕರ ಮುಂದುವರೆಯಲಿದೆ ಎಂದು ಸಿಐಟಿ ಕಾರ್ಯದರ್ಶಿ ಆನಂದ್ ಹೇಳಿದ್ದಾರೆ. ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ, ಸಾರಿಗೆ ಸಿಬ್ಬಂದಿಗೆ ಸರ್ಕಾರಿ ನೌಕರರು ಎಂದು ಘೋಷಿಸುವವರೆಗೂ ಸಾರಿಗೆ ನೌಕರರ ಮುಷ್ಕರ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.

Read More »

ಕೊಲೆ ಆರೋಪಿಯನ್ನೇ ಮುಗಿಸಲು ಸ್ಕೆಚ್ ಹಾಕಿದ್ರಾ ಮಾಜಿ ಸಚಿವರ ತಂಡ?

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆ ಮುಂದುವರಿದಿದೆ. ತನಿಖೆಯಲ್ಲಿ ಬೆಚ್ಚಿಬೀಳಿಸುವ ವಿಚಾರಗಳು ಬಯಲಿಗೆ ಬರುತ್ತಿವೆ. ಕೊಲೆ ಆರೋಪದ ಮೇಲೆ ಜೈಲಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿರುವ ಕೊಲೆ ಆರೋಪಿಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಸಿಬಿಐ ತನಿಖೆ ವೇಳೆ ಈ ರಣರೋಚಕ ವಿಚಾರ ಬಹಿರಂಗ ಗೊಂಡಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುತ್ತಿದ್ದಂತೆ ಕೊಲೆ ಆರೋಪಿ …

Read More »

ಲಿಖಿತ ಭರವಸೆ ತಲುಪಿಸುವವರೆಗೂ ಮುಷ್ಕರ ಹಿಂಪಡೆಯಲ್ಲ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು(ಡಿ. 14): ಸಾರಿಗೆ ನೌಕರರ ಮುಷ್ಕರ ನಾಟಕೀಯ ತಿರುವು ಪಡೆಯುತ್ತಲೇ ಇದೆ. ಇವತ್ತು ಸಾರಿಗೆ ನೌಕರರು ಸೇವೆಗೆ ಹಾಜರಾಗುತ್ತಿರುವಂತೆಯೇ ಇದೀಗ ಮುಷ್ಕರ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆಯುತ್ತೇವೆ ಎಂದು ಹೇಳಿದ್ದ ಕೋಡಿಹಳ್ಳಿ ಚಂದ್ರಶೇಖರ್ ಇದೀಗ ಹೊಸ ಷರತ್ತು ಮುಂದಿಟ್ಟಿದ್ದಾರೆ. ಸಾರಿಗೆ ನೌಕರರು ಮುಂದಿಟ್ಟಿದ್ದ 10 ಬೇಡಿಕೆಗಳ ಪೈಕಿ ಸರ್ಕಾರ ಒಂಬತ್ತನ್ನ ಈಡೇರಿಸಲು ಒಪ್ಪಿದೆ. ಆದರೆ, ಇದು ಬಾಯಿ ಮಾತಿನದ್ದಾಗದೆ ಲಿಖಿತ ರೂಪದಲ್ಲಿರಲಿ. ಸರ್ಕಾರದ ಕಡೆಯಿಂದ …

Read More »

ಬಿಜೆಪಿ ಶಾಸಕ ಅವರ ಕಾರು ಬೈಕ್ ಗೆ ಡಿಕ್ಕಿ ಇಬ್ಬರು ಮೃತ

ಮುಂಬೈ: ಬಿಜೆಪಿ ಶಾಸಕ ಕಿಶನ್ ಕ್ಯಾಥೋರ್ ಅವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ಟಿಟ್ವಾಲಾದಲ್ಲಿ ನಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಬೈಕ್ ಸವಾರರಾದ ಅಮಿತ್ ಸಿಂಗ್ (22), ಇಮ್ರಾನ್ ಸಿಂಗ್ (18) ಎಂದು ಗುರುತಿಸಲಾಗಿದೆ. ಅಮಿತ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಮ್ರಾನ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮುರ್ಬಾದ್ ಕ್ಷೇತ್ರದ ಶಾಸಕ ಕ್ಯಾಥೋರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಸಕರ ಕಾರು ಚಾಲಕನಿಗೆ ಗಾಯಗಳಾಗಿವೆ.

Read More »

ಬಿಜೆಪಿ ಶಾಸಕರ ಕಾರು ಅಪಘಾತ; ಇಬ್ಬರು ಸಾವು

  ಮುಂಬೈ: ಬಿಜೆಪಿ ಶಾಸಕ ಕಿಶನ್ ಕ್ಯಾಥೋರ್ ಅವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ಟಿಟ್ವಾಲಾದಲ್ಲಿ ನಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಬೈಕ್ ಸವಾರರಾದ ಅಮಿತ್ ಸಿಂಗ್ (22), ಇಮ್ರಾನ್ ಸಿಂಗ್ (18) ಎಂದು ಗುರುತಿಸಲಾಗಿದೆ. ಅಮಿತ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಮ್ರಾನ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮುರ್ಬಾದ್ ಕ್ಷೇತ್ರದ ಶಾಸಕ ಕ್ಯಾಥೋರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಸಕರ ಕಾರು ಚಾಲಕನಿಗೆ …

Read More »

ಸಾರಿಗೆ ನೌಕರರ ಪ್ರತಿಭಟನೆ ಗೊಂದಲ, ಇಂದೂ ಕೂಡ ಪ್ರಯಾಣಿಕರ ಪರದಾಟ

ಬೆಂಗಳೂರು, ಡಿ.14- ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆದರೂ ನಿನ್ನೆ ರಾತ್ರಿ ಉಂಟಾದ ಗೊಂದಲ ಹಾಗೂ ಬೆಳಗ್ಗೆ ನೌಕರರ ಸಂಘಟನೆಗಳು ವಿಳಂಬವಾಗಿ ತೆಗೆದುಕೊಂಡ ನಿರ್ಧಾರದಿಂದ ಇಂದೂ ಮಧ್ಯಾಹ್ನದವರೆಗೂ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾರಿಗೆ ನೌಕರರು ಸರ್ಕಾರದೊಂದಿಗೆ ನಡೆಸಿದ ಮಾತುಕತೆ ಫಲ ನೀಡಿದೆ ಎಂದು ಮುಷ್ಕರ ವಾಪಸ್ ಪಡೆಯುತ್ತಿರುವುದಾಗಿ ಸಂಜೆ ಘೋಷಿಸಿದ್ದರು. ಆದರೆ, ರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ …

Read More »