ಬಾಗಲಕೋಟೆ: ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಶಾಸಕರ ಅಸಮಾಧಾನ ಭುಗಿಲೆದ್ದಿದ್ದು, ಸಿಡಿ ವಿಚಾರನ್ನಿಟ್ಟುಕೊಂಡು ಸಿಎಂ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಸ್ವಪಕ್ಷೀಯ ಶಾಸಕರೇ ಒಂದರ ಮೇಲೊಂದರಂತೆ ಆರೋಪಗಳನ್ನು ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪನವರ ಭ್ರಷ್ಟಾಚಾರ ಸಿಡಿ ಮಾತ್ರವಲ್ಲ, ನೋಡಲು ಆಗದಂತಹ ಸಿಡಿಗಳೂ ಇವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ಬಳಿ ಬಂದಿದ್ದ 3 ಶಾಸಕರ ಬಳಿ ಆ ಸಿಡಿಗಳಿವೆ. ಆದರೆ ನಾನು ಅಂಥಹ …
Read More »ಯತ್ನಾಳ್ ಸೇರಿದಂತೆ ಹಲವರ ಬಳಿ ಸಿಡಿ ಇದೆ : ಸಂಕ್ರಾಂತಿಯ ಬಳಿಕ ಒಬ್ಬೊಬ್ಬರಾಗಿ ಸಿಡಿ ಬಿಡುಗಡೆ – ಹೆಚ್ ವಿಶ್ವನಾಥ್ ಹೊಸ ಬಾಂಬ್
ರಾಯಚೂರು : ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರ ಬಳಿ ಸಿಡಿ ಇದೆ. ಸಂಕ್ರಾಂತಿ ಬಳಿಕ ಒಬ್ಬೊಬ್ಬರಾಗಿ ಸಿಡಿ ಬಿಡುಗಡೆ ಮಾಡ್ತಾರೆ ಎಂಬುದಾಗಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಎಂ.ಎಲ್.ಸಿ ಹೆಚ್.ವಿಶ್ವನಾಥ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಸಿಡಿ ಇದೆ. ಸಂಕ್ರಾಂತಿ ಬಳಿಕ ಸಿಡಿ ಬಿಡುಗಡೆ ಆಗುತ್ತೆ. ಯತ್ನಾಳ್ ಸೇರಿ ಹಲವರ ಬಳಿ ಸಿಡಿ ಇದೆ. ಒಬ್ಬೊಬ್ಬರಾಗಿ …
Read More »ಐವರಿಗೆ ಜೀವದಾನ ಮಾಡಿ ‘ಸಾವಿನ ಬಳಿಕ ಮರು ಜನ್ಮ ಪಡೆದ ’20 ತಿಂಗಳ ಕಂದಮ್ಮ’.! ಭಾರತದ ಅತ್ಯಂತ ಕಿರಿಯ ಅಂಗಾಗ ದಾನಿ ಈ ಮಗು
ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದ 20 ತಿಂಗಳ ಮಗು ಧನಿಷ್ಠಾ ಎಂಬ ಹೆಸರಿನ ಈ ಮಗು ಈಗ ಹೆಚ್ಚು ಸುದ್ದಿಯಲ್ಲಿದೆ . ಆಕೆ ಅತ್ಯಂತ ಕಿರಿಯ ಅಂಗಾಗ ದಾನಿಯಾಗಿ ಈಗ ಗುರುತಿಸಿಕೊಂಡಿದ್ದಾರೆ. ಧನಿಷ್ಠಾ ತನ್ನ ಸಾವಿನ ತರುವಾಯ ಬಹು ಅಂಗಾಂಗಗಳನ್ನು ದಾನ ವಾಗಿ ನೀಡಿ ಸಾವಿನ ಬಳಿಕ ಕೂಡ ಇತರರಲ್ಲಿ ಮರು ಜನ್ಮ ಪಡೆದುಕೊಂಡಿದೆ. ಧನಿಷ್ಠಾ ಐದು ರೋಗಿಗಳಿಗೆ ಹೊಸ ಜೀವದಾನ ವನ್ನು ನೀಡಿದ್ದಾರೆ. ಆಕೆಯ ಹೃದಯ, ಯಕೃತ್ತು, ಮೂತ್ರಪಿಂಡಗಳು …
Read More »ಸಿಡಿ ವಿವಾದವು ಬಿಜೆಪಿ ಮುಕ್ತ ರಾಜ್ಯಕ್ಕೆ ಮುನ್ನುಡಿ ಬರೆದಿದೆ | ಭವಿಷ್ಯ ನುಡಿದ ಪ್ರಿಯಾಂಕ್ ಖರ್ಗೆ
ಕಲಬುರಗಿ: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಿಡಿ ವಿವಾದ ಸೃಷ್ಟಿಯಾಗಿದ್ದು, ಇದು ಬಿಜೆಪಿ ಮುಕ್ತ ಕರ್ನಾಟಕಕ್ಕೆ ನಾಂದಿ ಹಾಡಲಿದೆ ಎಂದು ಚಿತ್ತಾಪುರ ಕ್ಷೇತ್ರದ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಭವಿಷ್ಯ ನುಡಿದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಎದ್ದಿರುವ ಸಿಎಂ ಯಡಿಯೂರಪ್ಪನವರ ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಕೇವಲ ಬಿಎಸ್ ವೈ ಮುಕ್ತ ಬಿಜೆಪಿ ಮಾತ್ರವಲ್ಲ, ಬಿಜೆಪಿ ಮುಕ್ತ ರಾಜ್ಯ ಆಗುವ ಮುನ್ನುಡಿ …
Read More »ದಡ್ಡಿ, ಮಜತಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸತೀಶ
ಬೆಳಗಾವಿ: ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯ ದಡ್ಡಿ, ಮಜತಿ ಹಾಗೂ ಚಿಕ್ಕಲದಿನ್ನಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಸತೀಶ ಜಾರಕಿಹೊಳಿ ಗುರುವಾರ ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆಯ ಸುಮಾರು 45 ಲಕ್ಷ ರೂ. ಅನುದಾನದಲ್ಲಿ ದಡ್ಡಿ, ಮಜತಿ, ಮಾವನೂರು, ಕುರ್ಣಿ, ಚಿಕ್ಕಲದಿನ್ನಿ ಗ್ರಾಮದಲ್ಲಿನ ಎಸ್, ಸಿ ಕಾಲೋನಿಗಳಲ್ಲಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ರಮೇಶ ಪಾಟೀಲ್, ಸುರೇಶ ಬೆನ್ನಿ, ಮಾಲಿಂಗ ಶಿರಗುಪ್ಪಿ, …
Read More »ತಮಿಳುನಾಡಿನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್ ಗಾಂಧಿ
ಮಧುರೈ: ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನ ಅವನಿಯಪುರಂನಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ವೀಕ್ಷಿಸಿದರು. ಪೊಂಗಲ್ ಹಬ್ಬದಲ್ಲಿ ಪಾಲ್ಗೊಳ್ಳಲೆಂದು ತಮಿಳುನಾಡಿಗೆ ಆಗಮಿಸಿದ ರಾಹುಲ್ ಗಾಂಧಿ ಜಲ್ಲಿಕಟ್ಟು ವೀಕ್ಷಿಸಿದರು. ಈ ವೇಳೆ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ತಮಿಳು ಭಾಷೆ, ಸಂಸ್ಕೃತಿಯನ್ನು ಬದಿಗಿರಿಸಿ, ತಮಿಳುನಾಡು ಜನರ ಮೇಲೆ …
Read More »ನಮ್ಮೆಲ್ಲರಂತೆ ಮಂಗಳಮುಖಿಯರು ಸಮಾಜದಲ್ಲಿ ಬದುಕಲು ಅರ್ಹರು: ಸಚಿವೆ ಶಶಿಕಲಾ ಜೊಲ್ಲೆ
ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಕಲ್ಲಹಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯ ಸಾಧಿಸಿದ ಮಂಗಳಮುಖಿ ಸುಧಾ ಜೋಗತಿ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಭಿನಂದಿಸಿ, ಅವರ ಯಶಸ್ಸು, ಪರಿಶ್ರಮವನ್ನು ಶ್ಲಾಘಿಸಿದರು. ಹೊಸಪೇಟೆಯ ಖಾಸಗಿ ಹೋಟೆಲ್‍ನ ಕಾರ್ಯಕ್ರಮದಲ್ಲಿ ತಮ್ಮನ್ನು ಭೇಟಿ ಮಾಡಿದ ಕಲ್ಲಹಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯ ಸಾಧಿಸಿದ ಮಂಗಳಮುಖಿ ಸುಧಾ ಜೋಗತಿ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ …
Read More »ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎತ್ತುಗಳಿಗೆ ಪೂಜೆ ಮಾಡಿರೋದು ಸಾಕಷ್ಟು ಕುತೂಹಲ ಮೂಡಿಸಿರೋದು ಸುಳ್ಳಲ್ಲ
ಬೆಂಗಳೂರು: ಮಕರ ಸಂಕ್ರಾಂತಿಯ ಪ್ರಯುಕ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಧರ್ಮಪತ್ನಿ ಉಷಾ ಶಿವಕುಮಾರ್ ಜೊತೆಗೂಡಿ ಇಂದು ತಮ್ಮ ನಿವಾಸದಲ್ಲಿ ಗೋಪೂಜೆ ನೆರವೇರಿಸಿದರು. ವಿಶೇಷ ಅಂದ್ರೆ ಒಂದೆಡೆ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಗೋಮಾಂಸದ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಾ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ನನಗೆ ಯಾರೂ ಬೆಂಬಲ ನೀಡುತ್ತಿಲ್ಲ.. ಜನರೇ ನನ್ನನ್ನು ಕಾಪಾಡಬೇಕು ಅಂತಾ ಅಲವತ್ತುಕೊಳ್ಳುತ್ತಿದ್ದಾರೆ. ಈನಡುವೆ ಇನ್ನೊಂದೆಡೆ ಕೆಪಿಸಿಸಿ …
Read More »ದೇಶಾದ್ಯಂತ ಜನವರಿ 31ರಂದು ಪಲ್ಸ್‌ಪೋಲಿಯೋ ಕಾರ್ಯಕ್ರಮ ನಿಗದಿ
ನವದೆಹಲಿ : ದೇಶದಲ್ಲಿ ಜನವರಿ 31ರಂದು ಪಲ್ಸ್‌ಪೋಲಿಯೋ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ನಿರ್ಧಾರ ಪ್ರಕಟಿಸಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜನವರಿ 30ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜನವರಿ 17ಕ್ಕೆ ನಿಗದಿಯಾಗಿದ್ದ ಪಲ್ಸ್ ಪೋಲಿಯಾ ಲಸಿಕೆ ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯ …
Read More »ಮೊದಲ ಹಂತದಲ್ಲಿ 2,934 ಸ್ಥಳಗಳಲ್ಲಿ ಸುಮಾರು 3 ಲಕ್ಷ ಫ್ರಂಟ್ ಲೈನ್ ವರ್ಕರ್ಸ್ ಕೊರೋನಾ ಲಸಿಕೆ
ಬೆಂಗಳೂರು : ಜನವರಿ 16ರ ಮೊದಲ ದಿನ ದೇಶಾದ್ಯಂತ 2,934 ಸ್ಥಳಗಳಲ್ಲಿ ಸುಮಾರು 3 ಲಕ್ಷ ಫ್ರಂಟ್ ಲೈನ್ ಹೆಲ್ತ್ ಕೇರ್ ಕಾರ್ಮಿಕರಿಗೆ ಲಸಿಕೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರತಿ ಸೈಟ್ ಗೆ ದಿನಕ್ಕೆ ಅಸಮಂಜಸ ಸಂಖ್ಯೆಯ ಲಸಿಕೆಗಳನ್ನು ಆಯೋಜಿಸದಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ಪ್ರತಿ ಲಸಿಕೆ ಯ ಅಧಿವೇಶನವು ಗರಿಷ್ಠ 100 ಫಲಾನುಭವಿಗಳಿಗೆ ಸೇವೆ ನೀಡಲಿದೆ ಎಂದು ಹೇಳಿದೆ. ಪ್ರತಿ ಅಧಿವೇಶನದಲ್ಲಿ ಪ್ರತಿ …
Read More »
Laxmi News 24×7