ಗದಗ/ಶಿರಹಟ್ಟಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದಲ್ಲಿ ರವಿವಾರ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣವಿತ್ತು. ಕೈಗೆ ತಾಗುವಷ್ಟು ಮೋಡಗಳ ಮಧ್ಯೆ ಖಾಕಿ ಪಡೆಯ ಹೆಜ್ಜೆಗಳ ಸಪ್ಪಳ ಜೋರಾಗಿತ್ತು. ಹೌದು. ರವಿವಾರ ಬೆಳಗ್ಗೆ ಎಸ್ಪಿ ಎನ್.ಯತೀಶ್ ಅವರ ನೇತೃತ್ವದಲ್ಲಿ ಪೊಲೀಸ್ ಅಧಿ ಕಾರಿಗಳು ಹಾಗೂ ಆಯ್ದ ಸಿಬ್ಬಂದಿ ಟ್ರೆಕ್ಕಿಂಗ್‌ನಲ್ಲಿ ಒಬ್ಬರಿಗಿಂತ ಒಬ್ಬರು ಮೇಲೆಂಬಂತೆ ಗಿರಿ ಶಿಖರವನ್ನೇರಿ ಕಪ್ಪತ್ತಗಿರಿ ಸೌಂದರ್ಯ ಸವಿಯಲು ಬಂದಿದ್ದ ಪ್ರವಾಸಿಗರ ಮನ ಸೆಳೆದರು. ಸದಾ ಕೆಲಸದ ಒತ್ತಡ ಹಾಗೂ ಇತ್ತೀಚೆಗೆ ಕೋವಿಡ್ …
Read More »ರೈತರಿಗೆ ಗುಡ್ ನ್ಯೂಸ್: ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಧಾರವಾಡ: ತೋಟಗಾರಿಕೆ ಇಲಾಖೆಯಲ್ಲಿ 2021-22 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್‍ಹೆಚ್‍ಎಂ) ಯೋಜನೆಯಡಿಯಲ್ಲಿ ರೈತರಿಗೆ ಸಹಾಯಧನ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 27 ಕೊನೆಯ ದಿನವಾಗಿದೆ. ಸಣ್ಣ ನರ್ಸರಿ ಸ್ಥಾಪನೆ, ಹಣ್ಣು(ಬಾಳೆ), ಹೂ(ಗುಲಾಬಿ, ಬಿಡಿ ಸೇವಂತಿಗೆ, ಚೆಂಡು ಹೂ), ತರಕಾರಿಗಳ ಹೊಸ ಪ್ರದೇಶ ವಿಸ್ತರಣೆ, ನೀರು ಸಂಗ್ರಹಣಾ ಘಟಕಗಳು, ಸಂರಕ್ಷಿತ ಬೇಸಾಯದಡಿ (ಹಸಿರುಮನೆ, ನೆರಳುಪರದೆ, ಪ್ಲಾಸ್ಟಿಕ್ ಮಲ್ಚಿಂಗ್), ಯಾಂತ್ರೀಕರಣ ಘಟಕದಡಿ 20 (ಪಿಟಿಓಹೆಚ್‍ಪಿ) ಸಾಮರ್ಥ್ಯಕ್ಕಿಂತ ಕಡಿಮೆಯ ಟ್ರ್ಯಾಕ್ಟರ್, …
Read More »ಜೈಲು ಸಿಬ್ಬಂದಿಗೆ ಖಾರದ ಪುಡಿ ಎರಚಿ 7 ಕೈದಿಗಳು ಎಸ್ಕೇಪ್: ಮೊದಲೇ ತಯಾರಾಗಿತ್ತು ಭಯಾನಕ ಸಂಚು!
ಜೈಲು ಸಿಬ್ಬಂದಿಗೆ ಖಾರದ ಪುಡಿ ಕೈದಿಗಳು ಜೈಲಿನಿಂದ ಪರಾರಿಯಾಗಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ. ಈ ವೇಳೆ ಸಿಬ್ಬಂದಿಯ ಮೇಲೆ ಹಲ್ಲೆ ಸಹ ಮಾಡಿದ್ದು, ಸುಮಾರು 5 ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆ ಈಸ್ಟ್ ಸಯಾಂಗ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಸೋಮವಾರ ವರದಿಯಾಗಿದೆ. ಜೈಲಿಂನಿಂದ ಎಸ್ಕೇಪ್ ಆಗಲು 7 ಕೈದಿಗಳು ಮೊದಲೇ ಸಂಚು ರೂಪಿಸಿದ್ದರು. ಕೈದಿಗಳನ್ನು ಅಭಿಜಿತ್ ಗೊಗಯ್, ತಾರೋ ಹಮಾಮ್, ಕಲೋಮ್ ಅಪಾಂಗ್, ತಲುಮ್ ಪ್ಯಾನ್ಯಿಂಗ್. ಸುಬಾಶ್ ಮೊಂಡಲ್, …
Read More »ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಸಿಗಬೇಕಿದೆ.: ಪ್ರಹ್ಲಾದ್ ಜೋಶಿ,ಉಮೇಶ್ ಕತ್ತಿ ಸಿಎಂ ಕನಸಿಗೆ ಪರೋಕ್ಷ ಬೆಂಬಲ
ಬಿಜೆಪಿ ಪಾಳಯದಲ್ಲಿ ಸಿಎಂ ಬದಲಾವಣೆಯ ಕೂಗು ಮುಗಿಯುವಂತೆ ಕಾಣುತ್ತಿಲ್ಲ. ಭಿನ್ನಮತ ಶಮನಕ್ಕೆ ಹೈಕಮಾಂಡ್ ಪ್ರಯತ್ನದ ಬಳಿಕವೂ ಅಲ್ಲಲ್ಲಿ ಭಿನ್ನರಾಗಗಳು ಕೇಳಿ ಬರುತ್ತಲೇ ಇದೆ. ಸದಾ ಸಿಎಂ ಸ್ಥಾನದ ಕನಸು ಕಾಣುವ ಉಮೇಶ್ ಕತ್ತಿ ಇಂದು ಮತ್ತೊಮ್ಮೆ ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಸಚಿವ ಉಮೇಶ್ ಕತ್ತಿಯ ಈ ಮಾತಿಗೆ ಪರೋಕ್ಷ ಬೆಂಬಲ ಸೂಚಿಸಿ ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕತ್ತಿ ಉತ್ತರ ಕರ್ನಾಟಕದವರು ಮುಂದಿನ …
Read More »ದರ್ಶನ್ ಸ್ನೇಹಿತರಿಂದಲೇ ನನಗೆ ಬೆದರಿಕೆ: ನಿರ್ಮಾಪಕ ಉಮಾಪತಿ ಬಾಂಬ್
25 ಕೋಟಿ ರೂ. ವಂಚನೆ ಯತ್ನ ಪ್ರಕರಣದಲ್ಲಿ ಪೊಲೀಸರ ಮುಂದೆ ಬಾಯಿ ಬಿಡದಂತೆ ನಟ ದರ್ಶನ್ ಸ್ನೇಹಿತರೇ ನನಗೆ ಬೆದರಿಕೆ ಒಡ್ಡಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಬಾಂಬ್ ಸಿಡಿಸಿದ್ದಾರೆ. ದರ್ಶನ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ, ಪ್ರಕರಣದ ಕುರಿತು ಪೊಲೀಸರ ಮುಂದೆ ಹೇಳಿಕೆ ನೀಡದಂತೆ ದರ್ಶನ್ ಸ್ನೇಹಿತರಾದ ಹರ್ಷ, ರಾಕೇಶ್ ಮತ್ತು ಶರ್ಮ ಅವರಿಂದ ನನಗೆ ಬೆದರಿಕೆ ಇದೆ ಎಂದಿದ್ದಾರೆ. ಸ್ನೇಹಿತರಿಂದಲೇ …
Read More »ಕೆ.ಆರ್.ಎಸ್ ಜಲಾಶಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ : ಮುರುಗೇಶ್ ನಿರಾಣಿ
ಬೆಂಗಳೂರು : ಅಕ್ರಮ ಗಣಿಗಾರಿಕೆ ವಿಚಾರವಾಗಿ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕೆ ಆರ್ ಎಸ್ ಜಲಾಶಯಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಸುಮಲತಾ ಅಂಬರೀಶ್ ಭೇಟಿ ಬಳಿಕ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ. ಮೂರು ತಿಂಗಳಿನಿಂದ ಗಣಿಗಾರಿಕೆ ನಡೆಯುತ್ತಿದೆ ಎಂದು ಸುಮಲತಾ ಹೇಳಿದ್ದಾರೆ. ಆದ್ರೆ ಅಲ್ಲಿ ಮೂರು ತಿಂಗಳಿಂದ ಗಣಿಗಾರಿಕೆ ನಡೆಯುತ್ತಿಲ್ಲ. ಹೀಗಾಗಿ ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಲಾಗುತ್ತದೆ ಎಂದು ಸಚಿವ ನಿರಾಣಿ ಹೇಳಿಕೆ ನೀಡಿದ್ದಾರೆ. …
Read More »ಇಂದಿನಿಂದ ಮುಕ್ತ ವ್ಯಾಪಾರ,ವಹಿವಾಟು
ಹಾಸನ: ಕೊರೊನಾ 2ನೇ ಅಲೆಯು ಇಳಿಮುಖ ವಾಗುತ್ತಾ ಸಾಗಿರುವುದರಿಂದ ಹಾಸನ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ್ದ ಇದ್ದ ಲಾಕ್‌ಡೌನ್ ಸೋಮವಾರದಿಂದ ಸಡಿಲಿಕೆಯಾಗುತ್ತಿದ್ದು, ಇನ್ನು ಪ್ರತಿದಿನವೂ ಮುಂಜಾನೆಯಿಂದ ರಾತ್ರಿವರೆಗೂ ಎಲ್ಲ ವಹಿವಾಟು ಮುಕ್ತವಾಗಿ ನಡೆಯಲಿವೆ. ಇದುವರೆಗೂ ವಾರದಲ್ಲಿ ಸೋಮವಾರ, ಬುಧ ವಾರ, ಶುಕ್ರವಾರ ಮಾತ್ರ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ವಹಿವಾಟಿಗೆ ಅವಕಾಶವಿತ್ತು. ಇನ್ನುಳಿದ 4 ದಿನ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿತ್ತು. ಆದರೆ ಸೋಮವಾರ …
Read More »ಕೋವಿಡ್:ರಾಜ್ಯದಲ್ಲಿಂದು 3204 ಸೋಂಕಿತರು ಗುಣಮುಖ;1386 ಹೊಸ ಪ್ರಕರಣ ಪತ್ತೆ
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿ( ದಿನಾಂಕ: 11.07.2021, 00:00 ರಿಂದ 23:59 ರವರೆಗೆ)ಯಲ್ಲಿ ಹೊಸದಾಗಿ 1386 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ ಹಾಗೂ 61 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ( ಜುಲೈ 12) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ. ಮೇಲೆ ತಿಳಿಸಿದ ಕಾಲಾವಧಿಯಲ್ಲಿ 3204 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ …
Read More »ಹಳ್ಳಿಗರಿಗೂ ಲಸಿಕೆ ಕೊಡಿ : ದಾಸ್ತಾನು ಕೊರತೆಯಿಂದ ಶೇ. 50ರಷ್ಟು ಲಸಿಕೆ ಕೇಂದ್ರ ಸ್ಥಗಿತ
ರಾಜ್ಯದಲ್ಲಿ ದಾಸ್ತಾನು ಕೊರತೆಯಿಂದ ಶೇ. 50ರಷ್ಟು ಕೊರೊನಾ ಲಸಿಕೆ ಕೇಂದ್ರಗಳು ಸ್ಥಗಿತ ಗೊಂಡಿವೆ. ಬೇಡಿಕೆಯ ಶೇ. 20ರಷ್ಟು ಲಸಿಕೆಯೂ ಪೂರೈಕೆಯಾಗುತ್ತಿಲ್ಲ. ಲಸಿಕೆ ಬೇಕೆಂದರೆ ಆಸ್ಪತ್ರೆಗಳ ಮುಂದೆ ನಗರದ ಜನತೆ ಬೆಳಗ್ಗೆ 4ಕ್ಕೇ ಸರತಿಯಲ್ಲಿ ನಿಲ್ಲಬೇಕು. ಹಳ್ಳಿಯವರು ವಾರಗಟ್ಟಲೆ ಕಾಯಬೇಕು! ರಾಜ್ಯದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸರಕಾರಿ ವಲಯದಲ್ಲಿ 8,500 ಸಾವಿರ ಲಸಿಕೆ ಕೇಂದ್ರಗಳನ್ನು ಗುರುತಿಸಲಾಗಿದೆ. ಜೂ. 21ರಂದು ನಡೆದ ಲಸಿಕೆ ಮೇಳದಂದು 7,958 ಕೇಂದ್ರಗಳಲ್ಲಿ 24 ತಾಸುಗಳಲ್ಲಿ 11.6 ಲಕ್ಷ ಮಂದಿಗೆ …
Read More »BSY ಕುರ್ಚಿ ಅಲುಗಾಡುತ್ತಿದ್ದು, ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ : ಸಿದ್ದು
ಬಾದಾಮಿ: ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿ ಅಲುಗಾಡಲು ಶುರುವಾಗಿದ್ದು ಸದ್ಯ ಬಿಎಸ್ ವೈ ತನ್ನ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. . ಯಡಿಯೂರಪ್ಪ ಕುರ್ಚಿ ಅಲುಗಾಡುತ್ತಿದ್ದು, ಅದು ಅಲುಗಾಡಲು ಶುರುವಾಗಿ ಬಹಳ ದಿನವಾಯ್ತು ಎಂದು ಬಾದಾಮಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬಾದಾಮಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಕುರ್ಚಿ ಉಳಿಸಿಕೊಳ್ಳುವುದು. ಅವರ ಮಗ ದುಡ್ಡು ಹೊಡೆಯುವುದು. ಇವೆರಡೆ ಕೆಲಸ ಮಾಡ್ತಿದ್ದಾರೆ. …
Read More »
Laxmi News 24×7