Breaking News

Laxminews 24x7

ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ನ ಎಲ್ಲ ನಾಯಕರು ಪಿಎಚ್ ಡಿ ಮಾಡಿದ್ದಾರೆ: ಸಿಎಂ ಬೊಮ್ಮಾಯಿ

ಬೆಳಗಾವಿ: ಬೆಂಗಳೂರನ್ನು ಸಂಪೂರ್ಣವಾಗಿ ಹಾಳು ಮಾಡಿದವರೇ ಕಾಂಗ್ರೆಸ್ ನವರು. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ನ ಎಲ್ಲ ನಾಯಕರು ಪಿ ಎಚ್ ಡಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ಬೆಳಗಾವಿ ವಿಮಾನ ನಿಲ್ದಾಣದ ಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಅತಿಕ್ರಮಣ ಬರುವುದಕ್ಕೆ ರಾಜಕಾಲುವೆ ಮುಚ್ಚುವದಕ್ಕೆ ಮತ್ತು ರಾಜಕಾಲುವೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿರುವದಕ್ಕೆ ಕಾಂಗ್ರೆಸ್ ಕಾರಣ. ಹತ್ತು ಹಲವು ಭ್ರಷ್ಟಾಚಾರ ಅವರ ಕಾಲದಲ್ಲಿ ನಡೆದಿವೆ. ಈಗ ಅವುಗಳನ್ನು …

Read More »

ಕಳಸಾ ಬಂಡೂರಿ ವಿಷಯದಲ್ಲಿ ಗೋವಾ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಸಿಎಂ ಬೊಮ್ಮಾಯಿ

ಬೆಳಗಾವಿ: ಕಳಸಾ ಬಂಡೂರಿ ವಿಷಯದಲ್ಲಿ ಗೋವಾ ಸರಕಾರ ತೆಗೆದುಕೊಂಡಿರುವ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೋವಾ ನಾಯಕರಿಗೆ ಸ್ಪಷ್ಟವಾಗಿ ತಿರುಗೇಟು ನೀಡಿದರು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಈಗಾಗಲೇ ಯೋಜನೆಯ ಸಮಗ್ರ ಪರಿಷ್ಕೃತ ವರದಿ ಗೆ ಅನುಮೋದನೆ ಸಿಕ್ಕಿದೆ. ಅರಣ್ಯ ಇಲಾಖೆಯ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿಯನ್ನು ಕೈಗೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದರು.   ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ …

Read More »

ಬೆಂಗಳೂರು: ಹಿರಿಯ ನಟ ಲಕ್ಷ್ಮಣ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲಕ್ಷ್ಮಣ್ (54) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ‘ಸೂರ್ಯವಂಶ’, ‘ಯಜಮಾನ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಜನರ ಗಮನ ಸೆಳೆದಿದ್ದರು. ಲಕ್ಷ್ಮಣ್ ಅವರ ನಿಧನಕ್ಕೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಮತ್ತು ಸಿನಿಪ್ರಿಯರು ಸಂತಾಪ ಸೂಚಿಸಿದ್ದಾರೆ.

Read More »

ಬೆಳಗಾವಿಯ ನಾಗರಾಜು ‘ಸುತ್ತೂರು ಕೇಸರಿ’, ಮಂಜು ‘ಸುತ್ತೂರು ಕುಮಾರ’

ನಂಜನಗೂಡು (ಮೈಸೂರು ಜಿಲ್ಲೆ): ಎರಡು ವರ್ಷಗಳ ನಂತರ ರಂಗೇರಿದ್ದ ಸುತ್ತೂರು ಕುಸ್ತಿ ಅಖಾಡದಲ್ಲಿ ಕುಸ್ತಿಪ್ರಿಯರ ಶಿಳ್ಳೆ- ಚಪ್ಪಾಳೆಗಳ ನಡುವೆ ಬೆಳಗಾವಿಯ ನಾಗರಾಜು ಹಾಗೂ ಶ್ರೀರಂಗಪಟ್ಟಣದ ಮಂಜು ಕ್ರಮವಾಗಿ ‘ಸುತ್ತೂರು ಕೇಸರಿ’ ಹಾಗೂ ‘ಸುತ್ತೂರು ಕುಮಾರ’ ಪ್ರಶಸ್ತಿ ಗೆದ್ದರು.   ಸುತ್ತೂರು ಉಚಿತ ಶಾಲೆಯ ಮೈದಾನದ ಅಖಾಡದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಭಾನುವಾರ ನಡೆದ 41ನೇ ರಾಷ್ಟಮಟ್ಟದ ಸುತ್ತೂರು ಕುಸ್ತಿ ಸ್ಪರ್ಧೆಯ ಹಣಾಹಣಿಯಲ್ಲಿ ಬೆಳಗಾವಿ ನಾಗರಾಜು ಹರಿಯಾಣದ ಪೈಲ್ವಾನ್‌ ಬಂಟಿ …

Read More »

ಕೋಲಾರದಲ್ಲಿ ಸಿದ್ದರಾಮಯ್ಯ ಮಣಿಸಲು BJP, JDS ಚಕ್ರವ್ಯೂಹ

ಕೋಲಾರ: ಕೋಲಾರದಲ್ಲೇ ಸ್ಪರ್ಧೆ ಮಾಡುವುದಾಗಿ ಘೋಷಿಸಿರುವ ಸಿದ್ದರಾಮಯ್ಯ ಅವರತ್ತ ಕ್ಷೇತ್ರದಲ್ಲಿ ನಿತ್ಯ ‘ವಿವಿಧಾಸ್ತ್ರ’ ಪ್ರಯೋಗ ನಡೆಯುತ್ತಿದ್ದು, ಇಡೀ ರಾಜ್ಯದ ಚಿತ್ತವೆಲ್ಲಾ ಈ ಕ್ಷೇತ್ರದತ್ತ ನೆಟ್ಟಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪ್ರಮುಖ ನಾಯಕರು ಕೋಲಾರಕ್ಕೆ ಭೇಟಿ ನೀಡುತ್ತಾ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರನ್ನು ಕಟ್ಟಿ ಹಾಕಲು ‘ಚಕ್ರವ್ಯೂಹ’ ರಚಿಸಿಸುತ್ತಿದ್ದಾರೆ. ತಂತ್ರ, ಪ್ರತಿತಂತ್ರದಿಂದಾಗಿ ಚುನಾವಣೆ ಘೋಷಣೆಗೆ ಮುನ್ನವೇ ಕೋಲಾರದ ಅಖಾಡ ರಂಗೇರಿದೆ. ಕುರುಬ ಸಂಘದಲ್ಲಿ …

Read More »

ಭ್ರಷ್ಟಾಚಾರವನ್ನು ಬೆಂಬಲಿಸಿ, ಕುಮ್ಮಕ್ಕು ಕೊಟ್ಟವರು ಕಾಂಗ್ರೆಸ್‌ನವರು: ಬೊಮ್ಮಾಯಿ

ಬೆಂಗಳೂರು: ‘ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್‌. ಭ್ರಷ್ಟಾಚಾರವನ್ನು ಬೆಂಬಲಿಸಿದವರು, ಅದಕ್ಕೆ ಕುಮ್ಮಕ್ಕು ಕೊಟ್ಟವರು ಕಾಂಗ್ರೆಸ್‌ನವರು. ಭ್ರಷ್ಟಾಚಾರದ ಜೊತೆಗೇ ಸರ್ಕಾರ ನಡೆಸಿದವರು. ಭ್ರಷ್ಟಾಚಾರ ಅವರ ಸರ್ಕಾರದ ಒಂದು ಭಾಗವಾಗಿತ್ತು’ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.   ‘ಭ್ರಷ್ಟಾಚಾರದ ತೊಲಗಿಸಿ, ಬೆಂಗಳೂರು ಉಳಿಸಿ’ ಎಂದು ಆಗ್ರಹಿಸಿ ಬೆಂಗಳೂರಿನ 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಿಬಿಎಂಪಿಯಲ್ಲಿನ ಭ್ರಷ್ಟಾಚಾರ ಅವರ ಅವಧಿಯಲ್ಲಿ ನಡೆದಿದೆ. ಪ್ರತಿಭಟನೆ …

Read More »

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಇಬ್ಬರು ಪುತ್ರರ ವಿವಾಹ ಸಮಾರಂಭ ಸೋಮವಾರ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸೋಮವಾರ ಬೆಳಗಾವಿಗೆ ಗಣ್ಯರ ದಂಡೇ ಹರಿದು ಬರಲಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಇಬ್ಬರು ಪುತ್ರರ ವಿವಾಹ ಸಮಾರಂಭ ಸೋಮವಾರ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ಹೊರಡಲಿರುವ ಬೊಮ್ಮಾಯಿ 12.15ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು. ಅಲ್ಲಿಂದ ಸಿಪಿಎಡ್ ಮೈದಾನಕ್ಕೆ ಆಗಮಿಸಿ ವಿವಾಹ ಸಮಾರಂಭದಲ್ಲಿ …

Read More »

ಇಂದಿರಾ ಗಾಂಧಿ ಸಿನಿಮಾಕ್ಕಾಗಿ ತನ್ನೆಲ್ಲ ಆಸ್ತಿ ಅಡವಿಟ್ಟ ಕಂಗನಾ ರನೌತ್!

ಕಂಗನಾ ರನೌತ್ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವವರು. ಒಂದರ ಹಿಂದೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಕೇಸುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಆದರೆ ನಟನೆ ವಿಷಯಕ್ಕೆ ಬಂದಾಗ ಆಕೆಯನ್ನು ಮೀರಿಸುವ ನಟಿ ಬಾಲಿವುಡ್‌ನಲ್ಲಿ ಮತ್ತೊಬ್ಬರಿಲ್ಲ. ಯಾವುದೇ ಪಾತ್ರವಾದರೂ ಪರಕಾಯ ಪ್ರವೇಶ ಮಾಡುವ ಕಂಗನಾ, ಪಾತ್ರವೇ ತಾವಾಗಿಬಿಡುತ್ತಾರೆ. ಕಂಗನಾರನ್ನು ದ್ವೇಷಿಸುವವರು ಸಹ ಆಕೆಯ ನಟನೆಗೆ ಮಾರು ಹೋಗದೇ ಬೇರೆ ವಿಧಿಯಿಲ್ಲ. ನಟನೆಗೆ ಎರಡು ರಾಷ್ಟ್ರಪ್ರಶಸ್ತಿ ಪಡೆದಿರುವ ಕಂಗನಾ ಇದೀಗ ಮತ್ತೊಂದು ರಾಷ್ಟ್ರಪ್ರಶಸ್ತಿ ಮೇಲೆ ಕಣ್ಣು ಹಾಕಿದಂತೆ …

Read More »

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನೌಕಾಪಡೆಯ ತುಕಡಿಗೆ ಮಂಗಳೂರಿನ ದಿಶಾ ಕ್ಯಾಪ್ಟನ್‌

ಮಂಗಳೂರು: ಇಲ್ಲಿನ ತಿಲಕನಗರದ ದಿಶಾ ಅಮೃತ್‌ ಅವರು, ಇದೇ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿದ್ದಾರೆ. ನೌಕಾಪಡೆಯ 144 ಸೈನಿಕರನ್ನು ಒಳಗೊಂಡ ತುಕಡಿ ಹಾಗೂ ಸ್ತಬ್ಧಚಿತ್ರವು ಈ ಕವಾಯತಿನಲ್ಲಿ ‘ನಾರಿಶಕ್ತಿ’ಯನ್ನು ಪ್ರದರ್ಶಿಸಲಿದೆ.   ಅಂಡಮಾನ್‌ ನಿಕೋಬಾರ್‌ನಲ್ಲಿ ನೌಕಾಪಡೆಯಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಆಗಿರುವ ಮಗಳು ಗಣರಾಜ್ಯೋತ್ಸವ ಪರೇಡ್‌ನಲ್ಲಿ ತುಕಡಿಯ ನಾಯಕಿಯಾಗಿ ಹೆಜ್ಜೆಹಾಕುವುದನ್ನು ಕಣ್ತುಂಬಿಕೊಳ್ಳಲು ಆಕೆಯ ತಂದೆತಾಯಿ ಅಮೃತ್ ಕುಮಾರ್‌- ಲೀಲಾ ದಂಪತಿ ನವದೆಹಲಿಗೆ ತೆರಳಿದ್ದಾರೆ. ಮಗಳ ಸಾಧನೆ …

Read More »

ವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಆರೋಪದ ಕುರಿತು ಕಾಂಗ್ರೆಸ್‌ನಿಂದ ಬೆಂಗಳೂರಿನ 300 ಸ್ಥಳಗಳಲ್ಲಿ ನಾಳೆ ಪ್ರತಿಭಟನೆ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಆರೋಪದ ಕುರಿತು ಕ್ರಮಕ್ಕೆ ಆಗ್ರಹಿಸಿ ಬೆಂಗಳೂರಿನ 300 ಸ್ಥಳಗಳಲ್ಲಿ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಲಿದೆ. ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಅವರೊಂದಿಗೆ ಭಾನುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎನ್.ಎ.‌ಹ್ಯಾರಿಸ್, ‘ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಆರೋಪಗಳು ಬಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದಲ್ಲಿನ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವುದಕ್ಕಾಗಿ ಬೆಂಗಳೂರಿನ 51 ಮೆಟ್ರೊ ರೈಲು ನಿಲ್ದಾಣಗಳು, 26 ಮೇಲುಸೇತುವೆಗಳು, 200 ಟ್ರಾಫಿಕ್ ಸಿಗ್ನಲ್ …

Read More »