Breaking News

Laxminews 24x7

ನವೆಂಬರ್ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ: ಕುಮಾರಸ್ವಾಮಿ ಹೊಸ ಬಾಂಬ್

ರಾಮನಗರ: ನವೆಂಬರ್ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಬಾರಿ ಬದಲಾವಣೆಗಳು ಆಗಲಿವೆ, ಕಾದು ನೋಡಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಎಚ್‌ಡಿಕೆ ಕಾಣಿಸಿಕೊಂಡಿದ್ದಾರೆ. ತಮ್ಮ ಸ್ವಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆ ನಡೆಸಿ ಮಾತನಾಡಿದ ಅವರು, ಬಹುಮತದ ಸರ್ಕಾರ ಬಂದಿದೆ ಎಂದು ಭಾವಿಸಬೇಡಿ. ಲೋಕಸಭಾ ಚುನಾವಣೆ ಬಳಿಕ ಏನು ಬೆಳವಣಿಗೆ ಆಗುತ್ತದೆ ಎಂದು …

Read More »

ಮದ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

ಯಲ್ಲಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಬಳಗಾರ ಕ್ರಾಸ್ ಬಳಿ ಮದ್ಯ ಪ್ಯಾಕೆಟ್ ಗಳನ್ನು ತುಂಬಿದ ಲಾರಿ ಚಾಲಕನ‌ ನಿಯಂತ್ರಣ ತಪ್ಪಿ ಕಂದಕದಲ್ಲಿ ಪಲ್ಟಿಯಾಗಿದೆ. ಕಲಬುರ್ಗಿಯಿಂದ ಉಡುಪಿಗೆ ಸಾರಾಯಿ ಪಾಕೇಟ್ ತುಂಬಿದ್ದ ಲಾರಿ ಆರತಿಬೈಲ್ ಘಟ್ಟದ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಹಳ್ಳದ ಪಕ್ಕದ ಕಂದಕದಲ್ಲಿ ಬಿದ್ದು ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಲಾರಿ ಚಾಲಕನಿಗೆ ಅಲ್ಪಪ್ರಮಾಣದ ಗಾಯವಾಗಿದೆ. ನಿರ್ವಾಹಕ ಲಾರಿಯಲ್ಲಿ ಸಿಕ್ಕಿ ಒದ್ದಾಡಿದ್ದು,ತಾಸು ಗಟ್ಟಲೆ ಒದ್ದಾಡಿ ಹೊರತೆಗೆಯಲಾಗಿದೆ.ಆತನ ಕೈಕಾಲು ಮುರಿದಿದ್ದು,ಗಂಭೀರ ಗಾಯಗೊಂಡಿದ್ದಾನೆ.ಗಾಯಾಳುಗಳನ್ನು …

Read More »

ದಲಿತರಿಗೆ ಡಿಸಿಎಂ ಹುದ್ದೆ ನೀಡದಿದ್ದರೆ ಪಕ್ಷಕ್ಕೆ ತೊಂದರೆಯಾಗಬಹುದು: ಪರಮೇಶ್ವರ್

ಬೆಂಗಳೂರು: ದಲಿತರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡದಿದ್ದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿ ಪಕ್ಷಕ್ಕೆ ತೊಂದರೆಯಾಗಲಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಡಿಸಿಎಂ ಜಿ ಪರಮೇಶ್ವರ ಅವರು ಪಕ್ಷದ ಕೇಂದ್ರ ನಾಯಕತ್ವಕ್ಕೆ ಎಚ್ಚರಿಕೆ ನೀಡಿದ್ದಾರೆ.   ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಡಿಕೆ ಶಿವಕುಮಾರ್ ಅವರ ಏಕೈಕ ಡಿಸಿಎಂ ಎಂದು ಕಾಂಗ್ರೆಸ್ ಘೋಷಿಸಿದ ಕೆಲವೇ ಗಂಟೆಗಳ ನಂತರ ಅವರ ಈ ಎಚ್ಚರಿಕೆ ಬಂದಿದೆ. ಡಿಕೆ ಶಿವಕುಮಾರ್ ಅವರೊಬ್ಬರೇ ಡಿಸಿಎಂ ಆಗಬೇಕು ಎಂದು …

Read More »

ಅಂದು ಸ್ಮಶಾನದಲ್ಲಿ ಸತೀಶ್​ ಜಾರಕಿಹೊಳಿ ನುಡಿದಿದ್ದ ಭವಿಷ್ಯ ಈಗ ನಿಜವಾಯ್ತು..!

ಬೆಳಗಾವಿ: ನಮ್ಮ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದು, 2020 ರಲ್ಲಿಯೇ ತಾವು ತೆಗೆದುಕೊಂಡಿದ್ದ ಹೊಸ ಕಾರಿಗೆ 2023 ಎಂದು ನಂಬರ್‌ ಪ್ಲೇಟ್‌ ಹಾಕಿಸಿ ಸ್ಮಶಾನದಲ್ಲಿ ಪೂಜೆ ಸಲ್ಲಿಸಿದ್ದ ಸತೀಶ್‌ ಜಾರಕಿಹೊಳಿ ಅವರ ಭವಿಷ್ಯ ನಿಜವಾಗಿದ್ದು, ಈಗ ಕಾಂಗ್ರೆಸ್‌ 135 ಕ್ಷೇತ್ರಗಳಲ್ಲಿ ಗೆದ್ದು ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸುತ್ತಿದೆ.   ಹೌದು, ಸದಾ ಕಾಲ ಮೌಢ್ಯತೆಗೆ ಸೆಡ್ಡು ಹೊಡೆಯುವ ಮೂಲಕ ವಿವಿಧ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿರುವ ಸತೀಶ್​ …

Read More »

ಸಿದ್ದರಾಮಯ್ಯಗೆ ಸಿಎಂ ಪಟ್ಟ, ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಜ್ಜ ನುಡಿದ ಕಾರ್ಣಿಕ ನಿಜವಾಯ್ತಾ?

ಹಾವೇರಿ:ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಶ್ರೀಕ್ಷೇತ್ರ ಮೈಲಾರಲಿಂಗೇಶ್ವರನ ಪ್ರಸ್ತುತ ವರ್ಷದ ಕಾರ್ಣಿಕ ನುಡಿ ನಿಜವಾಗಿದೆ. 2023 ರ ಫೆಬ್ರುವರಿಯಲ್ಲಿ ನಡೆದ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವದಲ್ಲಿ ಗೊರವಪ್ಪ ರಾಮಣ್ಣ ಅಂಬಲಿ ಅಳಿಸಿತು ಕಂಬಳಿ ಬೀಸಿತಲೆ ಪರಾಕ್ ಎಂದು ಕಾರ್ಣಿಕ ನುಡಿದಿದ್ದು ಅದರಂತೆ ಈ ವರ್ಷದ ಮಳೆ ಬೆಳೆ ಮತ್ತು ರಾಜಕೀಯ ವಿಶ್ಲೇಷಣೆ ಮಾಡಲಾಗಿತ್ತು. ಕಾರ್ಣಿಕವನ್ನು ರಾಜಕೀಯವಾಗಿ ವಿಶ್ಲೇಷಣೆ ಮಾಡಿದ ರಾಜಕೀಯ ಮುಖಂಡರು ಕುರುಬ ಸಂಕೇತವಾದ ಕಂಬಳಿ ಕಾರ್ಣಿಕದಲ್ಲಿ ಬಳಕೆಯಾಗಿದೆ. ಇದರಿಂದ ಈ ಕುರುಬ …

Read More »

91ನೇಹುಟ್ಟುಹಬ್ಬದ ಜನ್ಮದಿನದ ಸಂಭ್ರಮದಲ್ಲಿ ದೇವೇಗೌಡರು

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಹೆಚ್. ಡಿ. ದೇವೇಗೌಡ ಅವರು ಇಂದು ತಮ್ಮ 91 ನೇ ವರ್ಷದ ಹುಟ್ಟುಹಬ್ಬವನ್ನು ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಪುತ್ರಿಯರು ಸೇರಿದಂತೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಗೌಡರು ಹುಟ್ಟುಹಬ್ಬ ಆಚರಿಸಿಕೊಂಡರು. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ …

Read More »

ಬಿಜೆಪಿಯಲ್ಲಿ ಸರ್ಕಾದಲ್ಲಿ ಆದ ಲೂಟಿಯೇ ಈ ಸರ್ಕಾರದಲ್ಲೂ ನಡೆಯಲಿದೆ.:H.D.K.

ರಾಮನಗರ: ಬಿಜೆಪಿಯಲ್ಲಿ ಸರ್ಕಾದಲ್ಲಿ ಆದ ಲೂಟಿಯೇ ಈ ಸರ್ಕಾರದಲ್ಲೂ ನಡೆಯಲಿದೆ. ಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಆತಂಕ ಬೇಡ. ಇನ್ನು ಎರಡು ಮೂರು ತಿಂಗಳಲ್ಲಿ ಹೊಸ ರಾಜಕೀಯ ಬದಲಾವಣೆ ಆಗುತ್ತೆ ಎಂದು ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾಜಿ ಸಿಎಂ ‌ಹೆಚ್​ ಡಿ ಕುಮಾರಸ್ವಾಮಿ ಭವಿಷ್ಯ ನುಡಿದರು. ಇಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯ ಇಲ್ಲ. ಪಕ್ಷಕ್ಕೆ ಈ ರೀತಿಯ ಸೋಲು ಹೊಸದೇನಲ್ಲ. ಪ್ರಾಮಾಣಿಕ ಕಾರ್ಯಕರ್ತರ …

Read More »

ಕುರಿ ಲೆಕ್ಕ ಹಾಕಲು ಬಾರದವ ಅನ್ನಿಸಿಕೊಂಡಿದ್ದ ಸಿದ್ದರಾಮಯ್ಯ.. ಈಗ 24ನೇ ಮುಖ್ಯಮಂತ್ರಿ

ಬೆಂಗಳೂರು: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪದಗ್ರಹಣ ಸನ್ನಿಹಿತವಾಗಿದೆ. ಮೇ 20ರಂದು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ ಸಮಾರಂಭ ನೆರವೇರಲಿದ್ದು, ಸಿದ್ದರಾಮಯ್ಯ ಸಿಎಂ ಆಗಿ ಹಾಗೂ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಅಗಿ ಪದಗ್ರಹಣ ಮಾಡಲಿದ್ದಾರೆ. ಒಂದು ಸಂದರ್ಭದಲ್ಲಿ ಕುರಿ ಲೆಕ್ಕ ಹಾಕಲು ಬಾರದವ, ಹೇಗೆ ಹಣಕಾಸು ಸಚಿವನಾಗಿ ಬಜೆಟ್ ಮಂಡಿಸುತ್ತಾನೆ ಎಂದು ಟೀಕೆಗೆ ಒಳಗಾಗಿದ್ದರು. ಆದರೆ ಇದುವರೆಗೂ ಯಶಸ್ವಿಯಾಗಿ 13 ಹಣಕಾಸು ಬಜೆಟ್ ಮಂಡಿಸಿದ್ದು, 14ನೇ ಬಜೆಟ್​ …

Read More »

ಕಳಪೆ ಮಟ್ಟದ ಡಾಂಬರೀಕರಣ ರಸ್ತೆ,-ಗುತ್ತಿಗೆದಾರ ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಕ್ರಾಸ್ ದಿಂದ ಶಿರಶ್ಯಾಡ ಗ್ರಾಮದವರೆಗೆ 2023 ನೇ ಸಾಲಿನಲ್ಲಿ ಡಾಂಬರೀಕರಣ ರಸ್ತೆ ಮಂಜೂರಾಗಿದ್ದು, ಪ್ರಸ್ತುತವಾಗಿ ಕಾಮಗಾರಿಯನ್ನು ಗುತ್ತಿಗೆದಾರ ಪ್ರಾರಂಭಮಾಡಿದ್ದು , ಶಿರಶ್ಯಾಡ ಗ್ರಾಮಸ್ಥರು ಈ ಕಾಮಗಾರಿ ಪರಿಶೀಲಿಸಿದಾಗ ಕಳಪೆ ಮಟ್ಟದ್ದು ಎಂದು ಕಂಡು ಬಂದಾಗ ದಿಢೀರನೆ ಗುತ್ತಿಗೆದಾರನಿಗೆ ವಿಚಾರಿಸಿದಾಗ ಗುತ್ತಿಗೆದಾರನು ಗ್ರಾಮಸ್ಥರಿಗೆ ಸರಿಯಾಗಿ ಸ್ಪಂದಿಸಿರುವುದಿಲ್ಲ. ಕಾರಣ ಗ್ರಾಮಸ್ಥರು ಸಂಬಂಧಿಸಿದ ಎಇಇ ಅವರಿಗೆ ಫೋನ್ ಕರೆ ಮಾಡಿದಾಗ ಸಾವ೯ಜನಿಕರಿಗೆ ಕೆಲವು ಗಂಟೆಗಳ ಕಾಲ …

Read More »

ಬೈಕ್‌ಗೆ ಲಾರಿ ಡಿಕ್ಕಿಲಾರಿ ಡಿಕ್ಕಿ ಮಹಿಳೆಯ ದುರ್ಮರಣ

ವಿಜಯಪುರ…  ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿಲಾರಿ ಡಿಕ್ಕಿರುವ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರದ ತೊರವಿ ರಸ್ತೆಯಲ್ಲಿ ಗುರುವಾರ ನಡೆದಿದೆ. ಇನ್ನು ಬೈಕ್‌ನಲ್ಲಿದ ಹಿಂಬದಿಯ ಮಹಿಳೆ ಮೃತಪಟ್ಟಿದ್ದಾಳೆ. ಆದ್ರೇ, ಮಹಿಳೆಯ ಹೆಸರು ತಿಳಿದುಬಂದಿಲ್ಲ. ಅಲ್ಲದೇ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. KA 28 EF 3015 ಬೈಕ್‌ಗೆ KA 28 C 5824 ಲಾರಿ ಡಿಕ್ಕಿಯಾಗಿದೆ. ಅಲ್ಲದೇ, ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ವಿಜಯಪುರ ಗ್ರಾಮೀಣ …

Read More »