Breaking News

Laxminews 24x7

ಎಕ್ಸ್​ಪ್ರೆಸ್​ವೇಯಲ್ಲಿ ಭೀಕರ ರಸ್ತೆ ಅಪಘಾತ.. ಹೊತ್ತಿ ಉರಿಯುತ್ತಿರುವ ಆಯಿಲ್​ ಟ್ಯಾಂಕರ್, ಸಾವು-ನೋವು! ​

ಪುಣೆ (ಮಹಾರಾಷ್ಟ್ರ): ಲೋನಾವಾಲಾ ಬಳಿಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಮೇಲ್ಸೇತುವೆಯಲ್ಲಿ ತೈಲ ಟ್ಯಾಂಕರ್ ಅಪಘಾತಕ್ಕೀಡಾಗಿ (Oil Tanker Fire) ಬೆಂಕಿ ಹೊತ್ತಿಕೊಂಡ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ಸೇತುವೆಯ ಕೆಳಗಿನ ಭಾಗದಲ್ಲೂ ಅಪಘಾತಗಳು ಸಂಭವಿಸಿವೆ ಎಂಬ ಮಾಹಿತಿ ಹೊರಬೀಳುತ್ತಿದೆ. ಈ ಅಪಘಾತದಲ್ಲಿ 12 ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಅಗ್ನಿ ಅವಘಡದಿಂದಾಗಿ ರಕ್ಷಣಾ ಕಾರ್ಯಾಚರಣೆಯು ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದು, ಸದ್ಯ ಲೋನಾವಾಲಾ ನಗರದಿಂದ ವಾಹನ ಸಂಚಾರವನ್ನು ಬದಲಿಸಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ …

Read More »

ಇಂಧನ ಸಚಿವರ ಹೇಳಿಕೆ ಆಶ್ಚರ್ಯ ತಂದಿದೆ: ಎಲ್ಲರಿಗೂ 200 ಯೂನಿಟ್ ವಿದ್ಯುತ್ ಕೊಡಬೇಕೆಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

ಬೆಂಗಳೂರು: ”ಇಂಧನ ಸಚಿವ ಕೆ‌ ಜೆ ಜಾರ್ಜ್ ಹೇಳಿಕೆ ಬಹಳ ಆಶ್ಚರ್ಯ ಉಂಟುಮಾಡಿದೆ” ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ”ಹೊಸದಾಗಿ ಮನೆ ಕಟ್ಟಿದವರು ಹಾಗೂ ಹೊಸ ಬಾಡಿಗೆದಾರರಿಗೆ 58 ಯೂನಿಟ್ ಉಚಿತ ಅಂತ ಹೇಳಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವೆಂದು ಹೇಳಿದ್ದಾರೆ. ನೀವು ಕೊಟ್ಟಿರುವ ಭರವಸೆ ಹಿನ್ನೆಲೆಯಲ್ಲಿ ಜನರು ನಿಮಗೆ ವೋಟ್ ಕೊಟ್ಟಿದ್ದಾರೆ. …

Read More »

ಕಲಬುರಗಿಯಲ್ಲಿ ಜಾತ್ರೆಗೆ ಆಗಮಿಸಿದ್ದ ದಂಪತಿ ವಿದ್ಯುತ್‌ ತಂತಿ ತಗುಲಿ ಸಾವು

ಕಲಬುರಗಿ: ಜಾತ್ರೆಗೆ ಆಗಮಿಸಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಮೃತಪಟ್ಟಿರುವ ಘಟನೆ ಚಿತ್ತಾಪುರ ಪಟ್ಟಣದಲ್ಲಿ ಇಂದು ನಡೆದಿದೆ. ಯಾದಗಿರಿ ಜಿಲ್ಲೆಯ ಏವೂರ ತಾಂಡಾದ ನಿವಾಸಿಗಳಾದ ಶಿವು ರಾಠೋಡ (30) ಮತ್ತು ತಾರಾಬಾಯಿ ರಾಠೋಡ (26) ಮೃತರು. ಚಿತ್ತಾಪುರ ಪಟ್ಟಣದಲ್ಲಿ ನಡೆದ ಹಜರತ್ ಚಿತಾಶಹಾವಲಿ ದರ್ಗಾ ಜಾತ್ರಾ ಕಾರ್ಯಕ್ರಮಕ್ಕೆ ಇವರು ಆಗಮಿಸಿದ್ದರು. ಘಟನೆ ಹೀಗೆ ನಡೆಯಿತು..: ವಿದ್ಯುತ್ ಕಂಬದ ಆಸರೆಗೆಂದು ನೆಲದಲ್ಲಿ ಹೂತಿದ್ದ ತಂತಿಗೆ ವಿದ್ಯುತ್ ಪ್ರವಹಿಸಿದೆ. ಅಲ್ಲೇ ನೀರು ನಿಂತಿದ್ದರಿಂದ ಅವಘಡ ಸಂಭವಿಸಿದೆ. …

Read More »

ಕಾಲಗರ್ಭ ಸೇರುತ್ತಿವೆ ಪುರಾತನ ಸ್ಮಾರಕಗಳು: ಕನಕಗಿರಿ ಪುಷ್ಕರಣಿಯ ಕಥೆಯಲ್ಲ, ಇದು ವ್ಯಥೆ

ಗಂಗಾವತಿ: ಐತಿಹಾಸಿಕ ಹಿನ್ನೆಲೆಯುಳ್ಳ ಕನಕಗಿರಿ ಪಟ್ಟಣವು ಧಾರ್ಮಿಕವಾಗಿ ಮಾತ್ರವಲ್ಲದೇ ಪುರಾತನ ಸ್ಮಾರಕಗಳಿಂದ ಸಾಂಸ್ಕೃತಿಕವಾಗಿ ತನ್ನದೇ ಆದ ವೈಶಿಷ್ಟತೆ ಹೊಂದಿವೆ. ಪುರಾತತ್ವ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿರ್ಲಕ್ಷ್ಯದಿಂದ ಪುರಾತನ ಸ್ಮಾರಕಗಳು, ದೇವಾಲಯಗಳು ಕ್ರಮೇಣ ಕಾಲಗರ್ಭಕ್ಕೆ ಸೇರುತ್ತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಅತೀವ ಬೇಸರ ಮೂಡಿಸಿದೆ. ಹಾಲಿ ಸಚಿವ ಶಿವರಾಜ ತಂಗಡಗಿ ಮೂರು ಬಾರಿ ಸಚಿವರಾಗಿ, ಬಸವರಾಜ ದಢೇಸ್ಗೂರು ಶಾಸಕರಾಗಿ ಇದೇ ಕ್ಷೇತ್ರದಿಂದ ಆಯ್ಕೆಯಾದರೂ ಈ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಯಾವುದೇ …

Read More »

ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ: ಇಬ್ಬರಿಗೆ 20 ವರ್ಷ ಶಿಕ್ಷೆ ವಿಧಿಸಿ ಮಂಗಳೂರು ಕೋರ್ಟ್‌ ಆದೇಶ

ಮಂಗಳೂರು : ಅಪ್ರಾಪ್ತ ವಯಸ್ಕ ಬಾಲಕಿಯನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪುಸಲಾಯಿಸಿ ಅಪಹರಣ ಮಾಡಿ ಅತ್ಯಾಚಾರಗೈದಿರುವ ಇಬ್ಬರು ಅಪರಾಧಿಗಳಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎಫ್‌ಟಿಎಸ್‌ಸಿ-2 ನ್ಯಾಯಾಲಯವು 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಕಾವಳಗದ್ದೆಯ ಸಚಿನ್ ಸಂತೋಷ್ ನಾಯ್ಕ (22) ಮತ್ತು ಹಟ್ಟಿಕೆರೆಯ ಪ್ರವೀಣ್ ಜಯಪಾಲ್ ನಾಯ್ಕ (33) ಶಿಕ್ಷೆಗೊಳಗಾದವರು. ಪ್ರಕರಣದ ವಿವರ: 2022ರ ಏಪ್ರಿಲ್​ 12ರ ಮಧ್ಯಾಹ್ನ 12.45ಕ್ಕೆ ಪಿಯುಸಿ …

Read More »

ಬಿಲ್ ಎಷ್ಟೇ ಬಂದರೂ ಎಲ್ಲರೂ ಅದನ್ನು ಕಡ್ಡಾಯವಾಗಿ ತುಂಬಬೇಕು.: ಹೆಸ್ಕಾಂ ಎಂಡಿ

ಬೆಳಗಾವಿ : ಸರ್ಕಾರ ಹಾಗೂ ಹೆಸ್ಕಾಂ ವತಿಯಿಂದ ಲೆಕ್ಕಾಚಾರ ಮಾಡಿದ ಹಾಗೆಯೇ ವಿದ್ಯುತ್ ದರ ನಿಗದಿಪಡಿಸಲಾಗಿದೆ. ವಿದ್ಯುತ್ ದರ ಹೆಚ್ಚಳ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪರಿಹಾರ ಸೂಚಿಸಿದರೆ ಅದನ್ನು ಅನುಷ್ಠಾನ ಮಾಡಲಾಗುವುದು. ಹೀಗಾಗಿ ವಿದ್ಯುತ್ ಬಿಲ್ ಎಷ್ಟೇ ಬಂದರೂ ಎಲ್ಲರೂ ಅದನ್ನು ಕಡ್ಡಾಯವಾಗಿ ತುಂಬಲೇಬೇಕು ಎಂದು ಹೆಸ್ಕಾಂ ಎಂ.ಡಿ. ಮಹಮ್ಮದ್ ರೋಷನ್ ಹೇಳಿದರು. ಮಂಗಳವಾರ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಉದ್ಯಮಿಗಳ ಜೊತೆಗೆ ಅವರು ಸಭೆ ನಡೆಸಿದರು. …

Read More »

ವಾಹನ ಸಂಚಾರ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿ ಆರೋಪ: ಸಿಎಂ – ಡಿಸಿಎಂ ಸೇರಿ 36 ಮಂದಿಗೆ ಸಮನ್ಸ್

ಬೆಂಗಳೂರು: ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ವಾಹನ ಸಂಚಾರ ಮತ್ತು ಕಾನೂನು ಸುವ್ಯವಸ್ತೆಗೆ ಅಡ್ಡಿ ಪಡಿಸಿದ್ದ ಆರೋಪದಲ್ಲಿ ದಾಖಲಾಗಿದ್ದ ದೂರಿನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ಮುಖಂಡರಿಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.   ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಚಾರದ ಆರೋಪ ಎದುರಾಗಿದ್ದ ಸಂದರ್ಭದಲ್ಲಿ ಈಶ್ವರಪ್ಪ ರಾಜೀನಾಮಗೆ ಆಗ್ರಹಿಸಿ ಕಾಂಗ್ರೆಸ್‌ನ ಹಲವು ಮುಖಂಡರು ಕಾಂಗ್ರೆಸ್ ಭವನದಿಂದ ಮುಖ್ಯಮಂತ್ರಿಗಳ ಮನೆಗೆ …

Read More »

ರವಿ ಡಿ ಚನ್ನಣ್ಣವರ್ ವರ್ಗಾವಣೆ ಆದೇಶಕ್ಕೆ ಸಿಎಟಿ ತಡೆಯಾಜ್ಞೆ

ಬೆಂಗಳೂರು: ಅಖಿಲ ಭಾರತ ಸೇವಾ ನಿಯಮಗಳ ಪ್ರಕಾರ ನಿಗದಿ ಪಡಿಸಿರುವ ಕನಿಷ್ಟ ಎರಡು ವರ್ಷಗಳ ಅವಧಿಗೂ ಮುನ್ನ ಕಿಯೋನಿಕ್ಸ್​​ನ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಿಂದ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ತಡೆ ನೀಡಿ ಆದೇಶಿಸಿದೆ.   ಕರ್ನಾಟಕ ವಿದುನ್ಮಾನ ಅಭಿವೃದ್ಧಿ ನಿಗಮದ(ಕಿಯೋನಿಕ್ಸ್) ವ್ಯವಸ್ಥಾಪಕ ಹುದ್ದೆಗೆ ಅಧಿಕಾರ ಸ್ವೀಕರಿಸಿದ 6 ತಿಂಗಳಲ್ಲಿ ವರ್ಗಾವಣೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ರವಿ ಡಿ ಚನ್ನಣ್ಣನವರ್ ಸಿಎಟಿಯಲ್ಲಿ …

Read More »

ಮಧ್ಯಪ್ರದೇಶ ಗೆಲ್ಲಲು ಕಾಂಗ್ರೆಸ್​​ನ ಕರ್ನಾಟಕ ಮಂತ್ರ.. ರಾಹುಲ್​ – ಖರ್ಗೆ ಜಂಟಿ ರ‍್ಯಾಲಿಗೆ ಮಹಾಪ್ಲಾನ್​​!

ನವದೆಹಲಿ: ಇದೇ ವರ್ಷದ ಅಂತ್ಯದಲ್ಲಿ ಅಂದರೆ ಡಿಸೆಂಬರ್​ನಲ್ಲಿ ನಾಲ್ಕೈದು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಪ್ರಮುಖವಾಗಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ತೆಲಂಗಾಣ ಸೇರಿ ಇತರ ಕಡೆ ಎಲೆಕ್ಷನ್​ ನಡೆಯಲಿವೆ. ಪ್ರಸ್ತುತ ಕಾಂಗ್ರೆಸ್​ ನಾಯಕರು ಮಧ್ಯಪ್ರದೇಶದ ಮೇಲೆ ಚಿತ್ತ ಹರಿಸಿದ್ದಾರೆ. ಕಳೆದ ಎಲೆಕ್ಷನ್​ನಲ್ಲಿ ಅತಿಹೆಚ್ಚು ಸ್ಥಾನ ಗೆದ್ದು ಪಕ್ಷೇತರರ ಸಹಾಯದಿಂದ ಸರ್ಕಾರ ರಚಿಸಿ, ಆ ಬಳಿಕ ಸಿಂದಿಯಾ ಬಂಡಾಯದಿಂದ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್​, ಈ ಬಾರಿ ಶತಾಯ- ಗತಾಯ ಅಧಿಕಾರ ಹಿಡಿಯಬೇಕು ಎಂದು …

Read More »

ವಿಧಾನಪರಿಷತ್ ಚುನಾವಣೆ .. ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು : ಕಳೆದ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿತ್ತು. ಈ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್​ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಅಧಿಕಾರ ಕೊಟ್ಟಿದ್ದಾರೆ. ಸಚಿವ ಸಂಪುಟ ರಚನೆ ಕೂಡ ಆಗಿದೆ. ಆದರೇ, ಇದೀಗವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂರು ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದ್ದು, ಇಂದು ಅಧಿಸೂಚನೆ ಪ್ರಕಟವಾಗಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಜೂನ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂ. …

Read More »