ಇಂದು ದೇಶಾದ್ಯಂತ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಬರುವ ಮಹಾಶಿವರಾತ್ರಿ ಪರಮೇಶ್ವರನ ಆರಾಧನೆಗೆ ಅತ್ಯಂತ ವಿಶೇಷ ದಿನ. ಶಾಸ್ತ್ರಗಳ ಪ್ರಕಾರ ದೇವರ ದೇವ ಮಹಾದೇವನ ಒಲುಮೆಗೆ ಪಾತ್ರರಾಗಲು ಇರುವಂತಹ ಒಂದು ಸರಳ ವಿಧಾನವೇನೂ ಅಂದ್ರೆ ಅದುವೇ ಶುದ್ಧ ಭಕ್ತಿಯಿಂದ ಶಿವನನ್ನ ಧ್ಯಾನಿಸುವುದು, ಪೂಜಿಸುವುದು, ಭಜಿಸುವುದು. ಇನ್ನು ಮಹಾಶಿವರಾತ್ರಿಯ ದಿನ ಶಿವನ ಭಕ್ತರು ಉಪವಾಸ ಕೈಗೊಳ್ಳುವ ಮೂಲಕ, ಧ್ಯಾನ, ಜಾಗರಣೆಗಳನ್ನು ಮಾಡುವ ಮೂಲಕ ಶಿವನನ್ನು …
Read More »ಮೊಬೈಲ್ ನಂಬರ್ ಕೊಡಲು ನಿರಾಕರಿಸಿದಕ್ಕೆ ಯುವಕರಿಂದ ಯುವತಿ ಮೇಲೆ ಹಲ್ಲೆ;
ಬಾಗಲಕೋಟೆ, ಮಾರ್ಚ್.08: ಯುವಕರ ಗುಂಪೊಂದು ವಿದ್ಯಾರ್ಥಿನಿಯರನ್ನು (Student) ಚುಡಾಯಿಸಿ, ಹಲ್ಲೆ ಮಾಡಿದ್ದು ಹಲ್ಲೆಗೊಳಗಾದ (Assault) ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯ ರಬಕವಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ (ಸ್ವಾತಿ ನಡಕಟ್ಟಿ) ಆಸ್ಪತ್ರೆಗೆ ದಾಖಲಾಗಿದ್ದಾಳೆ. ಬುಧವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಅನ್ವರ್ ಮಕಾಂದಾರ್, ಆಯನ್ ಪಟೇಲ್, ಜಾವೀದ್ ಅಲಿಹ್ಮದ್ ಎಂಬ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಯುವತಿ ಸ್ವಾತಿ ತನ್ನ ಸ್ನೇಹಿತೆಯರಾದ …
Read More »ಮದುವೆಯಾಗಿ ಆಗಷ್ಟೇ 7 ತಿಂಗಳ ಗರ್ಭಿಣಿ, ಗಂಡ ವಿಧಿವಶವಾದಾಗ ಬದುಕು ಆಕೆಗೆ ಪಾಠ ಕಲಿಸಿತ್ತು! ಇಂದು ಅಮೆರಿಕನ್ನರ ಮೆಚ್ಚುಗೆ ಗಳಿಸಿದ್ದಾರೆ!
ಆಕೆಗೆ ಮದುವೆಯಾಗಿ ಆಗಷ್ಟೇ ಏಳು ತಿಂಗಳ ಗರ್ಭಿಣಿ ಈ ಸಂದರ್ಭದಲ್ಲಿ ಗಂಡ ಮೃತಪಡುತ್ತಾರೆ. ಇದಾದ ಬಳಿಕ ದಿಕ್ಕೇ ತೋಚದಾದ ಮಹಿಳೆ ಜೀವನವೇ ನಿಂತು ಹೋಯ್ತು ಅಂತಾ ಶಾಕ್ ಗೆ ಒಳಗಾಗಿ ಬಿಡ್ತಾಳೆ. ಆದ್ರೇ ಈ ಶಾಕ್ ನಿಂದ ಹೊರ ಬಂದು ಮೂರನೇ ಕ್ಲಾಸ್ ಪಾಸ್ ಆಗಿದ್ದ ಆಕೆ ಶುರು ಮಾಡಿದ್ದು ತಾನೇ ಕಲ್ತಿದ್ದ ಕಸುಬು. ಕೌದಿ ಹೊಲಿಯಲು ಆರಂಭಿಸಿದ ಆಕೆ ಇದೀಗ ವರ್ಷಕ್ಕೆ 50-60 ಲಕ್ಷ ರೂಪಾಯಿ ದುಡಿಯುವ ಹೆಣ್ಣು …
Read More »ಅಂಜಲಿ ನಿಂಬಾಳ್ಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅನಂತ್ ಕುಮಾರ್ ಹೆಗಡೆ
ಬೆಳಗಾವಿ, ಮಾ.8: ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಅವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಚುನಾವಣೆಗೆ ಸ್ಪರ್ಧಿಸಿದರೆ ಎಂದರೆ ಕರಿಮಣಿ ಮಾಲೀಕ ನಾನಲ್ಲಾ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲ. ಕಾಂಗ್ರೆಸ್ನಲ್ಲಿದ್ದ ಪದಾಧಿಕಾರಿಗಳು ಹೋಗಿ ನೀವು ನಿಲ್ಲಿರಿ ಅಂದರೆ ಕರಿಮನಿ ಮಾಲೀಕ ನಾನಲ್ಲಾ ಎಂದು …
Read More »ನೀರಾವರಿ ಭರವಸೆ ನೀಡಿದರೆ ಕರ್ನಾಟಕಕ್ಕೆ ಸೇರಲು ಸಿದ್ಧ ಎಂದ ಮಹಾರಾಷ್ಟ್ರದ ಜತ್ತ ತಾಲೂಕಿನ ರೈತ ಮುಖಂಡರ ನಿಯೋಗ
ಬೆಳಗಾವಿ, : ಮಹಾರಾಷ್ಟ್ರದ ಜತ್ತ ತಾಲೂಕಿನ ರೈತ ಮುಖಂಡರ ನಿಯೋಗವು ಬೆಳಗಾವಿಯ (Belagavi) ಅಥಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಭೇಟಿಯಾಗಿ ನೀರಿನ ಸಮಸ್ಯೆ ಸರಿಪಡಿಸುವಂತೆ ಮನವಿ ಪತ್ರವನ್ನು ಸಲ್ಲಿಸದೆ. ನೀರಾವರಿ ಭರವಸೆ ನೀಡಿದರೆ ಕರ್ನಾಟಕಕ್ಕೆ ಸೇರಲು ಸಿದ್ಧ ಎಂದು ಅವರು ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮಹಾರಾಷ್ಟ್ರದ ಗಡಿ ಗ್ರಾಮಗಳ ಹೊಲಗಳಿಗೆ ರಾಜ್ಯದ ನೀರಾವರಿ ಯೋಜನೆಗಳಿಂದ ಸ್ವಲ್ಪ ನೀರು ಬಿಡುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ದಯವಿಟ್ಟು ನಮಗೆ ನೀರು ಕೊಡಿ …
Read More »ಅಸಲಿಗೆ ರಾಜಕೀಯವೆಂದರೆ ಕುತಂತ್ರ, ಒಬ್ಬರು ಮತ್ತೊಬ್ಬರನ್ನು ತುಳಿಯುವುದು ಎಲ್ಲ ಪಕ್ಷಗಳಲ್ಲಿ ನಡೆಯುತ್ತದೆ :ಸತೀಶ್ ಜಾರಕಿಹೊಳಿ,
ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ದಲಿತ ಮುಖ್ಯಮಂತ್ರಿಗಾಗಿ (Dalit CM) ಬೇಡಿಕೆ ಇಂದು ನಿನ್ನೆಯದಲ್ಲ, ದಶಕಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು. ಈ ವಿಷಯದಲ್ಲಿ ತಮ್ಮ ಪಕ್ಷ 99 ರವರೆಗೆ ಬಂದು ಔಟಾಗಿಬಿಡುತ್ತದೆ, ಸೆಂಚುರಿ (century) ಬಾರಿಸಲ್ಲ ಎಂದು ನಗುತ್ತಾ ಹೇಳಿದರು. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ಮತ್ತೊಮ್ಮೆ ತೇಲಿಬಿಟ್ಟಿರುವುದರಿಂದ ದಲಿತ ಸಿಎಂ ವಿಷಯವನ್ನು ಮುನ್ನೆಲೆಗೆ ತರಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ …
Read More »ರಸ್ತೆ ಅಪಘಾತದಲ್ಲಿ ಮರಿ ಮಂಗ ಸಾವು
ಘಟನೆ ನೋಡಿದ ಇನ್ನಿತರೆ ವಾಹನ ಸವಾರರು ಅಪಘಾತ ಮಾಡಿ, ಮರಿ ಕೋತಿಯ ಸಾವಿಗೆ ಮತ್ತು ತಾಯಿ ಕೋತಿ ಗಾಯಗೊಳ್ಳುವಂತೆ ಮಾಡಿದ ಕಾರು ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದರು. ಅಪಘಾತವಾದ ಬಳಿಕ ಕಾರು ನಿಲ್ಲಿಸಿ ಕೋತಿಯನ್ನ ಆರೈಕೆ ಮಾಡುವ ಕೆಲಸ ಮಾಡಬೇಕಿತ್ತು. ಮೃತಪಟ್ಟಿದ್ದರೆ ಅಂತ್ಯಸಂಸ್ಕಾರ ಆದ್ರೂ ಮಾಡುವ ಕೆಲಸ ಮಾಡಬೇಕಿತ್ತು ಅಂತಾ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಒಟ್ಟೊಟ್ಟಿಗೆ ಹೊರಟಿದ್ದರು. ಆದರೆ ರಸ್ತೆ ದಾಟುತ್ತಿದ್ದ …
Read More »ರಾಹುಲ್ ಗಾಂಧಿ ನಾಯಿ ತಿನ್ನದ ಬಿಸ್ಕತ್ತು ಕಾರ್ಯಕರ್ತರಿಗೆ ನೀಡುತ್ತಾರೆ: ಗೋವಾ ಸಿಎಂ
ಚಿತ್ರದುರ್ಗ, ಮಾರ್ಚ್ 7: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ರಾಹುಲ್ ಗಾಂಧಿ (Rahul Gandhi) ನಾಯಿಯನ್ನು ಜತೆಗೆ ಕರೆದೊಯ್ಯುತ್ತಾರೆ. ನಾಯಿ ತಿನ್ನದ ಬಿಸ್ಕತ್ತು ಕಾರ್ಯಕರ್ತರಿಗೆ ನೀಡುತ್ತಾರೆ ಎಂದು ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ವಾಗ್ದಾಳಿ ಮಾಡಿದ್ದಾರೆ. ಲೋಕಸಭಾ ಕ್ಷೇತ್ರದ ಬಿಜೆಪಿ ಭೂತ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯ ಸಂಗತಿ. ರೈತರಿಗೆ ನೀಡುವ ಸಬ್ಸಿಡಿ ಮತ್ತಿತರೆ ಯೋಜನೆಗಳು …
Read More »ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೇದಾರ್
ಧಾರವಾಡ, ಮಾ.07: ಜಿಲ್ಲೆಯ ಕಲಘಟಗಿ ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಶಿರಸ್ತೇದಾರ್ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಭೂ ನ್ಯಾಯ ಮಂಡಳಿ ಆದೇಶದಂತೆ ಖಾತೆ ಬದಲಿಸಿಕೊಡಲು ರೈತ ಮಲ್ಲಿಕಾರ್ಜುನ ಕುರುಬರ ಎಂಬಾತನ ಬಳಿ 45 ಸಾವಿರ ರೂ. ಲಂಚ ಪಡೆಯುವಾಗ ಕಲಘಟಗಿ ತಹಶೀಲ್ದಾರ್ ಕಚೇರಿ ಶಿರಸ್ತೆದಾರ ಸುರೇಶ್ ಅಡವಿ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
Read More »ಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ಬಸವಕಲ್ಯಾಣದಲ್ಲಿ ಸನ್ಮಾನ
ಬೀದರ್: ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪಟ್ಟಣದ ಥೇರ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದಿಸಲಾಯಿತು. ಬಸವಕಲ್ಯಾಣ ಅನುಭವ ಮಂಟಪ ವಿಶ್ವಬಸವ ಧರ್ಮ ಟ್ರಸ್ಟ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಮಾಡಲಾಯಿತು.
Read More »
Laxmi News 24×7