Breaking News

2000 ರೂ ಲಂಚ: ಎಸಿಬಿ ಬಲೆಗೆ ಬಿದ್ದ ಎಫ್ ಡಿಸಿ

Spread the love

ಬೆಳಗಾವಿ – ಹೆಚ್ಚುವರಿ ವೇತನ ಬಡ್ತಿ ಆದೇಶಕ್ಕಾಗಿ 2 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಆರೋಗ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕನೋರ್ವ ಎಸಿಬಿ ಬಲೆಗೆ ಬಿದ್ದಿದ್ದಾನೆ.
ದಿನಾಂಕ: 14.07.2022 ರಂದು ಫಿಲ್ಯಾದಿ ಸಂತೊಷ ಚೌದರಿ (ಸಾಃ ಮನೆ ನಂ.830, ಗುನ್ಯಾಳಕರ ಕಲ್ಯಾಣ ಮಂಟಪ ರೊಡ್, ರಹೀಮ್ ನಗರ, ವಿಜಯಪೂರ) ಇವರು ಎಸಿಬಿ ಪೊಲೀಸ್ ಠಾಣೆ ಬೆಳಗಾವಿಗೆ ಹಾಜರಾಗಿ ತಮ್ಮ ಪಿರ್ಯ್ಯಾದಿ ನೀಡಿದ್ದರಲ್ಲಿ, ಫಿರಾದಿಯ ತಾಯಿ ಕೆ.ಎಸ್.ಕುಳಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಗೋಠ ತಾ: ಜಮಖಂಡಿ ಜಿಲ್ಲೆ: ಬಾಗಲಕೋಟ ರವರಿಗೆ ಸತತವಾಗಿ 30 ವರ್ಷಗಳ ಸೇವೆಯನ್ನು ಸಲ್ಲಿಸಿರುವದಕ್ಕೆ ಒಂದು ಹೆಚ್ಚುವರಿ ವೇತನ ಬಡ್ತಿ ಮಂಜೂರು ಆದೇಶ ಮಾಡಿಸಿದ್ದರ ಕುರಿತು ಆಪಾದಿತರಾದ ಬೀಮರಾವ್ ಈರಪ್ಪ ಮಾದರ, ಪ್ರಥಮ ದರ್ಜೆ ಸಹಾಯಕ, ವಿಭಾಗೀಯ ಸಹ ನಿರ್ದೇಶಕ ಕಚೇರಿ, ಆಡಳಿತಾಧಿಕಾಗಳು ವಿಭಾಗೀಯ ಸಹ ನಿರ್ದೇಶಕರ ಕಛೇರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಳಗಾವಿ ವಿಭಾಗ, ಬೆಳಗಾವಿ ಇವರು ಫಿಲ್ಯಾದಿಯಿಂದ ರೂ.2,000/-ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ದಿನಾಂಕ 14.07.2022 ರಂದು ಆಪಾದಿತ ಬೀಮರಾವ್ ಈರಪ್ಪ ಮಾದರ, ಪ್ರಥಮ ದರ್ಜೆ ಸಹಾಯಕ, ವಿಭಾಗೀಯ ಸಹ ನಿರ್ದೇಶಕ ಕಚೇರಿ, ಆಡಳಿತಾಧಿಕಾಗಳು ವಿಭಾಗೀಯ ಸಹ ನಿರ್ದೇಶಕರ ಕಛೇರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಳಗಾವಿ ವಿಭಾಗ, ಬೆಳಗಾವಿ ಇವರು ಈ ದಿವಸ ಫಿಲ್ಯಾದಿಯಿಂದ ರೂ.2,000/-ಗಳ ಲಂಚದ ಹಣವನ್ನು ಪೋನ್-ಪೇ ಮುಖಾಂತರ ಸ್ವೀಕರಿಸಿದ್ದು, ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ನಂತರ ಆಪಾದಿತನ ಮೊಬೈಲ್ ಫೋನ್ ಅನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ತನಿಖೆ ಮುಂದುವರೆದಿರುತ್ತದೆ.
ಬಿ.ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಪಿರ್ಯಾದಿಯವರು ಈ ಬಗ್ಗೆ ನೀಡಿದ ದೂರನ್ನು ಜೆ.ಎಮ್. ಕರುಣಾಕರ ಶೆಟ್ಟಿ, ಪೊಲೀಸ್ ಉಪಾಧೀಕ್ಷಕರವರು ದಾಖಲಿಸಿಕೊಂಡಿರುತ್ತಾರೆ. .ಎ.ಎಸ್.ಗೂದಿಗೊಪ್ಪ, ಪೊಲೀಸ್ ನಿರೀಕ್ಷಕರು ಹಾಗೂ ಬೆಳಗಾವಿ ಎಸಿಬಿ ಠಾಣೆಯ ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.


Spread the love

About Laxminews 24x7

Check Also

ರಾಜ್ಯಪಾಲರಿಗೆ ಕಡತ ರವಾನಿಸಿದ ಸರ್ಕಾರ ಬಿಎಸ್​​ವೈಗೆ ಢವಢವ ಶುರು

Spread the loveಬೆಂಗಳೂರು,   ಭ್ರಷ್ಟಾಚಾರ ದೂರಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ