ಬೆಂಗಳೂರು – ಕೊರೋನಾ ಕಾಯಿಲೆ ಹೋರಾಟದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರುವುದರಿಂದ ನೇಕಾರ ಪರಿಸ್ಥಿತಿ ದುರಸ್ತವಾಗಿದ್ದು, ನೇಕಾರಿಕೆ ಉದ್ಯೋಗದ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರಿದೆ.
ಇದರಿಂದಾಗಿ ನೇಕಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಂದು 12 ಗಂಟೆಗೆ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ನೇಕಾರರ ನಿಯೋಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ನೀಡಲಿದೆ.
ನೇಕಾರರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು 12 ಗಂಟೆಗೆ ಸಭೆ ನಡೆಸಿ, ಪ್ರಚಲಿತ ನೇಕಾರರ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಚರ್ಚೆ ನಡೆಸಲಿದ್ದಾರೆ.
