Breaking News

ಮನ್ ಕಿ ಬಾತ್ ಗೆ ಶತಕದ ಸಂಭ್ರಮ

Spread the love

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಭಾಷಣಕ್ಕೆ ಶತಕದ ಸಂಭ್ರಮ. ಕೋಟ್ಯಂತರ ಜನರ ಮನಗೆದ್ದಿರುವ ಪ್ರಧಾನಿ ಮೋದಿಯವರ ಮನದ ಮಾತು 100ನೇ ಕಂತಿನ ವಿಶೇಷ ರೆಡಿಯೋ ಕಾರ್ಯಕ್ರಮ ಪ್ರಸಾರವಾಗಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಚುನಾವಣ ಪ್ರಚಾರದ ನಿಟ್ಟಿನಲ್ಲಿ ಕರ್ನಾಟಕದ ಪ್ರವಾಸದಲ್ಲಿರುವುದು ವಿಶೇಷ.

2014ರ ಅಕ್ಟೋಬರ್ 4ರಂದು ಪ್ರಧಾನಿ ಮೋದಿಯವರ ಮನ್ ಕೀ ಬಾತ್ ರೆಡಿಯೋ ಕಾರ್ಯಕ್ರಮ ಆರಂಭವಾಯಿತು. ಮನ್ ಕೀ ಬಾತ್ ನನಗೆ ಒಂದು ಕಾರ್ಯಕ್ರಮವಲ್ಲ, ಅದು ಒಂದು ಆಸ್ತಾ, ವೃತ, ಪೂಜೆ ಇದ್ದಂತೆ. ಮನ್ ಕೀ ಬಾತ್ ಈಶ್ವರಿ ರೂಪವಾದ ಜನರ ಪೂಜೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮನ್ ಕೀ ಬಾತ್ ನ 100ನೇ ಪ್ರಸಾರಕ್ಕೆ ನಾವು ತಲುಪುತ್ತಿದ್ದೇವೆ. ಈ ಮನ್ ಕೀ ಬಾತ್ ನಲ್ಲಿ ಮಾತನಾಡುವಾಗ ನಾನು ಸಾಕಷ್ಟು ಭಾರಿ ಭಾವುಕನಾಗಿದ್ದೇನೆ. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಯಿತು. ಸಮಾಜದ ಅನೇಕ ನಿಜವಾದ ಹೀರೋಗಳನ್ನು ನೆನೆಯಲು ಇದೊಂದು ಉತ್ತಮ ವೇದಿಕೆ. ಮನ್ ಕೀ ಬಾತ್ ಮೂಲಕ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಯಿತು. ಇದರಿಂದ ನಾರಿಶಕ್ತಿಯ ಅನಾವರಣವಾಯಿತು. ಹರ್ಯಾಣದ ಸುನೀಲ್ ಅವರ ಸೆಲ್ಫೀ ವಿತ್ ಬೇಟಿ ಅಭಿಯಾನ ಈ ವೇಳೆ ನೆನೆಪಿಸಿಕೊಳ್ಳಲೇಬೇಕು. ಅವರ ಅಭಿಯಾನಕ್ಕೆ ದೇಶಾದ್ಯಂತ ಸಾಕಷ್ಟು ಪ್ರಶಂಸೆಗಳು ಬಂದವು.

ಮನ್ ಕೀ ಬಾತ್ ಮೂಲಕ ಸ್ವಸಹಾಯ ಮಹಿಳಾ ಸಂಘಗಳು, ಯುವ ಉದ್ಯಮಿಗಳ ಜೊತೆ ಸಂವಾದ ನಡೆಸಲಾಯಿತು. ಆತ್ಮನಿರ್ಬರ್ ಯೋಜನೆ ಕುರಿತು ದೇಶದ ಯುವಕರಿಗೆ ಮಾಹಿತಿ ನೀಡಲಾಯಿತು. ಶಿಕ್ಶಹ್ನ, ವೈದ್ಯಕೀಯ ಸೌಲಭ್ಯ, ಜಲ ಸಂರಕ್ಷಣೆ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಸಲಾಯಿತು. ಸ್ಥಳೀಯ ಉದ್ಯಮಿಗಳಿಗೆ ಉತ್ತೇಜನ ನೀಡಲಾಯಿತು, ಗೊಂಬೆಗಳ ತಯಾರಿಕೆಗೆ ಪ್ರೋತ್ಸಾಹ ನೀಡಲಾಯಿತು. ಅಷ್ಟೇ ಅಲ್ಲ ಸ್ವಚ್ಛ ಭಾರತಕ್ಕೆ ಮೈಲುಗಲ್ಲು ದೊರೆಯಿತು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!!

Spread the love ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!! ದೇಶದಲ್ಲಿನ ಎಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ