ಅಥಣಿ ಮತಕ್ಷೇತ್ರದ ವಿವಿಧ ಗ್ರಾಮಗಳ ಪಂಚಮಸಾಲಿ ಸಮಾಜದ ಮುಖಂಡರ ಸಭೆಯನ್ನು ಅಥಣಿಯ ಶಿವಣಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ದಿಲ್ಲಿಗೆ ಮೋದಿ ಅಥಣಿಗೆ ಸವದಿ ಘೋಷಣೆ ಹಾಕಿದ ಪಂಚಮಸಾಲಿ ಮುಖಂಡರು. ಈ ವೇಳೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ2023 ಚುನಾವಣೆ ಈಗ ಘೋಷಣೆ ಆಗಿದೆ. ಅಥಣಿ ಮತಕ್ಷೇತ್ರದ ಪಂಚಮಸಾಲಿ ಸಮಾಜದ ಸಭೆಗೆ ನನನ್ನು ಕರೆದಿದ್ದರು.
ಮೂರನೆ ತಾರೀಖು ಈ ಸಭೆ ನಿಗದಿಯಾಗಿತ್ತು. ಆದರೆ 224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಎರಡು ದಿನಗಳ ನಂತರ ಈಗ ಸಭೆ ನಡೆಯುತ್ತಿದೆ.
ಮಾಧ್ಯಮಗಳಲ್ಲಿ ನಿರಂತರವಾಗಿ ಅಥಣಿ ಮತಕ್ಷೇತ್ರದ ಸುದ್ದಿ ಬರುತ್ತಿದೆ. ಈಗಾಗಲೇ ಲಕ್ಷ್ಮಣ ಸವದಿ ಮತ್ತು ಕುಮಠಳ್ಳಿ ವಿಚಾರವಾಗಿ ಹಲವು ಸುದ್ದಿಗಳು ಪ್ರಸಾರವಾಗಿವೆ. ನಮ್ಮದು ರಾಷ್ಟ್ರೀಯ ಪಕ್ಷ ಆಯ್ಕೆ ಪ್ರಕ್ರಿಯೆ ಕೋರ್ ಕಮೀಟಿಯಲ್ಲಿ ನಡೆಯುತ್ತದೆ. ಯಾವ ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿ ಮಾಡಿದರೆ ಗೆಲ್ಲುತ್ತಾರೆ ಅನ್ನುವ ಚರ್ಚೆಯನ್ನು ಅಲ್ಲಿ ಮಾಡುತ್ತಾರೆ.
ಪ್ರತಿ ಒಂದು ಕ್ಷೇತ್ರಕ್ಕೆ ಮೂರು ಜನರಂತೆ ಪಟ್ಟಿ ಮಾಡುತ್ತಾರೆ. ಅದು ದೆಹಲಿಯಲ್ಲಿ ಚರ್ಚೆ ಆಗುತ್ತದೆ. ಎರಡು ಮೂರು ದಿನದಲ್ಲಿ ಅಂತಿಮ ಅಭ್ಯರ್ಥಿಗಳ ಚರ್ಚೆ ಆಗುತ್ತದೆ. ನಿನ್ನೆ ಸಭೆಯಾದ ಸಂಧರ್ಭದಲ್ಲಿ ನಾನು ಕಮೀಟಿಯ ಸಭೆಯಲ್ಲಿ ಇರಬೇಕೋ ಅಥವಾ ಬೇಡವೊ ಅನ್ನುವ ಸಮಸ್ಯೆ ಎದುರಾದಾಗ ನಾನು ಹೊರಗೆ ಬರಬೇಕು ಅಂದಾಗ ಅಲ್ಲಿಯೆ ಇರುವಂತೆ ತಿಳಿಸಿದರು.
ಅಥಣಿ ಟಿಕೆಟ್ ವಿಷಯ ಕಗ್ಗಂಟಾಗಿದೆ ಎಂದಾಗ ನಾನು ಹೇಳಿದೆ ಮಹೇಶ್ ಕುಮಠಳ್ಳಿ ಬಗ್ಗೆ ನನಗೆ ದ್ವೇಷವಿಲ್ಲ.
ಒಂದು ವೇಳೆ ಅವರು ಸೋತರೆ ಅವರ ಸೋಲಿಗೆ ನಾನು ನೇರ ಕಾರಣ ಎನ್ನುವ ಕೆಲವು ಘಾತುಕ ಶಕ್ತಿಗಳು ಜಿಲ್ಲೆಯಲ್ಲಿವೆ.
ಇದರಿಂದಾಗಿ ಪಕ್ಷ ನನ್ನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ.ನನ್ನನ್ನು ಅಭ್ಯರ್ಥಿ ಆಗಿ ಮಾಡಿದರೆ ಜನರು ಖಂಡಿತವಾಗಿ ಆಯ್ಕೆ ಮಾಡುತ್ತಾರೆ ಎಂದು ವರಿಷ್ಟರಿಗೆ ತಿಳಿಸಿದ್ದೇನೆ. ಪಕ್ಷದ ಸಿದ್ದಾಂತ ನೋಡಿ ನಾನು ಪಕ್ಷಕ್ಕೆ ಬಂದಿರುವ ಬಗ್ಗೆ ಅವರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇನೆ.
ನನ್ನ ವಿಚಾರಕ್ಕೆ ವಿರುದ್ದ ಅಭ್ಯರ್ಥಿಗಳನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಗೆಲ್ಲಿಸುವ ಕೆಲಸ ಮಾಡಿದ್ದೇನೆ. ನಾನು ಎಂದಿಗೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ.
ಪಕ್ಷವನ್ನು ತಾಯಿ ಎಂದು ಭಾವಿಸಿದ್ದೇನೆ. ಅಂತಹ ತಾಯಿ ವಿಷ ಕೂಡಿಸುವದಿಲ್ಲ ಅನ್ನುವ ವಿಶ್ವಾಸವಿದೆ.
ನಾನು ರಾಜಕಾರಣದಲ್ಲಿ ಸುಮಾರು ಮುವತ್ತು ವರ್ಷಗಳಿಂದ ಇದ್ದೇನೆ.ಯಾರು ಹೇಗೆ ಎಂದು ಅರಿಯುವ ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ. ಪಂಚಮಸಾಲಿ ಸಮಾಜದ ಯಾರೂ ಕೂಡ ನನಗೆ ಮೋಸ ಮಾಡಿಲ್ಲ. ನಿಮ್ಮ ಆಶೀರ್ವಾದದಿಂದ ವಿಧಾನಸಭೆಯ ಮೂರನೆ ಮಹಡಿಯಲ್ಲಿ ಕೂಡುವ ಅವಕಾಶ ಸಿಕ್ಕಿದೆ.ನಿಮ್ಮ ಋಣವನ್ನು ಜೀವ ಇರುವವರೆಗೂ ತೀರಿಸಲಾಗುವದಿಲ್ಲ.ಕೆಲವು ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಅಪಪ್ರಚಾರ ನಡೆದಿದೆ.
ಬೆಳಗಾವಿಯಲ್ಲಿ ಸುವರ್ಣ ಸೌಧ ಎದುರು ಕೂಡಲಸಂಗಮ ಶ್ರೀ ಪ್ರತಿಭಟನೆ ಕುಳಿತಾಗ ಅವರಿಗೆ ಬಿಎಸ್ ವೈ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆದಿತ್ತು.
ಆಗ ನಾನೊಂದು ಮಾತು ಹೇಳಿದ್ದೆ ಮಾಡುವ ಇಚ್ಚಾ ಶಕ್ತಿ ಇದ್ದರೆ ಎಲ್ಲವೂ ಸಾಧ್ಯ ಎಂದಿದ್ದೆ ಯಾರೋ ಒಬ್ಬರು ಹೋಗಿ ಆಗ ಲಕ್ಷ್ಮಣ ಸವದಿ ವಿರೋಧಿಸಿದ್ದಾರೆ ಎಂದಿದ್ದರು. ಆಗ ಪಂಚಮಸಾಲಿ ಶ್ರೀಗಳು ನನ್ನ ಬಗ್ಗೆ ಆಕ್ರೋಶಗೊಂಡಿದ್ದರು.ನಾನು ಇವತ್ತು ಶಿವಯೋಗಿಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ.
ಪಂಚಮಸಾಲಿ ಸಮಾಜಕ್ಕೆ ವಿಶೇಷ ಸ್ಥಾನಮಾನ ಕೊಡಬೇಕು ಅಂತ ಮೊದಲು ಹೇಳಿದವನೆ ನಾನು. ಕೊನೆಗೆ ಈಗ ಮಹಾರಾಷ್ಟ್ರ ಮಾದರಿಯಲ್ಲಿ ಮೀಸಲಾತಿ ನಿಗದಿ ಮಾಡಲಾಗಿದೆ.
ಮುಸ್ಲಿಂ ಸಮಾಜದ ಬಂಧುಗಳು ಕೂಡ ಕೆಲ ದಿನಗಳ ಹಿಂದಷ್ಟೇ ಸಭೆ ನಡೆಸಿ ನಾನು ಸ್ಪರ್ಧೆ ಮಾಡುವಂತೆ ತಿಳಿಸಿದ್ದಾರೆ.ಈ ಬಾರಿ ನನಗೆ ವಿಶೇಷ ಬೆಂಬಲ ಅವರಿಂದ ವ್ಯಕ್ತವಾಗಿದೆ.ನೂರಕ್ಕೆ 99 ಭಾಗ ನನ್ನನ್ನು ಪಕ್ಷ ಕೈ ಬಿಡುವದಿಲ್ಲ ಎಂಬ ನಂಬಿಕೆ ಇದೆ. ನೀವೆಲ್ಲ ನನ್ನೊಂದಿಗೆ ಇರಬೇಕು. ಬಹಳ ಜನರು ಟಿಕೆಟ್ ಸಿಗದಿದ್ದರೆ ಪಕ್ಷೇತರ ನಿಲ್ಲುವಂತೆ ತಿಳಿಸಿದ್ದಾರೆ.ಆದರೆ ಆ ಸ್ಥಿತಿ ನನಗೆ ಬರುವದಿಲ್ಲ ಎಂಬ ನಂಬಿಕೆ ಇದೆ. ಇಪ್ಪತ್ತು ವರ್ಷಗಳ ನಿಷ್ಠಾವಂತ ಕಾರ್ಯಕರ್ತರ ಪಟ್ಟಿಯಲ್ಲಿ ನನ್ನ ಹೆಸರು ಗುರುತಿಸಿಕೊಳ್ಳಲು ನನಗೆ ಹೆಮ್ಮೆ ಇದೆ.ನನಗೆ ದೃಢವಾದ ವಿಶ್ವಾಸವಿದೆ. ಪ್ರಾಮಾಣಿಕ ಮತ್ತು ನಿಷ್ಠಾವಂತರನ್ನು ಭಾಜಪಾ ಕೈ ಬಿಡುವದಿಲ್ಲ.ಪಕ್ಷದ ವರಿಷ್ಟರಿಗೆ ನನಗಿರುವ ಐದು ವರ್ಷ ಅವಧಿ ಅವರಿಗೆ ಕೊಡಿ ಮತ್ತು ಈ ಬಾರಿ ಟಿಕೆಟ್ ನನಗೆ ಕೊಡಿ ಎಂದಿದ್ದೇನೆ. ಬಹುಶ ಹತ್ತನೆ ತಾರೀಖಿನ ತನಕ ಒಂದು ನೀರ್ಣಯ ಬರಬಹುದು.ಅಂದು ಹೆಚ್ವಿನ ಸಂಖ್ಯೆಯಲ್ಲಿ ನಾಮಿನೇಷನ್ ಗೆ ನೀವು ಎಲ್ಲರೂ ಬರಬೇಕು ಎಂದ ಲಕ್ಷ್ಮಣ ಸವದಿ ಮನವಿ ಮಾಡಿಕೊಂಡರು.