Breaking News

502 ನಾಮಪತ್ರಗಳು ತಿರಸ್ಕೃತ, 3130 ಅಭ್ಯರ್ಥಿಗಳ ಉಮೇದುವಾರಿಕೆ ಕ್ರಮಬದ್ಧ: ಚುನಾವಣಾ ಆಯೋಗ ಮಾಹಿತಿ

Spread the love

ಬಿಜೆಪಿ 224, ಕಾಂಗ್ರೆಸ್ 223, ಜೆಡಿಎಸ್ 211, ಎಎಪಿ 212, ಬಿಎಸ್‌ಪಿ 137, ಸಿಪಿಐಎಂ 4, ಎನ್‌ಸಿಪಿ 4 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧ ಆಗಿವೆ. ಮಾನ್ಯತೆ ಪಡೆಯದ ಪಕ್ಷಗಳ 736 ಅಭ್ಯರ್ಥಿಗಳು, 1379 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಸರಿಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

 

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಲ್ಲಿಕೆಯಾಗಿದ್ದ ಉಮೇದುವಾರಿಕೆಯ ಪರಿಶೀಲನೆಯಲ್ಲಿ 502 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ನಿನ್ನೆ ನಾಮಪತ್ರ ಸಲ್ಲಿಕೆ ಪರಿಶೀಲನೆ ಕಾರ್ಯವು ತಡರಾತ್ರಿಯವರೆಗೆ ನಡೆದಿತ್ತು. ಸವದತ್ತಿ-ಯಲ್ಲಮ್ಮ, ಔರಾದ್, ಹಾವೇರಿ, ರಾಯಚೂರು ಮತ್ತು ಶಿವಾಜಿನಗರ ಈ ಐದು ಕ್ಷೇತ್ರದಲ್ಲಿ ನಾಮಪತ್ರಗಳ ಪರಿಶೀಲನೆ ತಡರಾತ್ರಿಯವರೆಗೆ ನಡೆದ ಹಿನ್ನೆಲೆ ಇಂದು ಆಯೋಗವು ಕ್ರಮಬದ್ಧವಾಗಿರುವ ನಾಮಪತ್ರಗಳ ಮಾಹಿತಿ ನೀಡಿದೆ.

ರಾಜ್ಯದ 224 ಕ್ಷೇತ್ರಗಳಲ್ಲಿ ನಾಮಪತ್ರಗಳ ಪರಿಶೀಲನೆಯ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಗುರುವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಾಗ 3632 ಅಭ್ಯರ್ಥಿಗಳಿಂದ ಒಟ್ಟು 5102 ನಾಮಪತ್ರ ಸಲ್ಲಿಕೆಯಾಗಿದ್ದವು. 3632 ಅಭ್ಯರ್ಥಿಗಳ ಪೈಕಿ 3130 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. 502 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಆಯೋಗ ತಿಳಿಸಿದೆ.

ಕ್ರಮಬದ್ಧವಾಗಿರುವ 3130 ಅಭ್ಯರ್ಥಿಯ ನಾಮಪತ್ರಗಳ ಪೈಕಿ 2890 ಪುರುಷ ಅಭ್ಯರ್ಥಿಗಳ ನಾಮಪತ್ರಗಳು, 239 ಮಹಿಳಾ ಅಭ್ಯರ್ಥಿಗಳ ನಾಮಪತ್ರಗಳಾಗಿವೆ. ಒಂದು ಇತರೆ ಅಭ್ಯರ್ಥಿಯ ನಾಮಪತ್ರವಾಗಿದೆ.
ಬಿಜೆಪಿ 224, ಕಾಂಗ್ರೆಸ್ 223, ಜೆಡಿಎಸ್ 211, ಎಎಪಿ 212, ಬಿಎಸ್‌ಪಿ 137, ಸಿಪಿಐಎಂ 4, ಎನ್‌ಸಿಪಿ 4 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ನೋಂದಣಿ ಆಗಿರುವ ಮಾನ್ಯತೆ ಪಡೆಯದ ಪಕ್ಷಗಳ 736 ಅಭ್ಯರ್ಥಿಗಳು ಮತ್ತು 1379 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಸರಿಯಾಗಿವೆ ಎಂದು ಆಯೋಗ ತಿಳಿಸಿದೆ.

ಸೋಮವಾರ (ಏ.24) ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ನಾಮಪತ್ರಗಳ ವಾಪಸ್ ತೆಗೆದುಕೊಳ್ಳುವ ಅವಧಿಯು ಮುಕ್ತಾಯವಾದ ಬಳಿಕ ಕಣದಲ್ಲಿರುವ ಅಧಿಕೃತ ಅಭ್ಯರ್ಥಿಗಳ ಸಂಖ್ಯೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಈಗಾಗಲೇ ಚುನಾವಣಾ ಕಣ ರಂಗೇರಿದ್ದು, ನಾಮಪತ್ರಗಳ ವಾಪಸ್ ತೆಗೆದುಕೊಳ್ಳುವ ಅವಧಿ ಮುಕ್ತಾಯಗೊಂಡ ಬಳಿಕ ಮತ್ತಷ್ಟು ಕಾವು ಪಡೆದುಕೊಳ್ಳಲಿದೆ. ಮೇ 10ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆ ಮೇ 8 ರಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.


Spread the love

About Laxminews 24x7

Check Also

ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಮ್ಮ ಪ್ರಮುಖ ಗುರಿ: ಡಾ.ಭೀಮಶಿ ಜಾರಕಿಹೊಳಿ

Spread the loveಬೆಳಗಾವಿ: ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಮ್ಮ ಪ್ರಮುಖ ಗುರಿಯಾಗಿದ್ದು, ಅದರ ಭಾಗವಾಗಿ ಗುಂಪು ಆರೋಗ್ಯ ವಿಮೆ ಯೋಜನೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ