Breaking News

ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ಇತರ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Spread the love

ನಿಪ್ಪಾಣಿ: ’ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ಇತರ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇತರ ಪಕ್ಷದವರು ನಮ್ಮ ಪಕ್ಷಕ್ಕೆ ಸೇರುವವರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದೆ. ಪಕ್ಷಕ್ಕೆ ಬಂದ ಕಾರ್ಯಕರ್ತರ ಗೌರವ ಕಾಪಾಡುವದೊಂದಿಗೆ ಸಮಾಜದ ಹಾಗೂ ಕ್ಷೇತ್ರದ ಅಭಿವೃದ್ಧಿ ಕುರಿತು ಚಿಂತನೆಯ ವಿಚಾರಗಳನ್ನು ಬಿಂಬಿಸಲಾಗುವುದು’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸ್ಥಳೀಯ ರೋಹಿದಾಸನಗರದಲ್ಲಿ ವಡ್ಡರ ಸಮಾಜದ ಸುಮಾರು ನೂರಕ್ಕೂ ಅಧಿಕ ಹಾಗೂ ಜತ್ರಾಟವೇಸ್‌ನಲ್ಲಿ ಢೋರ ಸಮಾಜದ ಸುಮಾರು ೫೦ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ರಚಿಸಿದ ಸಂವಿಧಾನದಿಂದ ಓರ್ವ ಸಾಮಾನ್ಯ ಮಹಿಳೆಯಾದ ನಾನು ಎರಡು ಬಾರಿ ಸಚಿವೆಯಾಗಲು ಸಾಧ್ಯವಾಗಿದೆ.

ಡಾ. ಬಾಬಾಸಾಹೇಬ ಅಂಬೇಡ್ಕರರ ಸ್ಫೂರ್ತಿಯಿಂದ ಮತ್ತು ಸಂವಿಧಾನದ ಮೂಲಕವೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಜಾತಿ-ಭೇದ ಬದಿಗಿಟ್ಟು ಎಲ್ಲರನ್ನು ಸಮಾನವಾಗಿ ಕೊಂಡೋಯ್ಯಲು ಪ್ರಯತ್ನಿಸಿದ್ದೇನೆ. ಸಮಾಜದ ಯಾವುದೇ ಘಟಕವು ಅಭಿವೃದ್ಧಿ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಶ್ರಮಿಸಿದ್ದೇನೆ. ಆದಾಗ್ಯೂ ಇನ್ನೂ ಎಲ್ಲಿ ಅಭಿವೃದ್ಧಿಯಾಗಿಲ್ಲವೋ ಅಲ್ಲಿ ಅಭಿವೃದ್ಧಿಪಡಿಸಲು ನಾನು ಕಟಿಬದ್ಧನಾಗಿದ್ದೇನೆ’ ಎಂದರು.

ಬಾಳಕೃಷ್ಣ ಮಾತಿವಡ್ಡರ, ಶ್ರೀಕಾಂತ ಮಾತಿವಡ್ಡರ, ಹರೀಶ ಮಾತಿವಡ್ಡರ, ಅನೀಲ ಮಾತಿವಡ್ಡರ, ಉತ್ತಮ ಮಾತಿವಡ್ಡರ, ನಿಲೇಶ ಮಾತಿವಡ್ಡರ, ಅಜಿತ ಮಾತಿವಡ್ಡರ, ದಿನಕರ ಮಾತಿವಡ್ಡರ, ಯಲ್ಲಪ್ಪ ಮಾತಿವಡ್ಡರ, ಮೊದಲಾದವರು ಸೇರಿದಂತೆ ಸುಮಾರು ೫೦ಕ್ಕೂ ಅಧಿಕ ವಡ್ಡರ ಸಮಾಜದ ಬಾಂಧವರು ಸಚಿವೆ ಶಶಿಕಲಾ ಜೊಲ್ಲೆಯವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸದಸ್ಯೆ ಪ್ರಭಾವತಿ ಸೂರ್ಯವಂಶಿ, ಸಮಿತ ಸಾಸನೆ, ಬಂಡಾ ಘೋರ್ಪಡೆ, ಪ್ರಣವ ಮಾನವಿ, ಮಹೇಶ ಸೂರ್ಯವಂಶಿ, ಮೊದಲಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ