Breaking News

ಐದು ಬಾರಿಯ ಚಾಂಪಿಯನ್ ವಿರುದ್ಧ ಆರ್​​ಸಿಬಿ ಭರ್ಜರಿ ಜಯ

Spread the love

ಬೆಂಗಳೂರು: ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಐಪಿಎಲ್​-16ರ ಆರಂಭದಲ್ಲೇ ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಮೂರು ವರ್ಷಗಳ ಬಳಿಕ ಆರ್​ಸಿಬಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯವಾಡಿದ್ದು, ಈ ಸ್ಟೇಡಿಯಮ್​ಗೂ ಗೆಲುವು ಮರುಕಳಿಸಿದೆ.

 

ಮಾಜಿ ನಾಯಕ ವಿರಾಟ್​ ಕೊಹ್ಲಿ (82*ರನ್​, 49 ಎಸೆತ, 6 ಬೌಂಡರಿ, 5 ಸಿಕ್ಸರ್​) ಮತ್ತು ನಾಯಕ ಫಾಫ್​ ಡು ಪ್ಲೆಸಿಸ್​ (73 ರನ್​, 43 ಎಸೆತ, 5 ಬೌಂಡರಿ, 6 ಸಿಕ್ಸರ್​) ಅವರ ದಿಟ್ಟ ಚೇಸಿಂಗ್​ ಸಾಹಸದಿಂದ ಆರ್​ಸಿಬಿ​ ಮುಂಬೈ ಇಂಡಿಯನ್ಸ್​ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿದೆ.

ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ನಿರ್ಧಾರವನ್ನು ಬೌಲರ್​ಗಳು ಆರಂಭದಲ್ಲಿ ಸಮರ್ಥಿಸಿಕೊಂಡರು. ಬಳಿಕ, ಪ್ರಮುಖ ಬ್ಯಾಟರ್​ಗಳ ವೈಫಲ್ಯದ ನಡುವೆ ಯುವ ಬ್ಯಾಟರ್​ ತಿಲಕ್​ ವರ್ಮ (84*ರನ್​, 46 ಎಸೆತ, 9 ಬೌಂಡರಿ, 4 ಸಿಕ್ಸರ್​) ಏಕಾಂಗಿ ಹೋರಾಟದ ಬಲದಿಂದ ಪುಟಿದೆದ್ದ ಮುಂಬೈ ಇಂಡಿಯನ್ಸ್​ ತಂಡ 7 ವಿಕೆಟ್​ಗೆ 171 ರನ್​ ಪೇರಿಸುವಲ್ಲಿ ಯಶಸ್ವಿಯಾಯಿತು. ಪ್ರತಿಯಾಗಿ ಕೊಹ್ಲಿ-ಪ್ಲೆಸಿಸ್​ ಜೋಡಿ ಮುಂಬೈ ಬೌಲರ್​ಗಳನ್ನು ಬೆಂಡೆತ್ತಿ ಮೊದಲ ವಿಕೆಟ್​ಗೆ 148 ರನ್​ಗಳ ಭರ್ಜರಿ ಜತೆಯಾಟ ಆಡುವುದರೊಂದಿಗೆ ಆರ್​ಸಿಬಿ ತಂಡ 16.2 ಓವರ್​ಗಳಲ್ಲೇ 2 ವಿಕೆಟ್​ಗೆ 172 ರನ್​ ಗಳಿಸಿ ತವರು ಪ್ರೇಕ್ಷಕರ ಎದುರು ಗೆಲುವಿನ ಕೇಕೆ ಹಾಕಿತು.


Spread the love

About Laxminews 24x7

Check Also

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು

Spread the loveಸನ್ಮಾನ್ಯ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ