Breaking News

ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್ ಸಿಗದೆ ಇದ್ದಲ್ಲಿ ನಾನು ಕೂಡಾ ರಾಜಕೀಯ ನಿವೃತ್ತಿ ತಗೆದುಕೊಳ್ಳುವೆ:ರಮೇಶ ಜಾರಕಿಹೋಳಿ

Spread the love

ಅಥಣಿ: ಈ ಬಾರಿ ಮತ್ತೆ ಭಾರತೀಯ ಜನತಾ ಪಕ್ಷದಿಂದ ಅಥಣಿ ಕ್ಷೇತ್ರದಿಂದ ಮಹೇಶ ಕುಮಟಳ್ಳಿ ಸ್ಪರ್ದೆ ಮಾಡುವುದು ನಿಶ್ಚಿತ ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ಮಾಜಿ ಸಚಿವ ರಮೇಶ ಜಾರಕಿಹೋಳಿ ಹೇಳಿದ್ದಾರೆ.

ಅಥಣಿ ವಿಶ್ರಾಂತಿ ಗೃಹದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹೇಶ ಕುಮಟಳ್ಳಿ ಮತ್ತು ನಮ್ಮೆಲ್ಲರ ತ್ಯಾಗದಿಂದ ಬಿಜೆಪಿ ಸರಕಾರ ರಚನೆಯಾಗಿದ್ದು ಯಾವುದೇ ಕಾರಣಕ್ಕೂ ಮಹೇಶ ಕುಮಟಳ್ಳಿಯೇ ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಒಂದು ವೇಳೆ ಅವರಿಗೆ ಟಿಕೆಟ್ ಸಿಗದೆ ಇದ್ದಲ್ಲಿ ನಾನು ಕೂಡಾ ರಾಜಕೀಯ ನಿವೃತ್ತಿ ತಗೆದುಕೊಳ್ಳುವೆ ನಾನು ಗೋಕಾಕನಿಂದ ಸ್ಪರ್ಧೆ ಮಾಡಲಾರೆ ಎಂದರು.

ಲಕ್ಷ್ಮಣ ಸವದಿ ಬುದ್ದಿವಂತ ರಾಜಕಾರಣಿ ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಅವರಿಗೆ ಕನಿಷ್ಠ ಜ್ಞಾನ ಇರಬೇಕು ಇನ್ನು ಐದು ವರ್ಷಗಳ ಕಾಲ ಅವರು ವಿಧಾನ ಪರಿಷತ್ ಸದಸ್ಯರಾಗಿ ಮುಂದುವರೆಯಲು ಅವಕಾಶವಿದೆ ಅದು ಬಿಟ್ಟು ವರಿಷ್ಠರ ಹತ್ತಿರ ಟಿಕೇಟ್ ಕೇಳುತ್ತಾನೆ ಎಂಬ ಮಾತು ನನಗೆ ಅಚ್ಚರಿ ಉಂಟುಮಾಡಿದೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಗರಂ ಆಗಿದ್ದಾರೆ.

ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ ಎಂಬ ಅವರ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಅವರಿಗೆ ಯಾರಿಂದ ಧಕ್ಕೆ ಉಂಟಾಗಿದೆ ಗೊತ್ತಿಲ್ಲ, ನನಗೂ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆದರೂ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೆವೆ ಎಂದರು.

ಕೇಂದ್ರ ಸಚಿವ ಅಮೀತ್ ಶಾ ಬಹಳ ದಿನಗಳಿಂದ ಭೇಟಿಯಾಗಿರಲಿಲ್ಲ ಅದಕ್ಕೆ ವಿಶೇಷ ಅರ್ಥ ಕಲ್ಪಿಸ ಬೇಕಿಲ್ಲ ಇದು ನಮ್ಮ ಆಂತರಿಕ ವಿಚಾರ. ಪಕ್ಷದ ಹಿತ ದೃಷ್ಟಿಯಿಂದ ನಡೆದ ವಿಷಯಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಸ್ಥಳೀಯ ಆರ್ ಎಸ್ ಎಸ್ ಮುಖಂಡ ಅರವಿಂದ ದೇಶಪಾಂಡೆ ಮನೆಗೆ ಭೇಟಿ ನೀಡಿರಿರುವದು ಸೌಜನ್ಯ ಭೇಟಿಯಾಗಿತ್ತು ಮತ್ತೆ ಇದೇ ತಿಂಗಳ 28 ರಂದು ತಾಲೂಕಿನ ಅಮ್ಮಾ ಮಹೇಶ್ವರಿ ಏತ ನೀರಾವರಿ ಯೋಜನೆಯ ಭೂಮಿ ಪೂಜಾ ಕಾರ್ಯಕ್ರಮ ಜರುಗಲಿದ್ದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ